ದರ್ಶನ್ ಪಾಲಿಗೆ ಕಭಿ ‌ಖುಷಿ , ಕಭಿ ಗಮ್ !

ಡಿಸೆಂಬರ್ ನಲ್ಲಿ ರಾಬರ್ಟ್, ಡಿ.ಬಾಸ್ ಅಭಿಮಾನಿಗಳಿಗೆ  ಭರ್ಜರಿ ಹಬ್ಬ 


ದರ್ಶನ್ ಅವರಿಗೂ ಬೇಮೊದಲುಸರ ಇದೆ‌. ಹಾಗಂತ ಅದೊಂದು ವಿಚಾರಕ್ಕೆ ಖುಷಿಯೂ ಇದೆ. ಅದೇನು ವಿಚಾರ ?ಈ ಸ್ಟೋರಿ ನೋಡಿ.

ಕನ್ನಡದ ಬಹುತೇಕ ಸ್ಟಾರ್ ಗಳು ಇಂದು ಬೇಸರದಲ್ಲಿದ್ದಾರೆ. ಅಂತಹದೇ ಒಂದು ಬೇಸರ ದರ್ಶನ್ ಅವರಿಗೂ ಇದೆ. 2020 ರ ಈ ದಿನದವರೆಗೂ  ಅವರ ಅಭಿನಯದ ಒಂದೇ ಒಂದು‌ ಸಿನಿಮಾ ಅಭಿಮಾನಿಗಳ ಮುಂದೆ ಬರದೇ ಹೊಯಿತ್ತಲ್ಲ ಎನ್ನುವುದೇ ಅದಕ್ಕೆ ಕಾರಣ. ಯಾಕಂದ್ರೆ, ದರ್ಶನ್ ಅವರ ಸಿನಿ‌ಜರ್ನಿಯ ಇಷ್ಟು ವರ್ಷಗಳಲ್ಲಿ ಯಾವತ್ತಿಗೂ ಹೀಗೆ ಆಗಿರಲಿಲ್ಲ. 2014 ರಲ್ಲಿ ಒಮ್ಮೆ ಹೀಗಾಗಿತ್ತಾದರೂ, ಆಗೆಲ್ಲ ಅವರು ಚಿತ್ರೀಕರಣದಲ್ಲಿ ಬ್ಯುಸಿಯಿದ್ದರು. ಶೂಟಿಂಗ್ ಅಂತಲೋ, ಟೀಸರ್ ಲಾಂಚ್ ಅಂತಲೋ ಸದಾ ಒಂದಲ್ಲೊಂದು‌ ಕಾರಣಕ್ಕೆ ಸುದ್ದಿಯಲ್ಲಿದ್ದರು. ಹಾಗಾಗಿ ಆ ವರ್ಷ ಅವರು ತೆರೆ ಮೇಲೆ ಕಾಣಿಸಿಕೊಳ್ಳದಿದ್ದರೂ, ಅಭಿಮಾನಿಗಳಿಗೆ ಬೇಸರ ಎನಿಸಲಿಲ್ಲ. ಆದರೂ ಬೇಸರ ದೂರವಾಗುವ ಕಾಲ ಸನಿಹವಾಗಿದೆ‌.

 

 

ಎಲ್ಲದಕ್ಕೂ ‘ಅದೇ ‘ ಕಾರಣ !

ಅದು ಬಿಟ್ಟರೆ ಪ್ರತಿ ವರ್ಷ ಒಂದೋ ಅಥವಾ ಅದಕ್ಕಿಂತ ಹೆಚ್ಚೋ ಸಿನಿಮಾಗಳ ಮೂಲಕ ಅವರು ತೆರೆ ಮೇಲೆ‌ ಬಂದು‌ ಆಭಿಮಾನಿಗಳನ್ನು‌ ರಂಜಿಸುತ್ತಿದ್ದರು. ಸೂಪರ್ ಹಿಟ್ ಸಿನಿಮಾ‌ ಕೊಟ್ಟು ಬಾಕ್ಸ್ ಆಫೀಸ್ ಸುಲ್ತಾನ್ ಎನ್ನುವುದನ್ನು ಸಾಬೀತು ಮಾಡುತ್ತಿದ್ದರು. ಅವರ ಅಭಿಮಾನಿಗಳೂ ಖುಷಿ ಪಡುತ್ತಿದ್ದರು. ಅವರನ್ನು ಇಷ್ಟ ಪಡುತ್ತಿದ್ದವರಿಗೆ ಅದೇ ಸಮಾಧಾನ ಇರುತ್ತಿತ್ತು. ಆದರೆ ಈ ವರ್ಷ ಈ ತನಕ ಹಾಗೆ ಆಗಿಲ್ಲ. ಕೊರೋನಾ ಬಂದು‌ ಎಲ್ಲವನ್ನು ತೆಲೆ ಕೆಳಗು ಮಾಡಿತು. ಬಹು ಬೇಡಿಕೆಯ ನಟ ದರ್ಶನ್ ಸಿನಿಮಾ ಕೂಡ ಈ ವರ್ಷದಲ್ಲಿ ತೆರೆಗೆ ಬರದಂತಾಯಿತು.ಚಿತ್ರೀಕರಣದಲ್ಲಿದ್ದ ‘ರಾಜಾವೀರ ಮದಕರಿ ನಾಯಕ ‘ ಚಿತ್ರಕ್ಕೂ ಅದು ಅಡ್ಡಿಯಾಯಿತು. ಹೊಸ ಸಿನಿಮಾದ ಆರಂಭಕ್ಕೂ‌ಅಡಚಣೆಯಾಗಿದ್ದು ನಿಮಗೂ ಗೊತ್ತು. ಇದು ದರ್ಶನ್ ಅವರಿಗೆ ಮಾತ್ರವಲ್ಲ ಅವರ ಅಭಿಮಾನಿಗಳಿಗೂ ಬೇಸರವೇ ಹೌದು‌.

ಕೊರೋನಾ ಬರದಿದ್ದರೆ..‌‌

ಒಂದು ವೇಳೆ ಕೊರೋನಾ ಬರದಿದ್ದರೆ, ಎಲ್ಲವೂ ಅಂದುಕೊಂಡಂತೆಯೇ ಆಗುತ್ತಿದ್ದವು. ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ರಾಬರ್ಟ್’ ಈ ವರ್ಷದ ಆರಂಭದಲ್ಲೇ ತೆರೆಗೆ ಬರುತ್ತಿತ್ತು. ವರ್ಷದ ಆರಂಭದಲ್ಲೆ ಈ‌ ಚಿತ್ರದ ಬಿಡುಗಡೆಯ ಸುದ್ದಿ ಹರಡಿತ್ತು.
ಕೊನೆಗೆ ಫೆಬ್ರವರಿ ಗೆ ಬರುತ್ತೆ ಅಂತಾಯಿತು‌. ‘ ರಾಮನವಮಿ’ ಗೆ ಖಚಿತ ಅಂತಲೂ ಹೇಳಲಾಯಿತು. ಅದಕ್ಕೆ ಪೂರಕವಾಗಿಯೇ ಚಿತ್ರ ತಂಡ ಸಿದ್ದತೆಯೂ ನಡೆಸಿತು.ಅಲ್ಲಿಂದ ಮಾರ್ಚ್ ತಿಂಗಳಿಗೆ ಕನಫರ್ಮ್ ಆಗಿತ್ತು. ಮತ್ತೊಂದೆಡೆ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಹಾಗೂ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ರಾಜವೀರ ಮದಕರಿ ನಾಯಕ ಚಿತ್ರಕ್ಕೂ ಚಿತ್ರೀಕರಣ ಶುರುವಾಗಿತ್ತು. ಚಿತ್ರ ತಂಡದ ದುರ್ಗ ಭೇಟಿ ದರ್ಶನ್ ಅಭಿಮಾನಿಗಳಲ್ಲಿ ದೊಡ್ಡ ಕ್ರೇಜ್ ಹುಟ್ಟಿಸಿತ್ತು. ಅದರ ಜತೆಗಯೇ ನಿರ್ಮಾಪಕ ಉಮಾಪತಿ ಹಾಗೂ ನಿರ್ದೇಶಕ ತರುಣ್ ಸುದೀರ್ ಕಾಂಬಿನೇಷನ್ ಮೂಲಕವೇ ದರ್ಶನ್ ಅಭಿನಯದ‌‌ ಮತ್ತೊಂದು ಚಿತ್ರಕ್ಕೂ ತಯಾರಿ‌ ನಡೆದಿತ್ತು. ಎಲ್ಲವೂ ಇನ್ನೇನು ಕೊರೋನಾ ಬಂದು ಎಲ್ಲವನ್ನು ತಲೆ ಕೆಳಗು ಮಾಡಿತು.

 

ಅದೊಂದು ಬೇಸರ ದರ್ಶನ್ ಅವರಿಗೂ ಇದೆ…

ಎಲ್ಲವೂ ಅಂದುಕೊಂಡಂತಾಗಿದ್ದರೆ ಈ ವರ್ಷದಲ್ಲಿ ದರ್ಶನ್ ಅಭಿನಯದ ‘ರಾಬರ್ಟ್’ ತೆರೆಗೆ ಬರಲಿತ್ತು. ವರ್ಷದ ಆಭದಿಂದಲೂ‌ ದರ್ಶನ್ ಅಭಿಮಾನಿಗಳು ಅದರ ಆಗಮನಕ್ಕೆ ತುದಿಗಾಲ ಮೇಲೆ ನಿಂತಿದ್ದರು. ದರ್ಶನ್ ಅಭಿನಯದ ಚಿತ್ರ ಎನ್ನುವುದಕ್ಕಷ್ಟೇ ಅಲ್ಲ,ಹಲವು ಕಾರಣಕ್ಕೆ ಈ ಚಿತ್ರ ದೊಡ್ಡ ಸದ್ದು ಮಾಡಿತ್ತು. ಚಿತ್ರದ ಪೋಸ್ಟರ್ ಗಳೆಲ್ಲವೂ ವೈರಲ್ ಆಗಿದ್ದವು. ಹಾಗೆಯೇ ಚಿತ್ರದ ದೊಡ್ಡ ತಾರಾಗಣವೂ ಕುತೂಹಲ ಮೂಡಿಸಿತ್ತು. ಕೊನೆ ಪಕ್ಷ ಮಾರ್ಚ್ ತಿಂಗಳಲ್ಲಾದರೂ ಕಣ್ತುಂಬಿ ಕೊಳ್ಳಬಹುದೆನ್ನುವ ಅಭಿಮಾನಿಗಳ‌‌ನಿರೀಕ್ಷೆ ಹುಸಿಯಾಗಿದ್ದ ಕೊರೋನಾ ಕಾರಣಕ್ಕೆ‌ . ಅಂದು‌ ಹುಸಿಯಾದ ನಿರೀಕ್ಷೆ ಈಗಲೂ ಕೈ ಗೂಡುತ್ತಿಲ್ಲ. ಈ ಇನ್ನೇನು ಅಕ್ಟೋಬರ್‌ ಕಳೆದು ನವೆಂಬರ್ ಬಂದರೂ ಚಿತ್ರ ಮಂದಿರಗಳು ಶುರುವಾಗುವುದು ಡೌಟು. ಚಿತ್ರ ಮಂದಿರಗಳು ತೆರೆದರೂ ಆಡಿಯನ್ಸ್ ಬರುವುದು ಕಷ್ಟ. ಅದೆಲ್ಲ ಕಾರಣಕ್ಕೆ ಈ ವರ್ಷದ ಮಟ್ಟಿಗೆ ಅಭಿಮಾನಿಗಳ ಪಾಲಿಗೆ ದರ್ಶನ್ ಅಭಿನಯದ ಸಿನಿಮಾ‌ತೆರೆ ಮೇಲೆ ಕಾಣಿಸಿಕೊಳ್ಳುವ ಬಗ್ಗೆ ಖಚಿತತೆ ಇಲ್ಲ. ಅದೊಂದು ಬೇಸರ ದರ್ಶನ್ ಅವರಿಗೂ ಇದೆ.

ಮತ್ತೊಂದೆಡೆ ಖುಷಿಯೂ ಇದೆ..
ಈ ವರ್ಷದ ಈ ದಿನದವರೆಗೂ ಸಿನಿಮಾ ಬರಲಿಲ್ಲ ಎನ್ನುವ ನೋವು ದರ್ಶನ್ ಅವರಿಗಿದ್ದರೂ, ಮತ್ತೊಂದೆಡೆ‌ ಅವರಿಗೆ ಖುಷಿಯೂ ಇದೆ. ಹಾಗಂತ ಅವರೇ ಹೇಳಿದ್ದಾರೆ. ‘ ಇಡೀ ಜಗತ್ತಿಗೇ ಕೊರೋನಾ ಬಂದಿದೆ. ಯಾರೇನು‌ಮಾಡುವುದಕ್ಕೆ ಆಗೋದಿಲ್ಲ. ಎಲ್ಲರೂ ಜೀವ ಉಳಿಸಿಕೊಳ್ಳುವುಸಕ್ಕಾಗಿಯೇ ಹೋರಾಡಬೇಕಾದ ಸಂದರ್ಭದಲ್ಲಿ ನನ್ನ ಸಿನಿಮಾ‌ಬಿಡುಗಡೆ ಆಗಲಿಲ್ಲ ಬೇಸರ ಯಾಕೆ ಆಗಬೇಕು. ಹಾಗೆ ನೋಡಿದರೆ ಈ‌ ಸಮಯದಲ್ಲಿ ಕೃಷಿ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು ಎನ್ನುವ ಖುಷಿ ನನಗಿದೆ ‘ ಅಂತ ದರ್ಶನ್ ಅವರೇ ಹೇಳಿಕೊಂಡಿದ್ದರು. ಅದು ನಿಜವೂ ಹೌದು‌. ಕೊರೋನಾ ಕಾರಣಕ್ಕೆ ಆದ ಲಾಕ್ ಡೌನ್ ಸಮಯದಲ್ಲಿ ‌ದರ್ಶನ್ ಫಾರಂ ಹೌಸ್ ನಲ್ಲಿದ್ದರು. ಒಂದಷ್ಟು ದಿನ ವ್ಯವಸಾಯ ಅಂತ ಬ್ಯುಸಿಯಾಗಿದ್ದರು. ಕುದುರೆ ಸಾಕಾಣೆ, ಹಸುಗಳ ಆರೈಕೆ ಅಂತ‌ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಲಾಕ್ ಡೌನ್ ತೆರೆವಾದ ನಂತರ ತಮ್ಮ‌ನೆಚ್ಚಿನ ಪೋಟೋ ಗ್ರಪಿಗಾಗಿ ಭದ್ರ ಅಭಯಾರಣ್ಯ, ಡಾರ್ಜಿಲಿಂಗ್ ಕಾಡು ಸುತ್ತಿದರು. ಅಲ್ಲಿಂದ ಬಂದು ಕುರಿ‌ಖರೀದಿ, ಎಮ್ಮೆ ಖರೀದಿ ಅಂತ ಉತ್ತರ ಕರ್ನಾಟಕ ಪ್ರವಾಸ ಮಾಡಿದರು. ಇದೆಲ್ಲವೂ ಅವರ ಖುಷಿಯ ಕಾರ್ಯಕ್ರಮ ಗಳು. ಕೊರೋನಾ‌ ಕಾರಣಕ್ಕೆ‌ಅವರ ಸಿನಿಮಾ‌ ಬಂದಿಲ್ಲ‌ಎನ್ನುವ ಅಭಿಮಾನಿಗಳಿಗಿದ್ದರೂ , ಕೃಷಿ ಕಡೆ ಗಮನ ಹರಿಸಲು ಒಂದಷ್ಟು ಸಮಯ ಸಿಕ್ಕಿತ್ತೇನು ಖುಷಿ ದರ್ಶನ್ ಅವರಿಗಿದೆ. ಆದರೆ ಸಿನಿಮಾ ಅವರ ಮುಖ್ಯ ಕ್ಷೇತ್ರ. ಅದಷ್ಟು ಬೇಗ ಅದು ಶುರುವಾಗಬೇಕೆನ್ನುವ ಕಾತರ ಅವರಲ್ಲೂ ಇದೆ.

Related Posts

error: Content is protected !!