ರಮೇಶ ಸುರೇಶನಿಗೆ ಜೋಡಿ ಈ ಬಜಾರಿ ಹುಡುಗಿ
ಚಂದನಾ ಸೇಗು… ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಈ ಹೆಸರು ಓಡುತ್ತಿದೆ. ಅದಕ್ಕೆ ಕಾರಣ ಆಗಿರೋದು “ರಮೇಶ ಸುರೇಶ” ಎಂಬ ಚಿತ್ರ. ಹೌದು, ತೆಲುಗು ಕಿರುತೆರೆ ಇಂಡಸ್ಟ್ರಿಯಲ್ಲಿ ಜೋರು ಸದ್ದು ಮಾಡಿರುವ ಚಂದನಾ ಸೇಗು ಇದೀಗ ಸದ್ಯದ ಮಟ್ಟಿಗೆ ಎಲ್ಲರ ಹಾಟ್ ಫೇವರ್. ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಮೆಲ್ಲನೆ ಗಟ್ಟಿ ಜಾಗ ಮಾಡಿಕೊಳ್ಳುತ್ತಿರುವ ನಟಿ.
ಆರಂಭದಲ್ಲಿ ಒಂದಷ್ಟು ಕಿರುತೆರೆಯಲ್ಲಿ ಮಿಂಚಿದ ಚಂದನಾ ಸೇಗು, ನಟಿ ಆಗುವ ಮುನ್ನ ಅವರು ಡಬ್ಬಿಂಗ್ ಕಲಾವಿದೆಯಾದವರು. ಈಗ “ರಮೇಶ ಸುರೇಶ” ಸಿನಿಮಾ ಮೂಲಕ ಒಂದಷ್ಟು ಸುದ್ದಿಯಾಗುತ್ತಿದ್ದಾರೆ. “ರಮೇಶ ಸುರೇಶ” ನಂತರ ಒಂದಷ್ಟು ಅವಕಾಶಗಳು ಹುಡುಕಿ ಬರುತ್ತಿರುವುದರಿಂದ ಸಹಜವಾಗಿಯೇ ಚಂದನಾ ಸೇಗು ಅವರಿಗೆ ಖುಷಿ ಇದೆ.
ತಮ್ಮ ಚಿತ್ರ “ರಮೇಶ ಸುರೇಶ” ಚಿತ್ರದ ಬಗ್ಗೆ ಹೇಳಿಕೊಳ್ಳುವ ಚಂದನಾ ಸೇಗು, “ಅದೊಂದು ಒಳ್ಳೆಯ ಕಥಾಹಂದರ ಇರುವಂತಹ ಚಿತ್ರ. ಪಾತ್ರ ಕೂಡ ಎಲ್ಲರಿಗೂ ಹಿಡಿಸುವಂಥದ್ದೇ. ಪಾತ್ರ ಕುರಿತು ಹೇಳುವುದಾದರೆ, ಅದೊಂದು ಸಿಕ್ಕಾಪಟ್ಟೆ ಬೋಲ್ಡ್ ಆಗಿರುವ ಹುಡುಗಿ ಪಾತ್ರ. ಒಂದು ರೀತಿ ಹುಡುಗರಿಗೆ ರೇಗಿಸುವ ಬಜಾರಿ ಅವಳು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ತನ್ನಲ್ಲಿರುವ ದುಡ್ಡನ್ನು ಡಬಲ್ ಮಾಡಿಕೊಳ್ಳಬೇಕೆಂದು ಹಂಬಲಿಸುವ ಹುಡುಗಿಯ ಪಾತ್ರವದು.ಇಡೀ ಸಿನಿಮಾ ಹಾಸ್ಯಮಯವಾಗಿ ಸಾಗಿದರೂ, ಅಲ್ಲೊಂದು ವಿಶೇಷ ಸಂದೇಶವಿದೆ.
ಈಗಿನ ಜನರಿಗೆ ರುಚಿಸುವ ಕಥೆ ಇಲ್ಲಿದೆ. ಆ ಸಿನಿಮಾದಲ್ಲಿ ಕೆಲಸ ಮಾಡಿದ್ದು, ನನಗೆ ನಿಜಕ್ಕೂ ಖುಷಿ ಕೊಟ್ಟಿದೆ. ಒಳ್ಳೆಯ ಕಥೆ, ಎಲ್ಲದ್ದನ್ನೂ ಪೂರೈಸಿದ ಆರ್.ಕೆ.ಟಾಕೀಸ್ ಬ್ಯಾನರ್ನ ಕೃಷ್ಣ ಸರ್ ಹಾಗೂ ಶಂಕರ್ ಸರ್. ಎಲ್ಲರನ್ನೂ ಪ್ರೀತಿಯಿಂದ ನೋಡುವ ಚಿತ್ರತಂಡ ಮತ್ತು ನಿದರ್ೇಶಕರಾದ ನಾಗರಜಾಜ್ ಮಲ್ಲಿಗೇನಹಳ್ಳಿ, ರಘುರಾಜ್ ಗೌಡ. ಇಡೀ ತಂಡ ಹೊಸಬರಾದರೂ, ಎಲ್ಲೂ ಗೊಂದಲವಿಲ್ಲದೆ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಮಾತಿನ ಭಾಗ ಪೂರ್ಣಗೊಂಡಿದ್ದು, ಫೈಟ್ ಸೀನ್ ಮುಗಿಸಿದರೆ ಚಿತ್ರಕ್ಕೆ ಕುಂಬಳಕಾಯಿ” ಎನ್ನುತ್ತಾರೆ ಚಂದನಾ ಸೇಗು.
“ರಮೇಶ ಸುರೇಶ” ಚಿತ್ರ ಒಪ್ಪಿಕೊಂಡ ಬಳಿಕ ನನಗೆ ಒಂದಷ್ಟು ಸಿನಿಮಾಗಳು ಹುಡುಕಿ ಬಂದಿದ್ದು ನಿಜ. ಹಾಗಂತ ಯಾವ ಚಿತ್ರವನ್ನೂ ಒಪ್ಪಿಲ್ಲ. ಮೊದಲು ಕಥೆ, ಪಾತ್ರ ನನಗೆ ಇಷ್ಟವಾಗಬೇಕು. ಆ ನಂತರ ತಂಡದ ಮೇಲೆ ನಂಬಿಕೆ ಬರಬೇಕು. ಹಾಗಿದ್ದರೆ ಮಾತ್ರ ಒಪ್ಪುತ್ತೇನೆ. ಇನ್ನು, ಲಾಕ್ಡೌನ್ ವೇಳೆಯೂ ಕಥೆ ಕೇಳಿದ್ದೆ. ಅದರ ಜೊತೆಯಲ್ಲಿ ಸೀರಿಯಲ್ ಕೂಡ ಅವಕಾಶ ಬಂದಿದ್ದುಂಟು.
ಸದ್ಯಕ್ಕೆ ನಾಲ್ಕು ಭಾಷೆಯಲ್ಲಿ ಮೂಡಿಬರುತ್ತಿರುವ ಧಾರಾವಾಹಿಯೊಂದರಲ್ಲಿ ನಟಿಸುವ ಬಗ್ಗೆ ಮಾತುಕತೆ ನಡೆದಿದ್ದು, ಆ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ಇಷ್ಟರಲ್ಲೇ ಅದರ ಪ್ರೋಮೋ ಬಿಡುಗಡೆಯಾಗಲಿದೆ ಎಂಬುದು ಅವರ ಮಾತು.ಅಂದಹಾಗೆ, ಚಂದನಾ ಸೇಗು ಕನ್ನಡದಲ್ಲಿ ಒಳ್ಳೆಯ ಅವಕಾಶ ಎದುರು ನೋಡುತ್ತಿದ್ದಾರೆ.