ಹೊಸ ಲವ್ ನಲ್ಲಿ ದುನಿಯಾ ವಿಜಯ್!

ಸಲಗ ಬಳಿಕ ಕ್ಯೂಟ್ ಲವ್ ಸ್ಟೋರಿ ನಿರ್ದೇಶನಕ್ಕೆ  ನಟ ವಿಜಯ್ ಸಜ್ಜು

“ದುನಿಯಾ” ವಿಜಯ್ ಅವರು ಮೊದಲ ಬಾರಿಗೆನ ನಿರ್ದೇಶಿಸಿರುವ “ಸಲಗ” ಚಿತ್ರ ಇನ್ನೇನು ಬಿಡುಗಡೆಯ ತಯಾರಿಯಲ್ಲಿದೆ. ಕೊರೊನಾ ಸಮಸ್ಯೆ ಇಲ್ಲದೇ ಹೋಗಿದ್ದರೆ, ಇಷ್ಟೊತ್ತಿಗಾಗಲೇ, “ಸಲಗ’ ಅಬ್ಬರಿಸಿಬಿಡುತ್ತಿತ್ತು. ಇಡೀ ಚಿತ್ರರಂಗವೇ ಸ್ಥಗಿತಗೊಂಡ ಹಿನ್ನೆಲೆಯಲ್ಲಿ, ಬಿಡುಗಡೆಗೆ ಸಜ್ಜಾಗಿದ್ದ ಚಿತ್ರಗಳೂ ಬಿಡುಗಡೆಯಾಗದೆ ಉಳಿದಿದ್ದವು. ಈಗ ಚಿತ್ರರಂಗ ತನ್ನ ಕಾರ್ಯಚಟುವಟಿಕೆ ಶುರುಮಾಡಿದೆ.

“ಸಲಗ’ ಕೂಡ ಬಿಡುಗಡೆಯ ಹಾದಿಯಲ್ಲಿದೆ. “ಸಲಗ’ ನಿರ್ದೇಶಕ ಕಮ್ ನಟ “ದುನಿಯಾ” ವಿಜಯ್, ಇದೀಗ ಹೊಸದೊಂದು ಸಿನಿಮಾಗೆ ಕೈ ಹಾಕಿದ್ದಾರೆ. “ಸಲಗ” ಬಿಡುಗಡೆ ಬಳಿಕ ಹೊಸ ಚಿತ್ರ ಮಾಡಲು ಅಣಿಯಾಗುತ್ತಿದ್ದಾರೆ.

ಈ ಬಾರಿ ಅವರು ಸಾಹಸ ಚಿತ್ರಕ್ಕೆ ಮೊರೆ ಹೋಗದೆ, ಪಕ್ಕಾ ಲವ್‌ ಸ್ಟೋರಿ ಹೇಳಲು ಹೊರಟಿದ್ದಾರೆ. ಆ ಕುರಿತು “ಸಿನಿ ಲಹರಿ’ ಜೊತೆ ಮಾತನಾಡಿದ “ದುನಿಯಾ” ವಿಜಯ್, ” ನಾನೀಗ “ಸಲಗ” ಬಿಡುಗಡೆ ಎದುರು ನೋಡುತ್ತಿದ್ದೇನೆ. ಸದ್ಯ ಎಲ್ಲವೂ ತಿಳಿಯಾದ ನಂತರ ಚಿತ್ರ ಬಿಡುಗಡೆಗೆ ಮುಂದಾಗುತ್ತೇನೆ. ಇದರ ನಡುವೆ, ನಾನೊಂದು ಹೊಸ ಚಿತ್ರಕ್ಕೂ ಕೈ ಹಾಕಿದ್ದೇನೆ. ಈ ಸಲ ಒಂದು ಪ್ರೇಮಕಥೆ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಅದೊಂದು ಪಕ್ಕಾ ಫ್ರೆಶ್ ಲವ್  ಸ್ಟೋರಿಯಾಗಲಿದೆ.

” ನಾನೀಗ “ಸಲಗ” ಬಿಡುಗಡೆ ಎದುರು ನೋಡುತ್ತಿದ್ದೇನೆ. ಸದ್ಯ ಎಲ್ಲವೂ ತಿಳಿಯಾದ ನಂತರ ಚಿತ್ರ ಬಿಡುಗಡೆಗೆ ಮುಂದಾಗುತ್ತೇನೆ. ಇದರ ನಡುವೆ, ನಾನೊಂದು ಹೊಸ ಚಿತ್ರಕ್ಕೂ ಕೈ ಹಾಕಿದ್ದೇನೆ. ಈ ಸಲ ಒಂದು ಪ್ರೇಮಕಥೆ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಅದೊಂದು ಪಕ್ಕಾ ಫ್ರೆಶ್ ಲವ್  ಸ್ಟೋರಿಯಾಗಲಿದೆ” 

” ಕಪ್ಪಗಿರೋ ‌ಹುಡುಗ ಬೇಕು- ವಯಸ್ಸು ಹದಿನೆಂಟಾಗಿರಬೇಕು ” 

ಹೊಸ ಹುಡುಗ ಹುಡುಗಿ ಇರಲಿದ್ದಾರೆ. ಅದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಆಗಿರಲಿದೆ. ನಾಯಕ ಆಯ್ಕೆ ನಡೆಯುತ್ತಿದೆ. ಸ್ಕ್ರಿಪ್ಟ್ ಎಂಡ್ ಆಗಿದೆ. ಹೊಸ ಹುಡುಗ ಕಥೆಗೆ ಸೂಕ್ತವಾಗಿರಬೇಕು. ಕಪ್ಪುಗಿರೋರು ಬೇಕು. ಕಥೆ ಆ ರೀತಿಯ ಹುಡುಗನನ್ನು ಡಿಮ್ಯಾಂಡ್ ಮಾಡುತ್ತಿದೆ. ನನ್ನ ಪ್ರಕಾರ ಒಳ್ಳೆಯ ಲವ್ ಸ್ಟೋರಿ  ಇದು. ನಾನು ಮಾಡೋಕೆ ಆಗದಿರುವ ಕಥೆ ಇದು. ಹಾಗಾಗಿ ಇನ್ನೊಬ್ಬರಿಗೆ ಮಾಡಬೇಕು ಅಂತಾನೇ ಈ ನಿರ್ಧಾರ. 18 ರಿಂದ 25ರ ಹುಡುಗ ಹುಡುಗಿ ನಡುವಿನ ಪ್ರೇಮಕಥೆ ಇದು. ನಟನೆ ಗೊತ್ತಿದ್ದರೂ ಓಕೆ, ಅಂತಹ ಹುಡುಗ ಬೇಕು. ಹುಡುಗಿ ಫ್ರೆಶ್ ಫೇಸ್ ಹುಡುಕುತ್ತಿದ್ದೇನೆ.

“ಸಲಗ” ನಂತರ ಈ ಸಿನಿಮಾ ಮಾಡಿ ಮುಗಿಸೋದು. ಸದ್ಯಕ್ಕಿಷ್ಟು. ದೊಡ್ಡ ಮಟ್ಟದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಇಷ್ಟರಲ್ಲೇ ಎಲ್ಲವೂ ಸರ್ಪ್ರೈಸ್ ಆಗಿರಲಿದೆ. ಅಲ್ಲಿಯವರೆಗೆ ಈ ಪ್ರೇಮಕಥೆಯ ಕೆತ್ತನೆ ಕೆಲಸ ನಡೆಯುತ್ತಿದೆ. ಸದ್ಯಕ್ಕೆ ನಾನೀಗ ಸ್ಕ್ರಿಪ್ಟ್ನಲ್ಲಿದ್ದೇನೆ. “ಸಲಗ” ಬಿಡುಗಡೆಯ ತಯಾರಿಯಲ್ಲೂ ಇದ್ದೇನೆ. ಸದ್ಯಕ್ಕಿಷ್ಟು ವಿಷಯವಿದೆ. ಉಳಿದದ್ದನ್ನು ಹಂತವಾಗಿ ವಿವರಿಸುತ್ತೇನೆ’ ಎಂದು ಮಾತು ಮುಗಿಸುತ್ತಾರೆ ದುನಿಯಾ ವಿಜಯ್

Related Posts

error: Content is protected !!