ಟಾಲಿವುಡ್ ,‌ಮಾಲಿವುಡ್ ನಲ್ಲೂ ‘ ಸಿಂಹ ‘ ಘರ್ಜನೆ, ವಸಿಷ್ಠ ಬರ್ತ್ ಡೇ ಗೆ ಸಿಕ್ಕ ಗಿಫ್ಟ್ ಏನು ಗೊತ್ತಾ?

ಕೊರೋನಾ ಕಾರಣ ಬರ್ತ್ ಡೇ ಗ್ರಾಂಡ್  ಆಚರಣೆಯಿಂದ ದೂರವುಳಿದ ನಟನಿಗೆ ‘ಕಾಲಚಕ್ರ’ದ ಭರ್ಜರಿ ಸಂಭ್ರಮ

ಸರಿ ಸುಮಾರು ಆರಡಿ ಹೈಟು, ಖಡಕ್ ಲುಕು, ಕಂಚಿ‌ನ ಕಂಠ, ‌ಯುಂಗ್ ವಿಲನ್ ಅಂದಾಕ್ಷಣ ನೆನಪಾಗುವ ಹೆಸರು ಚಿಟ್ಟೆ ಅಲಿಯಾಸ್ ವಸಿಷ್ಟ ಸಿಂಹ. ಸ್ಯಾಂಡಲ್ ವುಡ್ ಮಟ್ಟಿಗೆ ಅವರೊಬ್ಬ ಪ್ರತಿಭಾನ್ವಿತ ಯುವ ನಟ. ಗಾಯಕರಾಗಲು ಬೆಂಗಳೂರಿಗೆ ಬಂದು ನಟನಾಗಿ‌ಮಿಂಚುತ್ತಿರುವ ಅವರ ಸಿನಿಜರ್ನಿಯೇ ಒಂದು ಇಂಟೆರೆಸ್ಟಿಂಗ್. ‘ರಾಜಾಹುಲಿ ‘ ಚಿತ್ರದೊಂದಿಗೆ ಕನ್ನಡದಲ್ಲಿ ಬಹುಬೇಡಿಕೆಯ ವಿಲನ್ ಆಗಿದ್ದು, ಆ ಜನಪ್ರಿಯತೆಯ ಮೂಲಕವೇ ಗಾಯಕರಾಗಿದ್ದು, ಅಲ್ಲಿಂದೀಗ ನಾಯಕರಾಗಿಯೂ ಮಿಂಚುತ್ತಿರುವುದು ಅವರ ಸಿನಿ ಜರ್ನಿಯ ವಿಶೇಷ. ಅವರಿಗಿಂದು ಹುಟ್ಟು ಹಬ್ಬ( ಅಕ್ಟೋಬರ್ 19) .

ಬೇಡಿಕೆಯ‌‌ ಹೀರೋ ಆಗಿದ್ದೇ ಬರ್ತ್ ಡೇ ಗಿಫ್ಟ್ !

ಕೊರೋನಾ ಕಾರಣಕ್ಕೆ ಅವರಿಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆದರೆ ಈ ವರ್ಷದ ಅವರ ಹುಟ್ಟುಹಬ್ಬ ಎರಡು ಕಾರಣಕ್ಕೆ ಗಮನಾರ್ಹ. ‘ಇಂಗ್ಲೆಂಡ್ ವರ್ಸಸ್ ಲಂಡನ್’ ಚಿತ್ರದ ಮೂಲಕ ಕನ್ನಡದಲ್ಲಿ ಹೀರೋ ಆಗಿಯೂ ಬಡ್ತಿ ಪಡೆದ ಟಗರು ಖ್ಯಾತಿಯ ‘ಚಿಟ್ಟೆ ‘ ಇವತ್ತು ಭರ್ಜರಿ ಬ್ಯುಸಿ. ಕಾಲಚಕ್ರ, ತಲ್ವಾರ್ ಪೇಟೆ, ಗ್ಯಾಂಗ್ ಸ್ಟರ್, ‘ಪಂಥ’ ಸೇರಿದಂತೆ ಸಾಲು ಸಾಲು ಚಿತ್ರಗಳಿಗೆ ನಾಯಕ‌ನಟ‌. ಇದರ ಜತೆಗೆ ಸಾಕಷ್ಟು ಸಿನಿಮಾ‌ಗಳಿಗೂ ವಿಲನ್ ಆಗಿ ಅಭಿನಯಿಸಿದ್ದಾರೆ‌. ಮತ್ತೊಂದೆಡೆ ಹೀರೋ ಆಗಿ ಟಾಲಿವುಡ್ ಗೂ ಎಂಟ್ರಿ ಆಗಿದ್ದಾರೆ. ಒಂದಲ್ಲ ಅಲ್ಲಿ‌ಅವರೀಗ ಎರಡು ಚಿತ್ರಕ್ಕೆ ನಾಯಕ. ‘ಓದೆಲ್ಲಾ ರೈಲ್ವೆ ಸ್ಟೇಷನ್ ‘ಜತೆಗೆ ಕನ್ನಡದ‌ ‘ಗ್ಯಾಸ್ ಸ್ಟರ್’ ಕೂಡ ತೆಲುಗಿನಲ್ಲೂ ನಿರ್ಮಾಣವಾಗುತ್ತಿದೆ.ಹಾಗೆಯೇ ‘ ಕಾಲ ಚಕ್ರ ‘ ಮಲಯಾಳಂ ಗೂ‌ ಕಾಲಿಡುತ್ತಿದೆ.
ಈಗಷ್ಟೇ ಹೀರೋ‌ ಆಗಿ ಗುರುತಿಸಿಕೊಳ್ಳುತ್ತಿರುವ ವಸಿಷ್ಠ ಸಿಂಹ ಅವರಿಗೆ ಇದಕ್ಕಿಂತ ಇನ್ನೇನು ಬೇಕು? ಇವೆಲ್ಲ ಅವರ ವರ್ಷದ ಹುಟ್ಟು ಹಬ್ಬದ ಭರ್ಜರಿ ಗಿಫ್ಟ್.

 

ನಿಮ್ಮ‌ಹಾರೈಕೆ , ನೀವಿರುವಲ್ಲಿಂದಲೇ ಕೊಡಿ

ಪ್ರತಿ ವರ್ಷ ವಸಿಷ್ಠ ಅವರ ಹುಟ್ಟು ಹಬ್ಬ ಅಂದ್ರೆ ಅವರ ಮನೆ ಮುಂದೆ ಅಭಿಮಾನಿಗಳ ದಂಡು‌ ಸೇರುತ್ತಿತ್ತು. ತಮ್ಮ‌ನೆಚ್ಚಿನ ಹುಟ್ಟು ಹಬ್ಬಕ್ಕೆ ಶುಭಾಶಯ ಹೇಳಲು ದೂರದೂರುಗಳಿಂದ ಫ್ಯಾನ್ಸ್ ಬರುತ್ತಿದ್ದರು. ಆದರೆ ಈ ವರ್ಷ ಅದಕ್ಕೆ ಅವಕಾಶ ಇಲ್ಲ. ಯಾಕಂದ್ರೆ ಕೊರೋನಾ ಕಾರಣಕ್ಕೆ ಅವರು ಹುಟ್ಟು ಹಬ್ಬವನ್ನು ಗ್ರಾಂಡ್ ಆಗಿ ಆಚರಿಸಿಕೊಳ್ಳುತ್ತಿಲ್ಲ.’ ಕೊರೊನಾದಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಎಲ್ಲರ ಆರೋಗ್ಯ ಹಿತದೃಷ್ಟಿಯಿಂದ ಹುಟ್ಟುಹಬ್ಬ ಆಚರಣೆಯನ್ನು ಕ್ಯಾನ್ಸಲ್ ಮಾಡಲಾಗಿದೆ. ನೀವೆಲ್ಲಿ ಇರುತ್ತಿರೋ, ಅಲ್ಲಿಂದಲೇ ತಮ್ಮ ಆಶೀರ್ವಾದ, ಪ್ರೀತಿ, ಹಾರೈಕೆಯನ್ನು ಕೊಡಿ. ನಾವೆಲ್ಲರೂ ಒಗ್ಗಟ್ಟಾಗಿ ಈ ಕೊರೊನಾ ವೈರಸ್ ವಿರುದ್ಧ ಹೋರಾಡೋಣ. ಆದಷ್ಟು ಬೇಗ ನಮ್ಮ ಜನಜೀವನ ಮೊದಲಿನ ಸ್ಥಿತಿಗೆ ಬರಲಿ’ ಎಂದು ನಟ ವಸಿಷ್ಠ ಸಿಂಹ‌ ಅಭಿಮಾನಿಗಳಲ್ಲಿ‌ ಮನವಿ‌ಮಾಡಿದ್ದಾರೆ.

ಕಾಲ ಚಕ್ರದಲ್ಲಿ ವಸಿಷ್ಠ

ಹುಟ್ಟು ಹಬ್ಬಕ್ಕೆ ‘ಕಾಲಚಕ್ರ’ ದ ಸಂಭ್ರಮ ..

ಕನ್ನಡದಲ್ಲಿ ವಸಿಷ್ಠ ಸಿಂಹ‌ ನಾಯಕರಾಗಿ ಅಭಿನಯಿಸಿರುವ ಚಿತ್ರಗಳ ಪೈಕಿ ಈಗ ಕಾಲಚಕ್ರ ರಿಲೀಸ್ ಗೆ ರೆಡಿ ಆಗಿದೆ. ವಸಿಷ್ಠ ಅವರಿಗೆ ಇದೊಂದು‌ಸ್ಪೆಷಲ್ ಸಿನಿಮಾ. ಅದಕ್ಕೆ ಕಾರಣ ಅವರ ಪಾತ್ರ. ಸುಮಾರು ಎಂಟು ಗೆಟಪ್, ನಾಲಹಬ್ಬ
ವಿಭಿನ್ನ ಪಾತ್ರ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ‌. ಹಾಗೆಯೇ ಇದೊಂದು ವಿಭಿನ್ನ ಹಂದರದ ಚಿತ್ರ ಎನ್ನುವುದು ಅವರ ವಿಶ್ವಾಸದ ಮಾತು. ಈ ಮಧ್ಯೆ :ಕಾಲ ಚಕ್ರ’ ಮಲಯಾಳಂನಲ್ಲೂನಿರ್ಮಾಣವಾಗುತ್ತಿದೆ. ‘ಕಾಲಚಕ್ರ’ ಚಿತ್ರದ
ರಿಮೇಕ್ ಹಕ್ಕು ಮಲೆಯಾಳಂ ಭಾಷೆಗೆ ಮಾರಾಟವಾಗುತ್ತಿದೆ. ಅಲ್ಲಿನ ಹೆಸರಾಂತ ನಿರ್ಮಾಪಕರೊಬ್ಬರು ‘ಕಾಲಚಕ್ರ’ ಚಿತ್ರದ ಕಥೆ ಇಷ್ಟಪಟ್ಟು ಮಲೆಯಾಳಂ ನಲ್ಲಿ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರಂತೆ. ಇದೊಂದು ಸಂತಸದ ವಿಷಯ ಎನ್ನುತ್ತಿದೆ‌ ಚಿತ್ರ ತಂಡ.

ತೆಲುಗು ಚಿತ್ತ ಒದೆಲಾ ರೈಲ್ವೆ ಸ್ಟೇಷನ್ ಪೋಸ್ಟರ್

ಟಾಲಿವುಡ್ ಗೆ ಹಾರಿದ‌ ಚಿಟ್ಟೆ…
ವಸಿಷ್ಠ ಸಿಂಹ‌ ಈಗ ಟಾಲಿವುಡ್ ನಲ್ಲೂ ಹೀರೋ. ವಿಲನ್ ಆಗಿ ಈಗಾಗಲೇ ಅಲ್ಲೂ ತಮ್ನ ಖಡಕ್ ಲುಕ್ ತೋರಿಸಿದ ಅವರಿಗೀಗ ಹೀರೋ ಆಗಿ ಕಾಣಿಸಿಕೊಳ್ಳುವ ಬಂಪರ್ ಅವಕಾಶವೂ ಸಿಕ್ಕಿದೆ. ಅದರಲ್ಲೂ ಪ್ರತಿಷ್ಟಿತ ಬ್ಯಾನರ್ ಗಳ ಸಿನಿಮಾಗಳಿಗೇ ಅವರು ಹೀರೋ ಆಗಿದ್ದಾರೆ. ಕನ್ನಡದ ‘ ಗ್ಯಾಂಗ್ ಸ್ಟರ್ ‘ ನ ತೆಲುಗು ವರ್ಷನ್ ಸೇರಿದಂತೆ ಓದೆಲ್ಲಾ ರೈಲ್ವೆಸ್ಟೇಷನ್ ಹೆಸರಿನ ಮತ್ತೊಂದು ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಅಷ್ಟೇ ಅಲ್ಲ, ಅಲ್ಲಿಯೇ ಇನ್ನೆರೆಡು ಸಿನಿಮಾ‌ಮಾತುಕತೆ ಹಂತದಲ್ಲಿವೆಯಂತೆ. ಕನ್ನಡದ ಹಾಗೆಯೇ ಟಾಲಿವುಡ್ ನಲ್ಲೂ ಸಿಂಹ, ಹೀರೋ‌ಆಗಿ ಬ್ಯುಸಿ ಆಗುತ್ತಿರುವುದು ವಿಶೇಷ.

Related Posts

error: Content is protected !!