ಯಂಗ್ ವಿಲನ್, ನ್ಯೂ ವಿಷನ್ !

ಅರ್ಧಸೆಂಚುರಿಯತ್ತ ಯಶ್ ಶೆಟ್ಟಿ ,ಕೈಯಲ್ಲೀಗ ಸಾಲು ಸಾಲು ಸಿನಿಮಾ

ನಾನು ಯಾವತ್ತೂ ಸಂಭಾವನೆ ಹಿಂದೆ ಹೋದವನಲ್ಲ- ಯಶ್‌ ಶೆಟ್ಟಿ

ಕನ್ನಡದಲ್ಲಿ ಸದ್ಯ ವಿಲನ್ಗಳದ್ದೇ ಆರ್ಭಟ! ಅರೇ, ಇದೇನಪ್ಪಾ ಇಲ್ಲಿರೋದು ಹೀರೋಗಳ ಆರ್ಭಟವಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಹಾಗಂತ ಇಲ್ಲಿ ಹೀರೋಗಳ ಆರ್ಭಟವಿಲ್ಲ ಅಂತಲ್ಲ, ಅವರದ್ದೇ ಫುಲ್ ಹವಾ ಕೂಡ. ಆದರೆ, ವಿಲನ್ಗಳ ಆರ್ಭಟ ಇರದಿದ್ದರೆ, ಹೀರೋಗಳ ಹವಾ ನಿಜಕ್ಕೂ ಕಷ್ಟಸಾಧ್ಯ. ಇದು ಕಪ್ಪು ಬಿಳುಪು ಸಿನಿಮಾಗಳಿಂದಲೂ ಬೆಳೆದು ಬಂದಿದೆ. ಹೀರೋಗಷ್ಟೇ ವಿಲನ್ಗೂ ಬೆಲೆ ಇದೆ ಅನ್ನೋದನ್ನು ಅರವತ್ತು-ಎಪ್ಪತ್ತು ದಶಕಗಳಿಂದಲೂ ನೋಡಬಹುದು. ಅದು ಈಗಲೂ ಮುಂದುವರೆದಿದೆ. ಇಷ್ಟಕ್ಕೂ ಇಲ್ಲೀಗ ಹೇಳಹೊರಟಿರುವ ವಿಷಯ ಕನ್ನಡದ ಒಬ್ಬ ಖಡಕ್ ಯಂಗ್ ಖಳನಟನ ಬಗ್ಗೆ.
ಹೌದು, ಹೆಸರು ಯಶ್ ಶೆಟ್ಟಿ. ಈ ಹೆಸರು ಕೇಳಿದಾಕ್ಷಣ ಬಹುತೇಕ ಜನರಿಗೆ ಹಾಗೊಮ್ಮೆ ಕಣ್ಮುಂದೆ ಎತ್ತರ ನಿಲುವಿನ ನಗುಮೊಗುವಿನ ಯುವ ನಟ ನೆನಪಾಗುತ್ತಾನೆ. ಸದ್ಯಕ್ಕೆ ಕನ್ನಡದಲ್ಲಿ ಭವ್ಯ ಭರವಸೆ ಮೂಡಿಸಿರುವ ಯಶ್ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಬರೋಬ್ಬರಿ ಅವರ ನಟನೆಯ ಒಂಬತ್ತು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಇನ್ನು ನಟನೆಗೆ ಒಂದಷ್ಟು ಸಿನಿಮಾಗಳ ಉದ್ದನೆಯ ಸಾಲುಗಳೂ ಇವೆ. ಸದ್ಯ ಖಡಕ್ ಖಳನಟನ ಜೊತೆ ಸಿನಿಲಹರಿಯ ಒಂದು ಮಾತುಕತೆ.

* ನೀವೀಗ ಸಿಕ್ಕಾಪಟ್ಟೆ ಬಿಝಿ ಇರಬೇಕು?
– ಬಿಜಿಯಂತೇನಿಲ್ಲ. ನನ್ನ ಅಭಿನಯದ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಸಲಗ, ಏಕ್ ಲವ್ ಯಾ, ಕೃಷ್ಣ ಟಾಕೀಸ್ ಕಾಲಾಂತಕ, ವಿರಾಟ ಪರ್ವ, ಅಮರ ಪ್ರೇಮ ಕಥಾ, ಕಿರಾತಕ-2 ಧರಣಿ ಮಂಡಲ ಮಧ್ಯದೊಳಗೆ, ಮಾರಿಗೋಲ್ಡ್ ಕೆಜಿಎಫ್-2, ತ್ರಿಶೂಲಂ ಚಿತ್ರಗಳು ಬಿಡುಗಡೆಯಾಗಬೇಕಿದೆ. ಈ ಎಲ್ಲಾ ಚಿತ್ರಗಳಲ್ಲೂ ವಿಭಿನ್ನ ಪಾತ್ರಗಳೇ ಇವೆ. ವಿರಾಟ ಪರ್ವ, ಕಾಲಾಂತಕ ಚಿತ್ರಗಳಲ್ಲಿ ಮೇನ್ ಲೀಡ್ ಇದೆ.

* ಅರ್ಧ ಸೆಂಚುರಿ ಬಾರಿಸಿದ್ದೀರಿ ಅನ್ನಿ?
– ನಾನು 2016ರಲ್ಲಿ ಚಿತ್ರರಂಗ ಪ್ರವೇಶಿಸಿದೆ. “ಜ್ವಲಂತಂ” ಮೂಲಕ ನನ್ನ ಸಿನಿ ಜರ್ನಿ ಶುರುಮಾಡಿದೆ. ಅಲ್ಲಿಂದ ಈ ನಾಲ್ಕು ವರ್ಷದಲ್ಲಿ 33 ಚಿತ್ರಗಳಲ್ಲಿ ನಟಿಸಿದ್ದೇನೆ. ಕೈಯಲ್ಲಿ ಇನ್ನಷ್ಟು ಸಿನಿಮಾಗಳಿವೆ. ಈ ಕೊರೊನಾ ಇರದಿದ್ದರೆ, ಇಷ್ಟೊತ್ತಿಗೆ ಅರ್ಧ ಸೆಂಚುರಿ ಆಗುತ್ತಿತ್ತು. ಸದ್ಯಕ್ಕೆ ತಲ್ವಾರ್ ಪೇಟೆ ಸಿನಿಮಾ ಒಪ್ಪಿದ್ದು, ಅದರಲ್ಲಿ ನೆಗೆಟಿವ್ ರೋಲ್ ಇದೆ.
* ನಿಮಗೂ ಹೀರೋ ಆಗುವ ಅವಕಾಶ ಸಿಕ್ಕರೆ?
– ನಾನು ಸೌತ್ ಕನ್ನಡದವನು. ಇಲ್ಲಿಗೂ ಅಲ್ಲಿಗೂ ಭಾಷೆಯಲ್ಲಿ ಕೊಂಚ ಬದಲಾವಣೆ ಇದೆ. ನಾನು ಬಂದು ನಾಲ್ಕು ವರ್ಷದಲ್ಲಿ ಸುಧಾರಿಸಿಕೊಳ್ಳಲು ಜನರು ಸಮಯ ಕೊಟ್ಟಿದ್ದಾರೆ. ಮಂಗಳೂರು ಭಾಷಿಗನಾಗಿದ್ದರಿಂದ ಕನ್ನಡದಲ್ಲಿ ಒಂದಷ್ಟು ತೊಡಕು ಸಹಜವಾಗಿತ್ತು. ಈಗೀಗ ಕನ್ನಡ ಓದುವುದರ ಜೊತೆಗೆ ಹೆಚ್ಚೆಚ್ಚು ಕನ್ನಡ ಸಿನಿಮಾಗಳನ್ನು ನೋಡುತ್ತಿರುವುದರಿಂದ ಕನ್ನಡ ಸ್ಪಷ್ಟವೆನಿಸಿದೆ. ನಾನೀಗ ಗುರುತಿಸಿಕೊಂಡಿರುವುದಕ್ಕೆ ತೃಪ್ತಿ ಇದೆ. ನನಗೆ ಅಷ್ಟು ಸಾಕು. ಒಂದು ವೇಳೆ ಹೀರೋ ಆಗುವ ಅವಕಾಶ ಬಂದರೆ ಅದು ಆಮೇಲಿನ ಮಾತು. ಬಂದರೆ, ನಾನು ನೆಗೆಟಿವ್ ಶೇಡ್ ಪಾತ್ರ ಹಾಗೂ ಹೀರೋ ಪಾತ್ರ ಎರಡನ್ನೂ ಬ್ಯಾಲೆನ್ಸ್ ಮಾಡ್ತೀನಿ. ಹಾಗಂತ ಹುಡುಗಿಯರು ನನ್ನನ್ನು ನೋಡಿ ಮರುಳಾಗ್ತಾರೆ ಅನ್ನೋದು ಸಹ ಸುಳ್ಳು. ಕಂಟೆಂಟ್ ಸಿನಿಮಾ ಮಾಡೋಕೆ ಓರಿಯೆಂಟ್ ಇದ್ದರೆ ಮಾಡ್ತೀನಿ.

   ” ನಾನು ಯಾವತ್ತೂ ಸಂಭಾವನೆ ಹಿಂದೆ ಹೋದವನಲ್ಲ. ಹಾಗಂದುಕೊಂಡರೆ ಅದು ತಪ್ಪು ಕಲ್ಪನೆ. ನಾನೊಬ್ಬ ಕಲಾವಿದ. ನಾನೂ ಬದುಕುಬೇಕು ಹಾಗಾಗಿ ಇಂತಿಷ್ಟು ಅಂತ ಸಂಭಾವನೆ ಪಡೆಯುತ್ತೇನೆ. ಹಾಗಂತ ನಾನು ತುಂಬಾ  ದುಬಾರಿ ಅಲ್ಲ” 

* ಸಂಭಾವನೆ ದುಬಾರಿಯಂತೆ?
– ಅಯ್ಯೋ ಯಾರು ಹೇಳಿದ್ದು. ನಾನು ಯಾವತ್ತೂ ಸಂಭಾವನೆ ಹಿಂದೆ ಹೋದವನಲ್ಲ. ಹಾಗಂದುಕೊಂಡರೆ ಅದು ತಪ್ಪು ಕಲ್ಪನೆ. ನಾನೊಬ್ಬ ಕಲಾವಿದ. ನಾನೂ ಬದುಕುಬೇಕು ಹಾಗಾಗಿ ಇಂತಿಷ್ಟು ಅಂತ ಸಂಭಾವನೆ ಪಡೆಯುತ್ತೇನೆ. ಹಾಗಂತ ನಾನು ತುಂಬಾ ಕಾಸ್ಲ್ಟಿಯಂತೂ ಅಲ್ಲ. ನಾನೀಗಾಗಲೇ ತಂಬಾ ಜನ ಹೊಸಬರ ಜತೆ ಕೆಲಸ ಮಾಡಿದ್ದೇನೆ. ಅವರನ್ನೊಮ್ಮೆ ಕೇಳಿದರೆ ನಾನು ಸಂಭಾವನೆ ವಿಷಯದಲ್ಲಿ ಹೇಗೆ ಅಂತ ಗೊತ್ತಾಗುತ್ತೆ. ನನಗೆ ಪಾತ್ರ ಚೆನ್ನಾಗಿದ್ದರೆ ಅಷ್ಟೇ ಸಾಕು. ಸಂಭಾವನೆ ಆಮೇಲಿನದ್ದು. ಇದುವರೆಗೆ ನನ್ನ ಹುಡುಕಿ ಬಂದ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. ಯಾರನ್ನೂ ಹಿಂದಕ್ಕೆ ಕಳಿಸಿಲ್ಲ.

* ಬೇರೆ ಭಾಷೆಯಿಂದ ಅವಕಾಶವೇನಾದರೂ?
– ನಾನು ಎನ್ಎಸ್ಡಿಯಲ್ಲಿ(ರಾಷ್ಟ್ರೀಯ ನಾಟಕ ಶಾಲೆ ದೆಹಲಿ) ಕಲಿತು ಬಂದವನು. ಅಲ್ಲಿ ನಾಸಿರುದ್ದೀನ್ ಶಾ, ಅನುಪಮ್ ಖೇರ್, ಅತುಲ್ ಕುಲಕಣರ್ಿ, ನವಾಜದ್ದೀನ್ ಸಿದ್ದಿಕಿ ಸೇರಿದಂತೆ ಹಲವು ದಿಗ್ಗಜರು ಅಲ್ಲೆಲ್ಲಾ ನಟನೆ ಕಲಿಸಿದ್ದೂ ಹೌದು. ಅಲ್ಲಿ ಎಂಟ್ರಿ ತುಂಬಾ ಕಷ್ಟ. ಹೇಗೋ ಸಿಕ್ಕ ಅವಕಾಶವನ್ನು ಬಳಸಿಕೊಂಡೆ. ಅಲ್ಲಿಯೇ ನನಗೆ ಏ ಗ್ರೇಡ್ ನಟನಾಗಿ ಆಯ್ಕೆ ಮಾಡಿ, ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಅದಕ್ಕಾಗಿ 40 ಸಾವಿರ ರುಪಾಯಿ ಸಂಬಳವೂ ಇತ್ತು. ಆದರೆ, ನನಗೆ ನನ್ನ ತವರು ಕನ್ನಡದಲ್ಲೇ ಬೆಳೆಯಬೇಕೆಂಬ ಆಸೆ ಇತ್ತು. ಹಾಗಾಗಿ ಇಲ್ಲಿ ಬಂದು ನಟನಾಗಿ ಕೆಲಸ ಮಾಡುತ್ತಿದ್ದೇನೆ. ಈಗ ಬೇರೆ ಭಾಷೆಯಿಂದ ಅವಕಾಶ ಬಂದರೂ ಮಾಡ್ತೀನಿ. ಮೊದಲ ಆದ್ಯತೆ ಕನ್ನಡಕ್ಕೆ ಮಾತ್ರ.

” ಹೀರೋ ಆಗಬೇಕು ಅಂತಿಲ್ಲ. ಆದರೆ, ಕಂಟೆಂಟ್ ಇದ್ದರೆ ಯಾವುದೇ ಪಾತ್ರವಾದರೂ ಸರಿ ಮಾಡ್ತೀನಿ. ನನ್ನ ಪ್ರಕಾರ ನಿರ್ದೇಶಕ ಹೀರೋ. ಅವರು ಬರೆಯೋ ಕಥೆ ಹೀರೋ ಆಗಿರಬೇಕು. ಅವರೇ ಮೊದಲು” 

* ಈಗಲೂ ಥಿಯೇಟರ್ ನಂಟು ಇದೆಯಾ?
– ನಾಟಕ ನೋಡುವ ಖಯಾಲಿ ಹೆಚ್ಚಿದೆ. ಈಗ ಸಿನಿಮಾ ಕೆಲಸ ಬಿಝಿ ಇರುವುದರಿಂದ ಹೆಚ್ಚೆಚ್ಚು ಅತ್ತ ತೊಡಗಿಸಿಕೊಳ್ಳಲು ಆಗುತ್ತಿಲ್ಲ. ನಾನು 2012ರಲ್ಲಿ ಚೈನಾದಲ್ಲಿ ನಡೆದ ಏಷ್ಯನ್ ಥಿಯೇಟರ್ ಎಜುಕೇಷನ್ ಸೆಂಟರ್ ನಾಟಕೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದೇನೆ. ಹಾಗಾಗಿ ನಾಟಕ ಅಂದರೆ ಅಚ್ಚುಮೆಚ್ಚು. ಹೀರೋ ಆಗಬೇಕು ಅಂತಿಲ್ಲ. ಆದರೆ, ಕಂಟೆಂಟ್ ಇದ್ದರೆ ಯಾವುದೇ ಪಾತ್ರವಾದರೂ ಸರಿ ಮಾಡ್ತೀನಿ.

* ಖಳನಾಯಕನಿಂದ ನಾಯಕನಾಗಬಾರದೇಕೆ?
– ಹೀರೋ ಆಗಬೇಕು ಅಂತಿಲ್ಲ. ಆದರೆ, ಕಂಟೆಂಟ್ ಇದ್ದರೆ ಯಾವುದೇ ಪಾತ್ರವಾದರೂ ಸರಿ ಮಾಡ್ತೀನಿ. ನನ್ನ ಪ್ರಕಾರ ನಿರ್ದೇಶಕ ಹೀರೋ. ಅವರು ಬರೆಯೋ ಕಥೆ ಹೀರೋ ಆಗಿರಬೇಕು. ಅವರೇ ಮೊದಲು. ಆ ನಂತರ ನಾವು. ಮೊದಲೇ ಹೇಳಿದಂತೆ ಹೀರೋ ಆಗುವ ಆಸೆ ಇಲ್ಲ. ಒಬ್ಬ ಕಲಾವಿದ ಎನಿಸಿಕೊಳ್ಳುವ ಆಸೆ ಇದೆ.

* ಫ್ಯಾಮಿಲಿ ಬಗ್ಗೆ ಹೇಳೋದಾದರೆ?
ನಮ್ಮದು ಉಡುಪಿ. ತಾಯಿ ಮತ್ತು ದೊಡ್ಡಮ್ಮ ಇದ್ದಾರೆ. ಚಿಕ್ಕ ಕುಟುಂಬ ನನ್ನದು. ಅವರೇ ನನ್ನ ಬೆಳವಣಿಗೆಗೆ ಸ್ಫೂತರ್ಿ. ಇನ್ನಷ್ಟು ಗಟ್ಟಿಯಾಗಿ ಬೆಳೆದು ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಈ ನಡುವೆ ಹಿಂದಿಯಲ್ಲಿ ಕಬೀರ್ ಖಾನ್ ಪ್ರೊಡಕ್ಷನ್ನಿಂದ “ಫರ್ಗಟನ್ ಆಮರ್ಿ” ಎಂಬ ವೆಬ್ ಸೀರೀಸ್ ನಟಿಸುವ ಅವಕಾಶ ಬಂದಿತ್ತು. ಬೇರೆ ಸಿನಿಮಾ ಒಪ್ಪಿದ್ದರಿಂದ ಮೊದಲ ಅವಕಾಶಕ್ಕೆ ಮೊದಲ ಆದ್ಯತೆ ಅಂತ ಕನ್ನಡ ಬಿಟ್ಟು ಬೇರೇಲ್ಲೂ ಹೋಗಲಿಲ್ಲ.

Related Posts

error: Content is protected !!