ಕಲರ್‌ಫುಲ್‌ ಲೋಕಕ್ಕೆ ಬಂದ ಕಣ್‌ ಕುಕ್ಕುವ ಸುಂದರಿ !

ಮಾಡೆಲಿಂಗ್ ಜಗತ್ತಿನಿಂದ  ಸ್ಯಾಂಡಲ್‌ ವುಡ್‌ ಗೆ ಬಂದ ‘ ಬಾಬಿ’ ಡಾಲ್

ಮಾಡೆಲಿಂಗ್ ಜಗತ್ತಿಗೂ, ಸಿನಿಮಾಕ್ಕೂ ಒಂದ್ರೀತಿ ಅವಿನಾಭಾವ ಸಂಬಂಧ. ಊರಿಗೆ ಬಂದವರು, ನೀರಿಗೆ ಬಾರದಿರುತ್ತಾರಾ ಎನ್ನುವ ಗಾದೆ ಮಾತಿನ ಹಾಗೆ ಮಾಡೆಲಿಂಗ್ ಜಗತ್ತಿನಲ್ಲಿ ಹೆಜ್ಜೆ ಹಾಕಿದವರೆಲ್ಲ ಬಣ್ಣದ ಜಗತ್ತಿಗೆ ಬಂದ ಉದಾಹರಣೆಗಳು ಸಾಕಷ್ಟಿವೆ‌. ಆ ಸಾಲಿಗೀಗ ಹೊಸ ಸೇರ್ಪಡೆ ಮೋಹಕ‌ ತಾರೆ ಜೊಸಿಟ ಅನೂಲ.

ಮಾಡೆಲಿಂಗ್ ಬೆಡಗಿ

ಈಕೆ‌ ಕುಡ್ಲ ಕುವರಿ.‌ ಅಂದ್ರೆ ಕರಾವಳಿ ಸುಂದರಿ.  ಮಂಗಳೂರಿನಲ್ಲಿ ಹುಟ್ಟಿ, ಬೆಳೆದ ಈ ಚೆಲುವೆ ,ಇಷ್ಟು ದಿನ ಮಾಡೆಲಿಂಗ್ ಜಗತ್ತಿನಲ್ಲಿ ಮೈ ಮಾಟ ಪ್ರದರ್ಶಿಸಿದ ಮದನಾರಿ‌. 2017 ರಲ್ಲಿ ಮಿಸ್ ವರ್ಲ್ಡ್‌ ಸೂಪರ್ ಮಾಡೆಲ್ ಸೌತ್ ಏಷಿಯಾ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 2018 ರಲ್ಲಿ ಮಿಸ್ ಗ್ಲೋರಿ ಗ್ಯಾಲಾಕ್ಸಿ ಗೆದಿದ್ದಾರಂತೆ. ಹಾಗೆಯೇ 2019ರಲ್ಲಿ ಮಿಸ್ ಟ್ಯೂರಿಸಂ ವರ್ಲ್ಡ್ ಬ್ರಾಂಡ್ ಅಂಬಾಸಿಡರ್ ಆಗಿಯೂ ಮಾಡೆಲಿಂಗ್ ನಲ್ಲಿ ಹೆಸರು ಮಾಡಿದ್ದಾರಂತೆ. ಅದರ ಪ್ರಭಾವದಿಂದಲೇ ಈಗ ನಟಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಆಗಿದ್ದಾರೆ. ಅಲ್ವಿನ್ ಫ್ರಾನ್ಸಿಸ್ ನಿರ್ದೇಶನದ ‘ಬಾಬಿ’ ಹೆಸರಿನ ಚಿತ್ರವೊಂದಕ್ಕೆ ನಾಯಕಿ ಆಗುವ ಮೂಲಕ ಅವರ ಸಿನಿ ಜರ್ನಿಗೆ ಚಾಲನೆ ಸಿಕ್ಕಿದೆ‌.

ಹಾಟ್‌ ಹಾಟ್ ಹುಡುಗಿ !

ಮಾಡೆಲಿಂಗ್ ನಿಂದಲೇ ಬರಲಿ, ಸೀದಾ ಕಾಲೇಜಿನಿಂದಲೇ ಬರಲಿ, ನಟಿಯರಿಗೆ ಫೋಟೋಶೂಟ್ ಎನ್ನುವುದು ಬಣ್ಣದ ಲೋಕದ ಮೊದಲ ಆಹ್ವಾನ. ಯಾಕಂದ್ರೆ ಆಡಿಷನ್ ಗಳಿಗೆ ಹೋಗಬೇಕಾದ್ರೆ ಹಾಗೊಂದು ಪ್ರೊಪೈಲ್ ಇರಲೇಬೇಕು. ಅದಕ್ಕಾಗಿಯೇ ಜೊಸಿಟ ಅನೂಲ್ ಮಾಡಿಸಿದ ಪೋಟೋಶೂಟ್ ಭರ್ಜರಿಯಾಗಿದೆ.

ಬಾಲಿವುಡ್ ನಟಿಯರಿಗೇನು ತಾನೇನು ಕಮ್ಮಿ ಎನ್ನುವಂತೆ ಕ್ಯಾಮರಾ ಕಣ್ಣಿಗೆ ತಮ್ಮ‌ಮಾದಕ ಮೈ ಮಾಟ ಪ್ರದರ್ಶಿಸಿದ್ದಾರೆ ಅನೂಲ. ಕರಾವಳಿಯ ಈ ಚೆಲುವೆ ಎಂಟ್ರಿಯಲ್ಲೆ ಅಷ್ಟೇಲ್ಲ ಬೋಲ್ಡ್ ಆ್ಯಂಡ್ ಹಾಟ್ ಲುಕ್ ನೀಡಿರುವುದಕ್ಕೆ ಮಾಡೆಲಿಂಗ್ ಜಗತ್ತೇ ದೊಡ್ಡ ವೇದಿಕೆ . ಅದೇ ಅವರನ್ನು ಸಿನಿಮಾ‌ಎಂಬ ಗ್ಲಾಮರ್ ಜಗತ್ತಿಗೂ ಕರೆ ತಂದಿದೆ ಎನ್ನುವುದು ಅಷ್ಟೇ ಸತ್ಯ.

ಸಿನಿಮಾ‌ ನನ್ನ ಬಾಲ್ಯದ ಕನಸು

ಸಿನಿಮಾ ನನ್ನ ಬಾಲ್ಯದ ಕನಸು. ಅದೀಗ ನನಸಾಗಿದೆ. ಅದಕ್ಕೆ ಸೇತುವೆಯಾಗಿದ್ದು ಮಾಡೆಲಿಂಗ್. ಕಾಲೇಜು ದಿನಗಳಿಂದಲೇ ಮಾಡೆಲಿಂಗ್ ಶುರು‌ಮಾಡಿದ್ದೆ. ಆ ಮೂಲಕ ಹಲವು ಕಡೆಗಳಲ್ಲಿನ ರ್ಯಾಂಪ್ ಶೋಗಳಲ್ಲಿ ಭಾಗವಹಿಸಿದೆ‌. ಸ್ಪರ್ಧೆಗಳಲ್ಲೂ ಗೆದ್ದೆ. ಅದು ನನ್ನೊಳಗಿನ ಸಿನಿಮಾ‌ದ ಮೇಲಿನ ಆಸಕ್ತಿಯನ್ನು ದುಪ್ಪಟ್ಟು ಮಾಡಿತು. ಅವಕಾಶ ಸಿಕ್ಕರೆ ನಟಿಸೋಣ ಅಂತೆಲ್ಲ ಯೋಚಿಸುತ್ತಿದ್ದಾಗ ಕೊಂಕಣಿ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಬಂತು’ ಎನ್ನುವ ಮಾತುಗಳೊಂದಿಗೆ ಮಾಡೆಲ್ ಜೊಸಿಟ, ನಟಿಯಾಗಿದ್ದರ ಹಿಂದಿನ ಕತೆ ಬಿಚ್ಚಿಡುತ್ತಾರೆ.

ಜನ್ವಾಯ್ ಮೂಲಕ ಶುರುವಾದ ಜರ್ನಿ!

ಕರಾವಳಿಯ ಈ ಚೆಲುವೆಗೆ ಸ್ಯಾಂಡಲ್ ವುಡ್ ಹೊಸದಾದರೂ ಬಣ್ಣದ ಲೋಕ ಹೊಸದಲ್ಲ. ಯಾಕಂದ್ರೆ ಈಗಾಗಲೇ ಜೊಸಿಟ, ಕೊಂಕಣಿಯ ‘ಜನ್ವಾಯ್’ ಹೆಸರಿನ ಚಿತ್ರದಲ್ಲಿ ಅಭಿನಯಿಸಿದ್ದರು. ಆದಾದ ಬಳಿಕ ‘ಸೈಕೊ’ ಹೆಸರಿನ ಕನ್ನಡದ ವೆಬ್ ಸೀರಿಸ್ ವೊಂದರಲ್ಲೂ ಕಾಣಿಸಿಕೊಂಡಿದ್ದರು. ಕಳೆದ ವರ್ಷ ಚಂದನವನದಲ್ಲಿ ಇದು ಭಾರೀ ಸದ್ದು ಮಾಡಿತ್ತು. ಇದಕ್ಕೆ ಸಾಕಷ್ಟು ಮೆಚ್ಚುಗೆ ಕೂಡ ಸಿಕ್ಕಿತ್ತು.

   ” ಫೋಟೋಸ್ ನೋಡಿ, ನಾನೇನು ಬರೀ ಗ್ಲಾಮರಸ್ ಹುಡುಗಿ ಅಂತನ್ಕೊಬೇಡಿ. ಸಿನಿಮಾ‌ ನನ್ನ ಪ್ಯಾಷನ್. ಅದ್ಯಾಕೋ ಬಾಲ್ಯದಲ್ಲೇ ಸಿನಿಮಾ ಹುಚ್ಚಿತ್ತು. ನಟಿಯಾಗ್ಬೇಕು ಎನ್ನುವುದಕ್ಕಿಂತ ಒಳ್ಳೆಯ ಪಾತ್ರಗಳಲ್ಲಿ ಅಭಿನಯಿಸಬೇಕೆನ್ನುವುದು ನನ್ನಾಸೆ. ಹಾಗಾಗಿಯೇ ಮಾಡೆಲಿಂಗ್ ಫೀಲ್ಡ್ ನಿಂದ ಇಲ್ಲಿಗೆ ಬಂದಿದ್ದೇನೆ.”

ಕಾಲಿವುಡ್ ಗೂ ಕಾಲಿಟ್ಟ ಕನ್ನಡತಿ !

ಗ್ಲಾಮರಸ್ ಪಾತ್ರಗಳಿಗೆ ಹೇಳಿ ಮಾಡಿಸಿದಂತಿರುವ ಜೊಸಿಟ ಅನೂಲ, ಬಣ್ಣ ಹಚ್ಚಿದ ಅತೀ ಕಡಿಮೆ ಅವದಿಯಲ್ಲಿ ಕಾಲಿವುಡ್ ಗೂ ಕಾಲಿಟ್ಟಿದ್ದಾರೆ‌ . ಸೈಕೋ ವೆಬ್ ಸಿರೀಸ್ ಮೂಲಕ ಸಿಕ್ಕ ಒಂದಷ್ಟು ಸಂಪರ್ಕಗಳೇ, ಕನ್ನಡದ ಗಡಿ ದಾಟಲು ಸೇತುವೆ ಆಗಿವೆ. ಅಲ್ಲಿ ‘ ಕಾದಲ್ ನಿವುಲೆ ‘ ಹೆಸರಿನ ಚಿತ್ರದಲ್ಲಿ ಅಭಿನಯಿಸಿದ್ದು, ಅದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆ ಅಲ್ವಿನ್ ಪ್ರಾನ್ಸಿಸ್ ನಿರ್ದೇಶನದ ‘ಬಾಬಿ’ ಹೆಸರಿನ ಚಿತ್ರದ ಮೂಲಕ ಕನ್ನಡಕ್ಕೆ ಪೂರ್ಣ ಪ್ರಮಾಣದ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ‌. ಇಷ್ಟಕ್ಕೂ ಕುತೂಹಲ ಇರುವುದು ಇವರ ಪಾತ್ರಗಳ ಆಯ್ಕೆಯ ಬಗ್ಗೆ.

ನಟನೆಗೆ ಹೆಚ್ಚು ಅವಕಾಶ ಇರಬೇಕು !

ಫೋಟೋಸ್ ನೋಡಿ, ನಾನೇನು ಬರೀ ಗ್ಲಾಮರಸ್ ಹುಡುಗಿ ಅಂತನ್ಕೊಬೇಡಿ. ಸಿನಿಮಾ‌ ನನ್ನ ಪ್ಯಾಷನ್. ಅದ್ಯಾಕೋ ಬಾಲ್ಯದಲ್ಲೇ ಸಿನಿಮಾ ಹುಚ್ಚಿತ್ತು. ನಟಿಯಾಗ್ಬೇಕು ಎನ್ನುವುದಕ್ಕಿಂತ ಒಳ್ಳೆಯ ಪಾತ್ರಗಳಲ್ಲಿ ಅಭಿನಯಿಸಬೇಕೆನ್ನುವುದು ನನ್ನಾಸೆ. ಹಾಗಾಗಿಯೇ ಮಾಡೆಲಿಂಗ್ ಫೀಲ್ಡ್ ನಿಂದ ಇಲ್ಲಿಗೆ ಬಂದಿದ್ದೇನೆ. ಮೊದಲ ಸಿನಿಮಾದಲ್ಲೇ ಅಂತ ಅವಕಾಶ ಸಿಕ್ಕಿತ್ತು.‌ ತಮಿಳಿನಲ್ಲೂ ಆ ಪಾತ್ರ ಸಿಕ್ಕಿದೆ‌. ಮುಂದೆಯೂ ಒಳ್ಳೆಯ ಪಾತ್ರಗಳು, ಅಷ್ಟೇ ಒಳ್ಳೆಯ ಕತೆಗಳ ನಿರೀಕ್ಷೆಯಲ್ಲಿದ್ದೇನೆ ಎನ್ನುತ್ತಾರೆ ಜೊಸಿಟ ಎಂಬ ಗ್ಲಾಮರಸ್ ನಟಿ. ಆಲ್ ದಿ ಬೆಸ್ಟ್ ಜೊಸಿಟ ಅನೂಲ.

Related Posts

error: Content is protected !!