ಚಿತ್ರರಂಗಕ್ಕೆ ಪರ್ವಕಾಲ, ಹಾಗೆಯೇ ಅಗ್ನಿಪರೀಕ್ಷೆಯ ಕಾಲವೂ ಹೌದು
ಚಿತ್ರ ರಂಗಕ್ಕೆ ನಾಳೆ ಪರ್ವ ಕಾಲ. ಒಂದ್ರೀತಿ ಅಗ್ನಿಪರೀಕ್ಷೆಯ ಕಾಲವೂ ಹೌದು. ಹೆಚ್ಚು ಕಡಿಮೆ ಏಳು ತಿಂಗಳ ನಂತರ ಚಿತ್ರಮಂದಿರಗಳು ಒಪನ್ ಆಗುತ್ತಿವೆ. ಆ ಮೂಲಕ ಸಿನಿಮಾಗಳೂ ರಿಲೀಸ್ ಆಗುತ್ತಿವೆ. ಹಾಗಂತ ರಿಲೀಸ್ ಆದ ಸಿನಿಮಾಗಳೆಲ್ಲ ರಾಜ್ಯದ ಎಲ್ಲಾ ಚಿತ್ರ ಮಂದಿರಗಳಲ್ಲೂ ಬಿಡುಗಡೆ ಆಗುತ್ತಿವೆ ಎನ್ನುವ ನಂಬಿಕೆಯಾಗಲಿ, ಒಪನ್ ಆದ ಚಿತ್ರಮಂದಿ ರಗಳಿಗೆ ಪ್ರೇಕ್ಷಕರು ಬರುತ್ತಾರೆನ್ನುವ ಖಾತರಿ ಯಾರಿಗೂ ಇಲ್ಲ. ಆದರೂ ಮುಂದಿನ ಒಂದಷ್ಟು ಕಾಲದ ಭವಿಷ್ಯ ನಾಳೆ ನಿರ್ಧಾರವಾಗುತ್ತೆ.
ಒಂದು ಪ್ರಯೋಗವಷ್ಟೇ..
ಕೊರೋನಾ ಬಗ್ಗೆ ಜನರಿಗೆ ಮೊದಲಿನಷ್ಟು ಭಯ ಇಲ್ಲ ಎನ್ನುವುದು , ಅದರ ಜತೆಗೆ ಬಹುತೇಕ ಚಟುವಟಿಕೆ ಮೊದಲಿನಂತಾಗುತ್ತಿರುವುದು ಒಂದಷ್ಟು ನಂಬಿಕೆ ಹುಟ್ಟಿಸಿದ್ದು.ಆದರ ವಾಸ್ತವ ನಾಳೆ ಮತ್ತು ನಾಡಿದ್ದು ಗೊತ್ತಾಗಲಿದೆ. ಯಾಕಂದ್ರೆ ನಾಳೆ ಒಂದಷ್ಟು ಸಿನಿಮಾಗಳು ರಿಲೀಸ್ ಆಗುತ್ತಿದ್ದರೆ, ನಾಡಿದ್ದು ಒಂದೆರೆಡು ಚಿತ್ರಗಳು ತೆರೆ ಕಾಣುತ್ತಿವೆ. ಎಲ್ಲವೂ ಪ್ರಯೋಗ. ಜತೆಗೆ ರಿ ರಿಲೀಸ್.
ಮತ್ತೊಂದು ಅವಕಾಶ ಸಿಕ್ಕ ಖುಷಿ..
ಸದ್ಯಕ್ಕೀಗ ಗೊತ್ತಾಗಿರುವ ಪ್ರಕಾರ ‘ಲವ್ ಮಾಕ್ಟೆಲ್, ‘ಶಿವಾರ್ಜುನ’, :’ಶಿವಾಜಿ ಸುರತ್ಕಲ್”, ಕಾಣದಂತೆ ಮಾಯವಾದನು’ ಹಾಗೂ’ ಥರ್ಢ್ ಕ್ಲಾಸ್’ ಹಾಚಿತ್ರಗಳು ಬಿಡುಗಡೆ ಘೋಷಿಸಿವೆ . ಮುಂದಿನ ವಾರಕ್ಕೆ ‘ದಮಯಂತಿ ‘ ಫಿಕ್ಸ್ ಆಗಿದೆ.ಇವೆಲ್ಲ ಲಾಕ್ ಡೌನ್ ಆರಂಭಕ್ಕೂ ಮುನ್ನವೇ ರಿಲೀಸ್ ಆದ ಚಿತ್ರಗಳು. ಕೆಲವು ಚಿತ್ರಗಳಿಗೆ ಒಳ್ಳೆಯ ಒಪನಿಂಗ್ ಕೂಡ ಸಿಕ್ಕಿತ್ತು. ಇನ್ನು ಕೆಲವು ರಿಲೀಸ್ ಆದ ಒಂದೇ ವಾರದಲ್ಲಿ ಲಾಕ್ ಡೌನ್ ಹೊಡೆತಕ್ಕೆ ಸಿಲುಕಿದವು. ಈಗ ಅವೆಲ್ಲವಕ್ಕೂ ಮತ್ತೊಂದು ಅವಕಾಶ ಸಿಕ್ಕಿದೆ. ಅದು ಎಷ್ಡರ ಮಟ್ಟಿಗೆ ಸಫಲವಾಗುತ್ತೆ ಎನ್ನುವುದು ಸಹಜವಾಗಿಯೇ ಕುತೂಹಲ ಹುಟ್ಟಿಸಿದೆ.
200 ಟಾಕೀಸ್ ಗಳು ಒಪನ್ ಆಗುವುದೇ ಡೌಟಂತೆ..
ಮೊದಲೇ ರಾಜ್ಯದಲ್ಲಿ ಚಿತ್ರಮಂದಿರಗಳ ಪರಿಸ್ಥಿತಿ ಭೀಕರವಾಗಿತ್ತು. ಬೆಂಗಳೂರಿನ ಕೆ.ಜಿ ರಸ್ತೆಯ ಚಿತ್ರಮಂದಿರಗಳು ಸೇರಿ ರಾಜ್ಯದ ಹಲವೆಡೆ ಚಿತ್ರಮಂದಿರಗಳು ಉರುಳಿಬಿದಿದ್ದವು. ಅದೇ ಹಾದಿಯಲ್ಲಿ ಸಾಕಷ್ಟು ಚಿತ್ರಮಂದಿರಗಳು ಇದ್ದವು. ಅವುಗಳಿಗೆಲ್ಲ ಕೊರೋನಾ ಅನ್ನೋದೇ ಒಂದು ನೆಪವಾಗಿದೆ. ಲಾಕ್ ಡೌನ್ ಕಾರಣಕ್ಕೆ ಬಾಗಿಲು ಮುಚ್ವಿರುವ ರಾಜ್ಯದ 700 ಕ್ಕೂ ಹೆಚ್ಚು ಚಿತ್ರಮಂದಿರಗಳ ಪೈಕಿ 200 ಚಿತ್ರಮಂದಿರಗಳು ಇನ್ನು ಮುಂದೆ ಒಪನ್ ಆಗುವುದೇ ಡೌಟು ಎನ್ನುವ ಮಾತು ಚಿತ್ರೋದ್ಯಮದವರಿಂದಲೇ ಕೇಳಿಬಂದಿದೆ.
ಕೆಲವು ತೆರೆಗೆ ವಿನಾಯಿತಿಗೂ ಜೀವ ಉಳಿಸಿಕೊಂಡಿವೆ….
ರಾಜ್ಯದ ಚಿತ್ರಮಂದಿರಗಳ ಮಾಲೀಕರು ಈಗ ಸರ್ಕಾರದ ಮುಂದೆ ಒಂದು ಬೇಡಿಕೆ ಇಟ್ಟಿದ್ದಾರಂತೆ. ಲಾಕ್ ಡೌನ್ ಅವಧಿಯಲ್ಲಿ ಚಿತ್ರಮಂದಿರಗಳು ಶಾಶ್ವತವಾಗಿ ಬಾಗಿಲುಮುಚ್ವಿದ್ದರಿಂದ ತೀವ್ರ ಆರ್ಥಿಮ ಸಂಕಷ್ಟ ಎದುರಾಗಿದೆ. ಸಿಬ್ಬಂದಿ ಸಂಬಳ, ನಿತ್ಯ ನಿರ್ವಹಣೆಗೆ ತೊಂದರೆಯಾಗಿದೆ. ಅಂತಹದರಲ್ಲಿ ಕರೆಂಟ್ ಬಿಲ್ಲು ಸೇರಿ ಸರ್ಕಾರವು ಟಾಕೀಸ್ ಮಾಲೀಕರಿಗೆ ವಿಧಿಸಿರುವ ಇತರೆ ತೆರಿಗೆಗೆ ವಿನಾಯಿತಿ ಕೊಡಬೇಕು. ಲಾಕ್ ಡೌನ್ ಕಾಲದ ವಿದ್ಯುತ್ ಬಿಲ್ ಮನ್ನಾ ಮಾಡಬೇಕು. ಸರ್ಕಾರ ಹಾಗೊಂದು ಭರವಸೆ ನೀಡುವ ತನಕ ಚಿತ್ರಮಂದಿರಗಳನ್ನು ಬಂದ್ ಮಾಡಬೇಕೆಂಬ ನಿರ್ಧಾರ ಮಾಡಿರುವ ಸುದ್ದಿಯಿದೆ. ಸರ್ಕಾರ ಅದನ್ನು ಎಷ್ಟರಮಟ್ಟಿಗೆ ಪರಿಗಣಿಸುತ್ತೋ ಗೊತ್ತಿಲ್ಲ. ಆದರೆ, ಸರ್ಕಾರ ನಿರ್ಧಾರದ ಮೇಲೆ ರಾಜ್ಯದ ಟಾಕೀಸ್ ಗಳ ಅಸ್ತಿತ್ವವೂ ಅಡಗಿದೆ ಎನ್ನುವ ಮಾತುಗಳನ್ನು ಕೇಳಿದರೆ, ಟಾಕೀಸ್ ಗಳು ಉಳಿತ್ರವೋ ಇಲ್ಲವೋ? ನೆನೆಸಿಕೊಂಡರೆ ಭಯ ಶುರುವಾಗುತ್ತೆ.