ಹಾಸ್ಯದ ಚೇತೋಹಾರಿ… ಚೇತನ್ ಫ್ರಮ್ ದುರ್ಗ

ಸಿನಿಮಾನೇ ಹಾಗೆ. ಇಲ್ಲಿಗೆ ಒಂದು ಬಾರಿ ಬಂದು ಬಣ್ಣ ಹಚ್ಚಿಕೊಂಡು ಕ್ಯಾಮೆರಾ ಮುಂದೆ ನಿಂತರೆ ಸಾಕು, ಕಲೆ ಆವರಿಸಿಕೊಂಡುಬಿಡುತ್ತೆ. ಎಷ್ಟೇ ಕಷ್ಟ ಬಂದರೂ ಬಣ್ಣದ ಮೇಲಿನ ಪ್ರೀತಿ
ಹೋಗುವುದಿಲ್ಲ. ಹೀಗೆ ಕಲೆಯೇ ನನ್ನುಸಿರು ಅಂದುಕೊಂಡು ಇಲ್ಲಿಗೆ ಬಂದಿರುವ ಅದೆಷ್ಟೋ ಮನಸ್ಸುಗಳು ಇಂದು ಅಂದುಕೊಂಡಿದ್ದನ್ನು ಸಾಧಿಸಿ ನಿಟ್ಟುಸಿರು ಬಿಟ್ಟಿವೆ. ಆ ಸಾಲಿಗೆ ಈಗ ಕೋಟೆ ನಾಡಿನ ಪ್ರತಿಭೆ ಕೂಡ ಸೇರಿದೆ.
ಹೆಸರು ಚೇತನ್. ಸದಾ ಉತ್ಸಾಹಿ. ಸಿಕ್ಕಾಪಟ್ಟೆ ಮಾತುಗಾರ. ಯಾವಾಗಲೂ ಒಂದಿಲ್ಲೊಂದು ಸಿನಿಮಾ ಚಟುವಟಿಕೆಗಳಲ್ಲಿರುವ ಅಪ್ಪಟ ದೇಸಿ ಪ್ರತಿಭೆ. ಮೊದಲೇ ಹೇಳಿದಂತೆ ಚೇತನ್ ಚಿತ್ರದುರ್ಗದ ಹುಡುಗ. ಚಿತ್ರದುರ್ಗ ಅಂದಾಕ್ಷಣ ನೆನಪಾಗೋದೇ “ನಾಗರಹಾವು”. ಹೀಗಾಗಿ ಆ ನೆಲದ ಬಹುತೇಕ ಹುಡುಗರು ಸಹಜವಾಗಿಯೇ ನಟನೆಯತ್ತ ವಾಲಿದ್ದುಂಟು. ಆ ಕಲೆಯ ನಂಟು ಈ ಚೇತನ್ಗೂ ಇದೆ. ಹೀಗಾಗಿಯೇ ಚೇತನ್ ತಮ್ಮ ಹೆಸರ ಮುಂದೆ “ದುರ್ಗ”ಹೆಸರು ಸೇರಿಸಿಕೊಂಡಿದ್ದಾರೆ. ಈ ಹೆಸರಲ್ಲೇ ಅವರು ಗುರುತಿಸಿಕೊಂಡಿರುವುದೂ ಉಂಟು. ಚೇತನ್ ದುರ್ಗ ಇದೀಗ ಸೋಶಿಯಲ್ ಮೀಡಿಯಾದಲ್ಲೇ ಹೆಚ್ಚು ಸುದ್ದಿಯಾಗಿರುವ ಪ್ರತಿಭೆ. ಫೇಸ್ಬುಕ್ ಹಿಡಿದವರಿಗೆ ಈ ಹುಡುಗನ ಪರಿಚಯ ಇದ್ದೇ ಇರುತ್ತೆ. ಚೇತನ್ ಮಾತುಗಳಲ್ಲಿ ಹಾಸ್ಯ ಹಾಸುಹೊಕ್ಕಾಗಿದೆ. ಹಾವ-ಭಾವದಲ್ಲೂ ನಗಿಸೋ ಗುಣ ಈ ಪ್ರತಿಭೆಯಲ್ಲಿದೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಚೇತನ್ ದುರ್ಗ ಎಲ್ಲರ ಫೇವರೇಟ್.

 

ಚೇತನ್ ಸಿನಿ ಜರ್ನಿ

ಚೇತನ್ ದುರ್ಗ ಇಂಜಿನಿಯರಿಂಗ್ ಓದಿದ್ದಾರೆ. ಆದರೆ, ಎಲ್ಲರಂತೆ ಸಾಫ್ಟ್ವೇರ್ ಕಂಪೆನಿಯತ್ತ ಮುಖ ಮಾಡಬೇಕಿದ್ದ ಹುಡುಗ ಗಾಂಧಿನಗರದ ಕಡೆ ಮುಖ ಮಾಡಿದೆ. ಮೊದಲೇ ಹೇಳಿದಂತೆ ಕೋಟಿ ನಾಡಿನ ಹುಡುಗನಾಗಿದ್ದರಿಂದ ಅಲ್ಲಿ ರಾಮಾಚಾರಿಯ ಗಾಳಿ ತುಸು ಜೋರಾಗಿಯೇ ಬೀಸಿದೆ. ಆದ್ದರಿಂದಲೇ, ಅವರು ಕೆಲಸ ಪಕ್ಕಕ್ಕಿಟ್ಟು, ಧೈರ್ಯ ಮಾಡಿ ಸಿನಿರಂಗಕ್ಕೆ ಎಂಟ್ರಿಯಾದರು. ಮೊದಲು ಕಾಣಿಸಿಕೊಂಡಿದ್ದು ಕಿರುತೆರೆಯಲ್ಲಿ. ಮಾಸ್ಟರ್ ಆನಂದ್ ನಿದರ್ೇಶನದಲ್ಲಿ ಮೂಡಿಬಂದ “ರೋಬೋ ಫ್ಯಾಮಿಲಿ” ಧಾರಾವಾಹಿಯಲ್ಲಿ ಇವರದು ಹಾಸ್ಯ ಪಾತ್ರ. ಆ ಮೂಲಕ ಭರವಸೆ ಮೂಡಿಸಿದ ಚೇತನ್ ದುರ್ಗ ಮೆಲ್ಲನೆ ಅವಕಾಶ ಗಿಟ್ಟಿಸಿಕೊಳ್ಳುತ್ತಾ ಹೋದರು.
ಆ ನಂತರದಲ್ಲಿ ಸಿನಿಮಾ ರಂಗ ಕೂಡ ಕೈ ಬೀಸಿ ಕರೆದಿದ್ದರಿಂದ ಅತ್ತ ಮುಖ ಮಾಡಿದರು. ನಿದರ್ೇಶನ ತಂಡದಲ್ಲೂ ಇವರು ಕೆಲಸ ಶುರುಮಾಡಿದರು. “ಲೈಫು ಸೂಪರ್”, “ಕನ್ನಡಕ್ಕಾಗಿ ಒಂದನ್ನು ಒತ್ತಿ”, “ಗೌಡ್ರು ಹೋಟೆಲ್”, “ವ್ಹೀಲ್ ಚೇರ್ ರೋಮಿಯೊ” ಚಿತ್ರದಲ್ಲಿ ಬರಹ ಕೆಲಸ ಮಾಡಿದರು. ಇನ್ನು, ಇವುಗಳ ಜೊತೆ ಜೊತೆಯಲ್ಲೇ ಹಲವು ಜಾಹಿರಾತು ಕಂಪೆನಿಗಳಲ್ಲಿ ಒಂದು ವರ್ಷ ಬರಹಗಾರರಾಗಿಯೂ ಕೆಲಸ ಮಾಡಿದ್ದಾರೆ. ಜೀ ಕನ್ನಡ ವಾಹಿನಿಯ ಹಲವು ಪ್ರೋಮೋಗಳಿಗೂ ಚೇತನ್ ದುರ್ಗ ಸಹ ನಿದರ್ೇಶಕರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಚಿತ್ರಗಳಲ್ಲೂ ನಟನೆ ಶುರು ಮಾಡಿದ ಚೇತನ್ ದುರ್ಗ ಅಲ್ಲೂ ಎಲ್ಲರ ಮನಗೆದ್ದಿದ್ದಾರೆ. “ರಾಗ”, “ತಿರುಪತಿ ಎಕ್ಸ್ಪ್ರೆಸ್”, “ಟೆರರಿಸ್ಟ್” , “ಕನ್ನಡಕ್ಕಾಗಿ ಒಂದನ್ನು ಒತ್ತಿ”, “ಮೃಗಶಿರ” ಸೇರಿದಂತೆ ಇನ್ನೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಅಭಿನಯಿಸಿರುವ “ಕಿರಾತಕ-2”, “ಖಾಸಗಿ ಪ್ರೇಮ ಕಥೆ”, “ದಿ ರಿಟನ್ಸರ್್ ಆಫ್ ಕರ್ಮ”, “ಗಜಾನನ ಅಂಡ್ ಗ್ಯಾಂಗ್” ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. “ಗಜಾನನ ಅಂಡ್ ಗ್ಯಾಂಗ್” ಚಿತ್ರದಲ್ಲಿ ಚೇತನ್ ದುರ್ಗ ಐವರಲ್ಲಿ ಇವರೂ ಒಬ್ಬರಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

 

ಟ್ರೋಲ್ ವಿಡಿಯೋ ಕಿಂಗ್!

ಈಗಂತೂ ಎಲ್ಲೆಡೆ ಸೋಶಿಯಲ್ ಮೀಡಿಯಾದ್ದೇ ಹವಾ. ಅದರಲ್ಲೂ ಟ್ರೋಲ್ ವಿಡಿಯೊಗಳಿಂದ ಸಾಕಷ್ಟು ಸುದ್ದಿಯಾಗಿರುವ ಚೇತನ್ ದುರ್ಗ, ಮೆಚ್ಚುಗೆ ಪಡೆದುಕೊಂಡಿರುವುದೂ ಉಂಟು. ನೋಡದೇ ಇರೋರು, ಅವರ ಚೇತನ್ ದುರ್ಗ ಫೇಸ್ ಬುಕ್ ಪೇಜ್ಗೆ ಹೋಗಿ ನೋಡಿದರೆ, ಇವರೊಳಗಿರುವ ಹಾಸ್ಯ ಕಲಾವಿದನ ಬಗ್ಗೆ ತಿಳಿಯುತ್ತೆ. ಈಗಾಗಲೇ ಇವರ ಟ್ರೋಲ್ ವಿಡಿಯೋಗಳನ್ನು ನೋಡಿ, ನಟರಾದ ಧ್ರುವ ಸಜರ್ಾ, ಸಂಚಾರಿ ವಿಜಯ್, “ರಾಜಾಹುಲಿ” ಗಿರೀಶ್, ಸುಚೇಂದ್ರ ಪ್ರಸಾದ್, ನಿದರ್ೇಶಕರಾದ ಸಿಂಪಲ್ ಸನಿ, ಮಂಜು ಸ್ವರಾಜ್ ಮೆಚ್ಚಿದ್ದಾರೆ. ಸದ್ಯಕ್ಕೆ ನಟನಾಗಿ ಗುರುತಿಸಿಕೊಳ್ಳಬೇಕೆಂದಿರುವ ಚೇತನ್ ದುರ್ಗ, “ತಾರೆ” ಹೆಸರಿನ ವಿಡಿಯೊ ಆಲ್ಬಂನಲ್ಲೂ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಬಗೆಯ ಪಾತ್ರಗಳನ್ನು ಎದುರು ನೋಡುತ್ತಿರುವ ಚೇತನ್ ದುರ್ಗ ಅವರಿಗೆ ಇಲ್ಲಿ ಗಟ್ಟಿನೆಲೆ ಕಾಣುವ ಭವ್ಯಭರವಸೆಯಂತೂ ಇದೆ

Related Posts

error: Content is protected !!