ಅವಕಾಶಕ್ಕಾಗಿ ಪರದಾಡುತ್ತಿದ್ದ ಹುಡುಗಿ, ಇವತ್ತು ಬಹು ಬೇಡಿಕೆಯ ನಟಿ , ಸಾಲು ಸಾಲು ಸಿನಿಮಾಗಳಿಗೆ ನಾಯಕಿ. ಇದಕ್ಕೆಲ್ಲ ಕಾರಣ ಯಾರು ಗೊತ್ತಾ? ಈ ಸ್ಟೋರಿ ನೋಡಿ
ಖುಷಿ ಅಲಿಯಾಸ್ ದಿಯಾ ಇವತ್ತು ಕನ್ನಡದ ಬಹು ಬೇಡಿಕೆ ನಟಿ. ಕೊರೋನಾ ಸೃಷ್ಟಿಸಿದ ಅತೀವ ಸಂಕಷ್ಟದ ಕಾಲದಲ್ಲೂ ‘ದಿಯಾ’ 2020 ರ ಸೂಪರ್ ಹಿಟ್ ಚಿತ್ರ. ಚಿತ್ರಮಂದಿರಗಳ ಜತೆಗೆ ಅನ್ ಲೈನ್ ಜಗತ್ತಿನಲ್ಲೂ ಇದು ಸೃಷ್ಟಿಸಿದ ಹವಾ, ಈ ನಟಿಯನ್ನು ರಾತ್ರೋರಾತ್ರಿ ಸ್ಟಾರ್ ಆಗಿಸಿತು . ಅದರ ಫಲವೇ ಎನ್ನುವ ಹಾಗೆ ಈ ನಟಿ ಇವತ್ತು ಸಾಲು ಸಾಲು ಸಿನಿಮಾಗಳಿಗೆ ನಾಯಕಿ.
ಅದೃಷ್ಟ ಅಂದ್ರೆ ಹೀಗೆಯೇ. ಯಾವಾಗ ,ಹೇಗೆ , ಯಾರಿಗೆ ಒಲಿದು ಬರುತ್ತೆ ಅನ್ನೋದೇ ಗೊತ್ತಾಗುವುದಿಲ್ಲ. ಅಂತಹ ಅದೃಷ್ಟವೀಗ ಈ ನಟಿಗೆ ದಿಯಾ ಹೆಸರಿನೊಂದಿಗೆ ಒಲಿದು ಬಂದಿದ್ದು ಬಿದ್ದಿದೆ. ಅದೇ ಚಿತ್ರದ
ಜನಪ್ರಿಯತೆಯೊಂದಿಗೆ ಖುಷಿ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯಕ್ಕೀಗ ಅವರ ಕೈಯಲ್ಲಿ ಐದಾರು ಸಿನಿಮಾಗಳಿವೆ. ಆ ಸಿನಿಮಾಗಳಲ್ಲಿಬ್ಯುಸಿ ಇರುವಾಗಲೇ’ ದಿಯಾ’ ರೀ ರಿಲೀಸ್ ಆಗುತ್ತಿರುವುದು ನಟಿ ಖುಷಿ ಅವರಲ್ಲಿ ಥ್ರಿಲ್ ತರಿಸಿದೆ.
‘ ನಿಜ, ಕೊರೋನಾ ಆತಂಕದ ನಡುವೆಯೂ ನಾನೀಗ ಸಾಕಷ್ಟು ಅವಕಾಶಗಳೊಂದಿಗೆ ಸಿಕ್ಕಾಪಟ್ಟೆ ಬ್ಯುಸಿಯಾಗಿರಬಹುದು. ಬಟ್, ಇದಕ್ಕೆಲ್ಲ ಕಾರಣ ‘ದಿಯಾ’ ಚಿತ್ರ. ಆ ಚಿತ್ರ ಮತ್ತೆ ಈಗ ಬಿಡುಗಡೆ ಆಗುತ್ತಿದೆ ಅಂತ ಚಿತ್ರ ತಂಡದವರು ಹೇಳಿದಾಗ ಥ್ರಿಲ್ ಆದೆ. ಹಳೆಯ ಎಕ್ಸೈಟ್ ಮೆಂಟ್ ಈಗಲೂಶುರುವಾಗಿದೆ. ಹಾಗಂತ ಜನ ಅದನ್ನು ಹೇಗೆ ಸ್ವೀಕರಿಸುತ್ತಾರೆನ್ನುವ ಭಯಕ್ಕಲ್ಲ . ಒಂಥರ ಖುಷಿ. ಹಾಗೆಯೇ ಅದು ಇನ್ನಷ್ಟು ಜನರಿಗೆ ತಲುಪಲಿ ಎನ್ನುವ ಆಶಯಕ್ಕೆ’ ಅಂತ ತಮ್ಮ ಮುದ್ದಾದ ಮುಖದಲ್ಲಿನಗು ಅರಳಿಸುತ್ತಾರೆ ನಟಿ ಖುಷಿ.
‘ದಿಯಾ’ ಚಿತ್ರದ ಹಾಗೆಯೇ ಈ ವರ್ಷದ ಬ್ಲಾಕ್ ಬಸ್ಟರ್ಚಿತ್ರ. ‘ಲವ್ಮಾಕ್ಟೆಲ್’ ಕೂಡರೀರಿಲೀಸ್ ಆಗುತ್ತಿದೆ. ಹಾಗೆಯೇ ಫೆಬ್ರವರಿ ಕೊನೆಯಲ್ಲಿ ಬಿಡುಗಡೆ ಕಂಡ ಮತ್ತಷ್ಟು ಸಿನಿಮಾಗಳು ಜನರ ಮುಂದೆ ಬರುತ್ತಿವೆ. ಆ ಕತೆ ಬೇರೆ. ಆದರೆ’ ದಿಯಾ ‘ ಹೆಸರಿನ ಒಂದುಸಿನಿಮಾ ಸಂಕಷ್ಟದ ಕಾಲದಲ್ಲೂಗೆದ್ದುಬಿಗಿದು, ಅದರ ಕಲಾವಿದರ ಬದುಕಲ್ಲಿ ಎಷ್ಟೇಲ್ಲ ಟ್ವಿಸ್ಟ್ ನೀಡಿತು ಎನ್ನುವುದಕ್ಕೆ ಸಾಕ್ಷಿ ನಾಯಕಿ ಖುಷಿ ಅವರೇ ಸಾಕ್ಷಿ.
ನಕ್ಷೆ, ಸ್ಪೂಕಿ ಕಾಲೇಜ್, ಮಾರ್ಗ ಚಿತ್ರಗಳ ಜತೆಗೆ ‘ ದಿಯಾ’ ಚಿತ್ರ ಹೀರೋ ಪೃಥ್ವಿ ಅಂಬರ ಅವರೇ ಕತೆ ಬರೆದು ನಾಯಕರಾಗಿರುವ ಮತ್ತೊದು ಚಿತ್ರಕ್ಕೂನಟಿ ಖುಷಿ ನಾಯಕಿ ಆಗಿದ್ದಾರೆ. ಈಗಾಗಲೇ ಅಷ್ಟು ಚಿತ್ರಗಳು ಶುರುವಾಗಿ, ಮುಹೂರ್ತ ಹಾಗೂ ಚಿತ್ರೀಕರಣದೊಂದಿಗೆ ಸುದ್ದಿ ಮಾಡಿವೆ. ಒಂದು ಚಿತ್ರ ನವೆಂಬರ್ತಿಂಗಳಲ್ಲಿ ಸೆಟ್ಟೇರುತ್ತಿದೆ. ಇನ್ನೆರೆಡು ಕತೆಗಳು ಫೈನಲ್ ಆಗಿದ್ದು, ಅವು ಕೂಡ ಇಷ್ಟರಲ್ಲಿಯೇ ಸೆಟ್ಟೇರಲಿವೆ ಎನ್ನುವ ಅಧಿಕೃತ ಮಾಹಿತಿ ಖುಷಿ ಅವರಿಂದಲೇ ಬಹಿರಂಗಗೊಂಡಿದೆ.
ಒಟ್ಟಿನಲ್ಲಿ , ಒಂದು ಚಿತ್ರ ಗೆದ್ದರೆ ಏನೆಲ್ಲ ಆಗುತ್ತೆ, ಅದರ ನಟ-ನಟಿಯರು, ಕಲಾವಿದರು ಹೇಗೆಲ್ಲ ಬ್ಯುಸಿಯಾಗಬಲ್ಲರು ಎನ್ನುವುದಕ್ಕೆ ಸಾಕ್ಷಿ .ಒಂದು ಕಾಲದಲ್ಲಿ ಅಂದ್ರೆ ಮೊದಲಚಿತ್ರ ಬಂದುಹೋದ ದಿನಗಳಲ್ಲಿ ಅವಕಾಶಕ್ಕಾಗಿಪರದಾಡುತ್ತಿದ್ದ ಹುಡುಗಿ ಇವತ್ತು ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ. ಸಾಲು ಸಾಲು ಸಿನಿಮಾಗಳಿಗೆ ನಾಯಕಿ. ಅವರ ಹೇಳುವ ಹಾಗೆ ಕತೆಕೇಳುವುದಕ್ಕೂ ಸಮಯ ಸಿಗ್ತಿಲ್ವಂತೆ. ಟೈಮ್ ಅಂದ್ರೆ ಇದೇ ಅಲ್ವಾ? ಎಲ್ಲವೂ ಅದೃಷ್ಟದಾಟ.
….