ರಿಯಲ್ ನಲ್ಲಿ ಕಾಣದ್ದು ರೀಲ್ ನಲ್ಲಿ ಕಂಡೆ !

ಎಲ್ಲೂ ಹೇಳದ ಕಾಕ್ರೋಚ್ ಸುಧಿಯ ಭಾವುಕ ಮಾತು

ಸಿನಿಮಾಕ್ಕೂ ಬರುವ ಮುನ್ನ ಸುಧಿ

“ಒಂದು ಕಾಲದಲ್ಲಿ ಬಸ್ ಚಾರ್ಜ್ ಗೂ  ನನ್ನ ಬಳಿ ಕಾಸಿರುತ್ತಿರಲಿಲ್ಲ. ಬೀದಿ ಬದಿಯ ಕಾಂಪೌಂಡ್, ಗೋಡೆ, ಬೋರ್ಡ್‌ ಮೇಲೆ  ಅಕ್ಷರ ಬರೆಯುವ ಕಲಾವಿದನಾಗಿಯೇ ಒಂದಷ್ಟು ಬದುಕು ಕಟ್ಟಿಕೊಂಡಿದ್ದೆ. ಆದರೆ, ನನ್ ಲೈಫು ಇಷ್ಟೊಂದು ಕಲರ್ ಫುಲ್‌  ಅಂತ ಯಾವತ್ತೂ ಅಂದುಕೊಂಡಿರಲಿಲ್ಲ. ಈಗ ನನ್ನ ಬದುಕೇ ಬದಲಾಗಿದೆ. ಅದಕ್ಕೆ ಕಾರಣ ಈ ಕನ್ನಡ ಚಿತ್ರರಂಗ. ಸಿನಿಮಾ ಸುಂದರ ಬದುಕು ರೂಪಿಸಿದೆ”…

– ಹೀಗೆ ಹೇಳಿದ್ದು ಸುಧಿ. ಸುಧಿ ಅಂದರೆ ಬಹಳಷ್ಟು ಜನರಿಗೆ ಬೇಗ ಅರ್ಥವಾಗೋದು ಕಷ್ಟ. “ಟಗರು” ಖ್ಯಾತಿಯ ಕಾಕ್ರೋಚ್ ಅಂದರೆ, ಎಲ್ಲರಿಗೂ ನೆನಪಾಗುವ ಕಲಾವಿದ.

ಕನ್ನಡ ಚಿತ್ರರಂಗಕ್ಕೆ ಸುಧಿ ಕಾಲಿಟ್ಟು ಬರೋಬ್ಬರಿ ಆರೇಳು ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಸುಧಿ ಸರಿಸುಮಾರು 60 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. “ಅಲೆಮಾರಿ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಸುಧಿ ತರಹೇವಾರಿ ಪಾತ್ರಗಳ ಮೂಲಕ ತಾನೊಬ್ಬ ಕಲಾವಿದನಾಗಿ ಗುರುತಿಸಿಕೊಂಡಿದ್ದಾರೆ. “ದುನಿಯಾ’ ಸೂರಿ ನಿರ್ದೇಶನದ “ಟಗರು” ಸುಧಿಗೊಂದು ಟರ್ನಿಂಗ್ ಪಾಯಿಂಟ್ ಅಂದರೆ ತಪ್ಪಿಲ್ಲ. ಆ ಚಿತ್ರದ “ಕಾಕ್ರೋಚ್” ಪಾತ್ರವೇ ಇಂದು ಸುಧಿಯನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ಈ ಮಾತನ್ನು ಸ್ವತಃ ಸುಧಿ ಕೂಡ ಒಪ್ಪುತ್ತಾರೆ.

ತಮ್ಮ ಸಿನಿಜರ್ನಿ  ಬಗ್ಗೆ ಸಾಕಷ್ಟು ಹೇಳಿರುವ ಸುಧಿ, ಸಿನಿಜರ್ನಿ ಶುರುವಿಗೂ ಮುನ್ನ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ. ಅದೇ ಈ ಹೊತ್ತಿನ ವಿಷಯ. ಹೌದು, ಸುಧಿ, ಸಿನಿಮಾ ರಂಗಕ್ಕೂ ಬರುವ ಮುನ್ನ, ಅವರೊಬ್ಬ ಸಾಧಾರಾಣ ಸೈನ್ ಬೋರ್ಡ್‌ ಕಲಾವಿದರಾಗಿದ್ದರು. ಬರವಣಿಗೆ ಕೆಲಸ ಸಿಕ್ಕ ಸಿಕ್ಕ ಕಡೆ ಊರೂರು, ರಸ್ತೆ ಬದಿ ಅಲೆದಾಡಿ ಒಂದು ರೀತಿ ಅಲೆಮಾರಿಯಂತೆಯೇ ಬದುಕು ಸಾಗಿಸಿದ ಸುಧಿ, ಕೊನೆಗೆ “ಅಲೆಮಾರಿ” ಸಿನಿಮಾ ಮೂಲಕವೇ ಚಿತ್ರರಂಗ ಪ್ರವೇಶಿಸಿದರು. ಅದು ಆಕಸ್ಮಿಕವಾಗಿ ಸಿಕ್ಕ ಅವಕಾಶವಾದರೂ ತುಂಬಾನೆ ಚೆನ್ನಾಗಿ ಕಲರ್ ಫುಲ್‌ ಲೋಕದೊಳಗಿನ ಬದುಕು ಕಟ್ಟಿಕೊಂಡರು. ಅಲ್ಲಿಂದ ಸುಧಿ ಇಂದಿಗೂ ತಿರುಗಿ ನೋಡಿಲ್ಲ ಅನ್ನೋದೇ ವಿಶೇಷ.

ಗೋಡೆ ಬರೆಯುತ್ತಿದ್ದ ದಿನಗಳಲ್ಲಿ ಸುಧಿ

”  ಸಿನಿಮಾ ನನ್ನ ಲೈಫು. ಇಡೀ ನನ್ನ ಬದುಕನ್ನೇ ಈ ಚಿತ್ರರಂಗ ರೂಪಿಸಿದೆ. ಕೊನೆಯ ಉಸಿರು ಇರೋವರೆಗೂ ನಾನು ಈ ಚಿತ್ರರಂಗಕ್ಕೆ ಚಿರಋಣಿಯಾಗಿರುತ್ತೇನೆ. ನಾನು ಸಿನಿಮಾಗೆ ಬರುವ ಮುನ್ನ ಸಾಕಷ್ಟು ಕಷ್ಟಪಟ್ಟಿದ್ದೇನೆ. ನಿಜ ಹೇಳುವುದಾದರೆ ಸಿನಿಮಾ ರಂಗ ನನಗೆ ಎಲ್ಲವನ್ನೂ ಕಲಿಸಿದೆ. ಹಾಗಾಗಿ ನನಗೆ ಸಿನಿಮಾನೇ ಎಲ್ಲವೂ ಆಗಿದೆ. ಸಿನಿಮಾ ಹೊರತು ನಾನಿಲ್ಲ ಎನ್ನುವಷ್ಟರ ಮಟ್ಟಿಗೆ ಸಿನಿಮಾ ಅಪ್ಪಿದ್ದೇನೆ ” 

ಗೋಡೆ ಬರೆಯುತ್ತಿದ್ದ ದಿನಗಳಲ್ಲಿ ಸುಧಿ

ಸಿನಿಮಾ ಬದುಕಿಗೂ ಮುನ್ನ ಇದ್ದಂತಹ ಬದುಕಿನ ಬಗ್ಗೆ “ಸಿನಿ ಲಹರಿ” ಜೊತೆ ಮಾತನಾಡಿದ ಸುಧಿ, “ನಿಜ ಹೇಳುವುದಾದರೆ, ಸಿನಿಮಾ ನನ್ನ ಲೈಫು. ಇಡೀ ನನ್ನ ಬದುಕನ್ನೇ ಈ ಚಿತ್ರರಂಗ ರೂಪಿಸಿದೆ. ಕೊನೆಯ ಉಸಿರು ಇರೋವರೆಗೂ ನಾನು ಈ ಚಿತ್ರರಂಗಕ್ಕೆ ಚಿರಋಣಿಯಾಗಿರುತ್ತೇನೆ. ನಾನು ಸಿನಿಮಾಗೆ ಬರುವ ಮುನ್ನ ಸಾಕಷ್ಟು ಕಷ್ಟಪಟ್ಟಿದ್ದೇನೆ. ನಿಜ ಹೇಳುವುದಾದರೆ ಸಿನಿಮಾ ರಂಗ ನನಗೆ ಎಲ್ಲವನ್ನೂ ಕಲಿಸಿದೆ. ಹಾಗಾಗಿ ನನಗೆ ಸಿನಿಮಾನೇ ಎಲ್ಲವೂ ಆಗಿದೆ. ಸಿನಿಮಾ ಹೊರತು ನಾನಿಲ್ಲ ಎನ್ನುವಷ್ಟರ ಮಟ್ಟಿಗೆ ಸಿನಿಮಾ ಅಪ್ಪಿದ್ದೇನೆ. ನಾನೊಬ್ಬ ಬರಹ ಕಲಾವಿದ. ಅಲ್ಲಿ ಕಾಣದೇ ಇರುವಂತಹ ಅಚ್ಚರಿಗಳನ್ನು ನಾನು ಸಿನಿಮಾರಂಗದಲ್ಲಿ ಕಂಡಿದ್ದೇನೆ. ಅನುಭವಿಸಿದ್ದೇನೆ. ನಾನು ನೋಡದೇ ಇರುವ, ಹಾಕದೇ ಇರುವ ಶೂಸ್ ನೋಡಿದ್ದೇನೆ, ನಾನು ಹಾಕದೇ ಇರುವಂತಹ ಬಟ್ಟೆ ಹಾಕಿದ್ದೇನೆ, ನೋಡದೇ ಇರುವಂತಹ ಸ್ಟಾರ್ಸ್ ಹೋಟೇಲ್‌ ನಲ್ಲಿ ಮಲಗಿದ್ದೇನೆ. ಹೆಸರು ಕೇಳದೇ ಇರುವಂತಹ ಊಟದ ಐಟಂ ಕೇಳಿದ್ದೇನೆ, ಒಂದು ಕಾಲದಲ್ಲಿ ಬಸ್ ಚಾರ್ಜ್‌ ಗೂ ಕಾಸಿರದ ನಾನು ಈ ಸಿನಿಮಾರಂಗದಿಂದ ಇದ್ದಬದ್ದ ಫ್ಲೈಟ್ ಗಳಲ್ಲಿ  ಪ್ರಯಾಣ ಮಾಡಿದ್ದೇನೆ. ದೊಡ್ಡವರ ಮುಂದೆ ನಿಲ್ಲುವುದೇ ಕಷ್ಟ ಆಗಿದ್ದ ದಿನಗಳಲ್ಲಿ ಈಗ ದೊಡ್ಡ ವ್ಯಕ್ತಿಗಳ ಜೊತೆ ಕೂತು ಮಾತನಾಡುತ್ತಿದ್ದೇನೆ ಅಂದರೆ ಅದಕ್ಕೆಲ್ಲ ಈ ಸಿನಿಮಾ ಕಾರಣ’ ಎನ್ನುವುದು ಸುಧಿ ಮಾತು.

ಆಗೆಲ್ಲ ಬದುಕು ನಡೆಯುತ್ತಿದ್ದರೂ ಇಷ್ಟೊಂದು ಸುಂದರ ಬದುಕು ಇರಲಿಲ್ಲ. ಇದಕ್ಕೂ ಈ ಸಿನಿಮಾನೇ ಕಾರಣ. ಈಗ ನಾನೇನಾದರೂ ಒಂದು ಅಭಿಮಾನಿ ವರ್ಗವನ್ನು ಸಂಪಾದಿಸಿದ್ದೇನೆಂದರೆ ಅದಕ್ಕೂ ಈ ಚಿತ್ರರಂಗ ಕಾರಣ. ಇಲ್ಲಿವರೆಗಿನ ನನ್ನ ಸಿನಿಪಯಣದ ಜರ್ನಿಯೇ  ಅದ್ಭುತ. ಸದ್ಯಕ್ಕಂತೂ ನಾನು ತೃಪ್ತಿ ಹೊಂದಿದ್ದೇನೆ. ಸಿನಿಮಾ ಬಿಟ್ಟರೆ ಬೇರೇನೂ ಬೇಡ ಅಂದುಕೊಂಡಿದ್ದೇನೆ. ಆದರೆ, ನನ್ನ ಮೂಲ ಕಸುಬು ಮಾತ್ರ ಬಿಡಲಾರೆ. ಇಲ್ಲಿ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತೇನೆ. ಶೂಟಿಂಗ್ ಇದ್ದಾಗ ಚಿತ್ರೀಕರಣ ಸೆಟ್ಗೆ ಹೋಗಿ ಬರುತ್ತೇನೆ. ಸಂಜೆ ಒಂದು ರೌಂಡ್ ನನ್ನ ಅಂಗಡಿಗೆ ಹೋಗಿ ಕೆಲಸ ಕಾರ್ಯ ನೋಡಿಕೊಂಡು ಮನೆಗೆ ಹೋಗುತ್ತೇನೆ. ನನ್ನದೇ ಆದ ಒಂದು ಹುಡುಗರ ಟೀಮ್ ಇದೆ. ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಾರೆ. ಇದರ ಜೊತೆ ಜೊತೆಯಲ್ಲಿ ಸಿನಿಮಾ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ.ಸದ್ಯಕ್ಕೆ ನನ್ನ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಬಿಡುಗಡೆಗೆ ಒಂದಷ್ಟು ರೆಡಿಯಾಗಿವೆ. ಇನ್ನಷ್ಟು ಹೊಸ ಸಿನಿಮಾಗಳೂ ಬಂದಿವೆ. ಇದೆಲ್ಲದರ ಜೊತೆಗೆ ಜನವರಿಯಲ್ಲೊಂದು ಹೊಸ ಸುದ್ದಿ ಕೊಡುತ್ತೇನೆ ಎನ್ನುತ್ತಾರೆ ಸುಧಿ.

” ನಾನೊಬ್ಬ ಬರಹ ಕಲಾವಿದ. ಅಲ್ಲಿ ಕಾಣದೇ ಇರುವಂತಹ ಅಚ್ಚರಿಗಳನ್ನು ನಾನು ಸಿನಿಮಾರಂಗದಲ್ಲಿ ಕಂಡಿದ್ದೇನೆ. ಅನುಭವಿಸಿದ್ದೇನೆ. ನಾನು ನೋಡದೇ ಇರುವ, ಹಾಕದೇ ಇರುವ ಶೂಸ್ ನೋಡಿದ್ದೇನೆ, ನಾನು ಹಾಕದೇ ಇರುವಂತಹ ಬಟ್ಟೆ ಹಾಕಿದ್ದೇನೆ, ನೋಡದೇ ಇರುವಂತಹ ಸ್ಟಾರ್ಸ್ ಹೋಟೇಲ್ನಲ್ಲಿ ಮಲಗಿದ್ದೇನೆ. ಹೆಸರು ಕೇಳದೇ ಇರುವಂತಹ ಊಟದ ಐಟಂ ಕೇಳಿದ್ದೇನೆ, ಒಂದು ಕಾಲದಲ್ಲಿ ಬಸ್‌ ಚಾರ್ಜ್‌ ಗೂ  ಕಾಸಿರದ ನಾನು ಈ ಸಿನಿಮಾರಂಗದಿಂದ ಇದ್ದಬದ್ದ ಫ್ಲೈಟ್‌  ಗಳಲ್ಲಿ ಪ್ರಯಾಣ ಮಾಡಿದ್ದೇನೆ. ದೊಡ್ಡವರ ಮುಂದೆ ನಿಲ್ಲುವುದೇ ಕಷ್ಟ ಆಗಿದ್ದ ದಿನಗಳಲ್ಲಿ ಈಗ ದೊಡ್ಡ ವ್ಯಕ್ತಿಗಳ ಜೊತೆ ಕೂತು ಮಾತನಾಡುತ್ತಿದ್ದೇನೆ ” 

ನಟನಾಗಿ ಸುಧಿ

ಆರೇಳು ವರ್ಷ. ಇಷ್ಟು ವರ್ಷಗಳಲ್ಲಿನನಗೆ ಸಿಕ್ಕ ಅವಕಾಶಗಳೆಲ್ಲವೂ ವಿಲನ್ ಪಾತ್ರಗಳೇ. ಆ ಪಾತ್ರದಲ್ಲಿ ನಟಿಸಿದ್ದಕ್ಕೆ ನನಗೆ ಹೆಮ್ಮೆಯೂ ಇದೆ. ಯಾವುದೇ ಕಲಾವಿದ ಇರಲಿ, ಒಂದು ಆಸೆ ಇದ್ದೇ ಇರುತ್ತೆ. ಅಂತಹ ಆಸೆ ನನಗೂ ಇದೆ. “ಪೊಲ್ಲಾದವನ್” ಚಿತ್ರದಲ್ಲಿ ಡ್ಯಾನಿಯಲ್ ಬಾಲಾಜಿ ಅವರು ಮಾಡಿದಂತಹ ಪಾತ್ರ ನಾನು ಮಾಡಬೇಕು. ಅಂತಹ ಪಾತ್ರ ಎದುರು ನೋಡುತ್ತಿದ್ದೇನೆ. ಇಲ್ಲಿ ಸ್ಟಾರ್ ಸಿನಿಮಾ, ಹೊಸಬರ ಸಿನಿಮಾದಲ್ಲೂ ಸಾಕಷ್ಟು ಬಿಝಿಯಾಗಿದ್ದೇನೆ ಎಂದು ಹೇಳಲು ಖುಷಿಯಾಗುತ್ತಿದೆ. “ಸಲಗ’ ನನಗೆ ಇನ್ನೊಂದು ಹೊಸ ಮೈಲೇಜ್ ತಂದುಕೊಡಲಿದೆ. ಆ ಚಿತ್ರದ ಸಾವಿತ್ರಿ ಎಂಬ ಪಾತ್ರ ಹಿಂದಿನ ಎಲ್ಲಾ ಪಾತ್ರಗಳನ್ನೂ ಮರೆಸುವಂತಿದೆ. ದುನಿಯಾ ವಿಜಿಯಣ್ಣ ಅವರ ಮತ್ತೊಂದು ಹೊಸ ನಿರ್ದೇಶನದ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದೆ. ಸಿಕ್ಕ ಆವಕಾಶವನ್ನು ಬಳಸಿಕೊಂಡು ಇಲ್ಲೇ ಇನ್ನಷ್ಟು ಗಟ್ಟಿಜಾಗ ಮಾಡಿಕೊಳ್ಳುವ ಆಸೆಯಂತೂ ಇದೆ ಎನ್ನುತ್ತಾರೆ ಸುಧಿ. ಸುಧಿ ಕೈಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಆ ಲಿಸ್ಟ್‌ ಹೀಗಿದೆ.

ಸುಧಿ ಕೈಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಆ ಲಿಸ್ಟ್‌ ಹೀಗಿದೆ.

1  ರಾಬರ್ಟ್‌

2  ಯುವರತ್ನ

3 ಸಲಗ

4 ಏಕ್ ಲವ್ ಯಾ

5  ತ್ರಿಶೂಲಂ

6  ನಟ್ವರ್ ಲಾಲ್

7  ಚೆಕ್ ಮೇಟ್

8  ರಂಗ  ಮಂದಿರ

9  ಚಾಂಪಿಯನ್‌

10ಸಕಲ ಕಲಾವಲ್ಲಭ

11 ಯಲ್ಲೋ ಬೋರ್ಡ್‌

12 ತಾಜ್‌ ಮಹಲ್‌ -2

13  ಯಾರ್‌ ಮಗ

14 ರಾಜ್ಬೀರ್‌

15  ಮಾರಿಗೋಲ್ಡ್,

16  ಉಗ್ರಾವತಾರ

17 ಗಲ್ಲಿ

Related Posts

error: Content is protected !!