ಕನ್ನಡದ ಜತೆಗೆ ತೆಲುಗಿನಲ್ಲೂ ಬ್ಯುಸಿಯಾದ ಚಿಟ್ಟೆ
ಚಿಟ್ಟೆ ಖ್ಯಾತಿಯ ನಟ ವಸಿಷ್ಠ ಸಿಂಹ ಸಿಕ್ಕಾಪಟ್ಟೆ ಬ್ಯುಸಿ ಯಾಗಿದ್ದಾರೆ. ಕನ್ನಡದ ಜತೆಗೀಗ ಅವರು ತೆಲುಗಿನಲ್ಲೂ ಬಹು ಬೇಡಿಕೆ ನಟ. ಈಮಧ್ಯೆ ಕನ್ನಡದಲ್ಲೇ ಸಾಲು ಸಾಲು ಸಿನಿಮಾಗಳಿಗೆ ಹೀರೋ ಆಗುತ್ತಿದ್ದು, ಈಗ ಹೆಸರಿಡದ ಚಿತ್ರವೊಂದಕ್ಕೆ ಹೀರೋ ಆಗಿದ್ದು, ಅದು ಈ ತಿಂಗಳ ಕೊನೆಯಲ್ಲಿ ಶುರುವಾಗಲಿದೆಯಂತೆ.
ಚಿತ್ರದ ಶೀರ್ಷಿಕೆ ಗೌಪ್ಯವಾಗಿಟಿರುವ ಚಿತ್ರತಂಡ ಮಾಸಾಂತ್ಯಕ್ಕೆ ಮುಹೂರ್ತ ನಡೆಸಿ, ಚಿತ್ರದ ಶೀರ್ಷಿಕೆ ಅನಾವರಣ ಗೊಳಿಸುವುದಾಗಿ ತಿಳಿಸಿದೆ. ಜನರತ್ನ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜನಾರ್ದನ ವಿ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ವಚನ್ ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕ ಪವನ್ ಕುಮಾರ್ ಜೊತೆಗೆ ‘ಲೂಸಿಯಾ’ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ವಚನ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.
ಅನೂಪ್ ಸೀಳಿನ್ ಸಂಗೀತವಿರುವಈ ಚಿತ್ರಕ್ಕೆ ‘ಮಫ್ತಿ’ ಖ್ಯಾತಿಯ ನವೀನ್ ಕುಮಾರ್ ಛಾಯಾಗ್ರಹಣವಿದೆ. ‘ಟಗರು’ ಖ್ಯಾತಿಯ ಮಾಸ್ತಿ ಸಂಬಾಷಣೆ ಬರೆಯುತ್ತಿದ್ದಾರೆ. ವಸಿಷ್ಠ ಸಿಂಹ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಖ್ಯಾತ ನಟ ಕಿಶೋರ್ ಕೂಡ ಕಾಣಿಸಿಕೊಳುತ್ತಿದ್ದಾರೆ. ಸಾಕಷ್ಟು ಪ್ರಸಿದ್ದ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ಸದ್ಯದಲ್ಲೇ ತಿಳಿಸಲಾಗುವುದು.