ಅಶ್ವಿನ್ ಹಾಸನ್ ಗೆ ಸಿಕ್ಕ ಸ್ಯಾಂಡಲ್ವುಡ್ ಆಸನ

ಸಾಫ್ಟ್ ವೇರ್ ಹುಡುಗನ ಬಣ್ಣದ ಹೆಜ್ಜೆ…

ಕಳೆದ ಒಂದುವರೆ ದಶಕದ ಹಿಂದಿನ ಮಾತಿದು. ಆ ಸ್ಪುರದ್ರೂಪಿ ಹುಡುಗ ಆಗಷ್ಟೇ ಎಂಜಿನಿಯರಿಂಗ್ ಮುಗಿಸಿದ್ದ. ಕೆಲಸ ಅರಸಿ ಬೆಂಗಳೂರಿಗೆ ಬಂದಿಳಿದಿದ್ದ. ಮಧ್ಯಮ ವರ್ಗದವರ ಮನೆಯ ಹುಡುಗನಾಗಿದ್ದರಿಂದ ಅವರ ಮನೆಯಲ್ಲೂ ಒಂದಷ್ಟು ಸಮಸ್ಯೆ ಕಾಮನ್ ಆಗಿತ್ತು. ಹೀಗಾಗಿ ಕೆಲಸ ಮಾಡಿ ಬದುಕು ನಡೆಸಲೇಬೇಕಾದ ಅನಿವಾರ್ಯತೆ ಇತ್ತು. ಸಾಫ್ಟ್ವೇರ್ ಕಂಪೆನಿ ಸೇರಿದ್ದ ಆ ಹುಡುಗನ ಮನದಲ್ಲಿ ತಾನೊಬ್ಬ ನಟ ಆಗಬೇಕೆಂಬ ಬಯಕೆ ಇತ್ತು. ಆದರೆ, ಮನೆಯಲ್ಲಿ ವಿರೋಧ. ಆ ವಿರೋಧದ ನಡುವೆಯೂ, ಕೆಲಸ ಮಾಡಿಕೊಂಡೇ, ಈ ಬಣ್ಣದ ಲೋಕದಲ್ಲಿ ಮಿಂದೆದ್ದು, ಇಂದು ಮನೆಯವರ ಪಾಲಿಗೆ ವಿಶ್ವಾಸ ಗಳಿಸಿದ್ದಷ್ಟೇ ಅಲ್ಲ, ಸಿನಿಮಂದಿಯ ನಂಬಿಕೆಗೂ ಪಾತ್ರರಾಗಿ, ಈಗಲೂ ಬಿಝಿ ನಟನಾಗಿ ಬೆಳೆಯುವ ಮೂಲಕ ತನ್ನ ಬಣ್ಣದ ಆಸೆ ಈಡೇರಿಸಿಕೊಂಡಿದ್ದಾರೆ.
ಅಂದಹಾಗೆ, ಅವರು ಬೇರಾರೂ ಅಲ್ಲ, ಅಶ್ವಿನ್ ಹಾಸನ್. ಹೌದು. ಅಶ್ವಿನ್ 2005ರಲ್ಲಿ ಹಾಸನದಲ್ಲಿ ಎಂಜಿನಿಯರಿಂಗ್ ಮುಗಿಸಿ, ನೇರ ಕೆಲಸ ಅರಸಿ ಬೆಂಗಳೂರಿಗೆ ಬಂದವರು. ತನ್ನೊಳಗೆ ನಟನೆಯ ಆಸೆ ಬೇರೂರಿತ್ತು. ಹಾಗಾಗಿ ಕೆಲಸ ಮಾಡುತ್ತಲೇ ಅಲ್ಲಲ್ಲಿ ಆಡಿಷನ್ಗೆ ಹೋಗಿ ಅವಕಾಶಕ್ಕಾಗಿ ಅಲೆದಾಡುತ್ತಿದ್ದರು. ಆರಂಭದ ದಿನಗಳಲ್ಲಿ ಅಶ್ವಿನ್ ಹಾಸನ್ ಅವರಿಗೆ ಯಶ್ ಹಾಗೂ ಗಿರಿ ಗೆಳೆಯರಾಗಿದ್ದರು. ನಂತರ ನಿದರ್ೇಶಕ ವಿನು ಬಳಂಜ ಪರಿಚಯವಾಗಿ ರಂಗಭೂಮಿ ಕಡೆ ವಾಲುವಂತೆ ಮಾಡಿದರು. ಹಾಗಾಗಿ ಇಂದಿಗೂ ಅವರಿಗೆ ವಿನು ಬಳಂಜ ಗುರು ಸಮಾನ. ಕಲಾಗಂಗೋತ್ರಿಗೆ ಕಾಲಿಡುತ್ತಿದ್ದಂತೆಯೇ, ಅಶ್ವಿನ್ ಹಾಸನ್ ಅವರ ಲೈಫ್ ಕೊಂಚ ಟನರ್್ ಆಯ್ತು. ಕಲಾಗಂಗೋತ್ರಿಯಲ್ಲಿ ಇಂದಿಗೂ ಗುರುತಿಸಿಕೊಂಡಿರುವ ಅಶ್ವಿನ್, ಹಲವ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಆ ಬಳಗದಲ್ಲಿ ಡಾ.ಬಿ.ವಿ.ರಾಜರಾಮ್ ದತ್ತಣ್ಣ, ಗಂಗೋತ್ರಿ ಮಂಜುನಾಥ್, ಬಿ.ಸುರೇಶ, ರಾಜೇಂದ್ರ ಕಾರಂತ್, ಮುಖ್ಯಮಂತ್ರಿ ಚಂದ್ರು, ಶ್ರೀವತ್ಸ, ವಿದ್ಯಾ,ಕಿಟ್ಟಿ ಹೀಗೆ ದೊಡ್ಡವರಿದ್ದರು. ಅವರೆಲ್ಲರ ಜೊತೆ ಕೆಲಸ ಮಾಡಿದ ಖುಷಿ ಅಶ್ವಿನ್ ಅವರದು.

ಮೊದಲ ಆಪರೇಷನ್…!
ಅಶ್ವಿನ್ ಅವರಿಗೆ ಕಲಾಗಂಗೋತ್ರಿ ಸಾಕಷ್ಟು ಕಲಿಸಿತು. ಅದೇ ಕಲಿಕೆ ಅವರನ್ನು ಕಿರುತೆರೆ ಪ್ರವೇಶಿಸುವಂತೆ ಮಾಡಿತು. ವಾಹಿನಿಯೊಂದರಲ್ಲಿ ಮೂಡಿಬರುತ್ತಿದ್ದ “ಅಪ್ಪ” ಎಂಬ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಟಿ.ಎಸ್. ನಾಗಾಭರಣ ನಿದರ್ೇಶಕರು. ಆ ಧಾರಾವಾಹಿಗೆ ಎಂ.ಕೆ.ಮಠ ಅವರು ಸಂಚಿಕೆ ನಿದರ್ೇಶಕರಾಗಿದ್ದರು. ಅವರ ಸಹಕಾರ ಸಾಕಷ್ಟು ಇದ್ದುರಿಂದಲೇ ಅವರು, ಅಲ್ಲಿ ಕೆಲಸ ಮಾಡಿದರು. ಇನ್ನು, ಒಂದು ವರ್ಷ ಸೀರಿಯಲ್ ಮಾಡಿಕೊಂಡೇ, ಸತ್ಯಂ ಕಂಪ್ಯೂಟರ್ಸ್ನಲ್ಲೂ ಕೆಲಸ ಮಾಡುತ್ತಿದ್ದರು. ನಂತರ “ಮಳೆಬಿಲ್ಲು” ಎಂಬ ಮತ್ತೊಂದು ಸೀರಿಯಲ್ನಲ್ಲೂ ನಟಿಸುವ ಅವಕಾಶ ಬಂತು. 2006ರಲ್ಲಿ ಅವರು ನಟಿಸಿದ ಮೊದಲ ಚಿತ್ರ “ಆಪರೇಷನ್ ಅಂಕುಶ” ನಂತರ ರವಿಚೇತನ್ ರೆಫರ್ ಮಾಡಿದ “ಮಂದಾಕಿನಿ” ಸಿನಿಮಾದಲ್ಲಿ ಸೆಕೆಂಡ್ ಲೀಡ್ ಮಾಡಿ ಸೈ ಎನಿಸಿಕೊಂಡರು.
ಮನೆಯಲ್ಲಿ ಕಷ್ಟ ಇದ್ದುದರಿಂದ ಅವರು ಕೆಲಸ ಬಿಡುವ ಪರಿಸ್ಥಿತಿಯಲ್ಲಿರಲಿಲ್ಲ. ಅತ್ತ ಎಜುಕೇಷನ್ ಲೋನ್ ತೀರಿಸಬೇಕಿತ್ತು. ಮನೆಯಲ್ಲೂ ನೋಡಿಕೊಳ್ಳಬೇಕಿತ್ತು. ಹಾಗಾಗಿ ಜಾಬ್ ಬಿಡದೆ, ಎರಡನ್ನೂ ನಿಭಾಯಿಸುತ್ತ ಹೋದರು. ಹೀಗಿರುವಾಗಲೇ ಅವರು ಕೆಲಸ ಮಾಡುತ್ತಿದ್ದ ಕಂಪೆನಿ 2007 ಡಿಸೆಂಬರ್ನಲ್ಲಿ ಫ್ರಾನ್ಸ್ ಹೋಗಬೇಕೆಂದು ಆದೇಶಿಸಿತು. ಮರು ಮಾತನಾಡದೆ, ಅಶ್ವಿನ್ ಹಾಸನ್ ಫ್ರಾನ್ಸ್ಗೆ ಹೋಗಿ, ಸುಮಾರು 10 ತಿಂಗಳು ಕೆಲಸ ಮಾಡಿ, ನಂತರ ನಟನೆಯ ಸೆಳೆತ ಇತ್ತ ಎಳೆದಿದ್ದರಿಂದ ಆರೋಗ್ಯ ಸಮಸ್ಯೆಯ ನೆಪ ಹೇಳಿ ಪುನಃ ಇತ್ತ ಬಂದುಬಿಟ್ಟರು. ಫ್ರಾನ್ಸ್ಗೂ ಹೋಗುವ ಮುನ್ನ ಅವರು ಡಾ. ವಿಷ್ಣುವರ್ಧನ್ ಜೊತೆ “ವಿಷ್ಣು ಸೇನೆ” ಚಿತ್ರದಲ್ಲಿ ನಟಿಸಿದ್ದರು. ಫಾರಿನ್ನಿಂದ ಬಂದ ಬಳಿಕ ಅಶ್ವಿನ್ ಸುಮ್ಮನೆ ಕೂರಲಿಲ್ಲ. ನಟಿಸುವ ಆಸೆ ಇತ್ತು. ಪುನಃ ಹುಡುಕಾಟ ಶುರು ಮಾಡಿದರು. ಆಗ ರವೀಂದ್ರ ವಂಶಿ ಮಾಡಿದ ಕಿರುಚಿತ್ರದಲ್ಲಿ ನಟಿಸಿದರು. ಕೆಲಸ ಮಾಡುತ್ತಲೇ ಸಿನಿಮಾ ಅವಕಾಶಕ್ಕಾಗಿ ಹುಡುಕಾಡುತ್ತಲೇ ಇದ್ದರು. ಈ ಮಧ್ಯೆ 2010ರಲ್ಲಿ ಲವ್ ಮ್ಯಾರೇಜ್ ಆಯ್ತು. ಅತ್ತ ಸಿನಿಮಾ ಸೆಳೆತ ಇದ್ದುದರಿಂದ ಏನು ಮಾಡಬೇಕು ಎಂಬ ಗೊಂದಲದಲ್ಲಿದ್ದ ಅಶ್ವಿನ್ಗೆ ಪತ್ನಿಯ ಸಹಕಾರವಿತ್ತು. ಜಾಬ್ ಮಾಡಿಕೊಂಡೇ ಸಿನಿಮಾ ಮಾಡಿದರಾಯ್ತು ಅಂತ ರಂಗಭೂಮಿ ನಂಟು ಬಿಡದೆ ದಿನಗಳನ್ನು ಕಳೆಯುತ್ತಾ ಹೋದರು.

ಹುಡುಕಿ ಬಂದ ಅವಕಾಶ
2011ರಲ್ಲಿ ನಿದರ್ೇಶಕ ಮಧುಸೂದನ್ ಪರಿಚಯ ಆಯ್ತು. “ಪಲ್ಲವಿ ಅನುಪಲ್ಲವಿ” ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸುವ ಅವಕಾಶ ಸಿಕ್ಕಿತು. ಆದರೆ, 15 ದಿನಗಳ ಡೇಟ್ ಬೇಕಿತ್ತು. ಕಂಪೆನಿಯಲ್ಲಿ ಅಷ್ಟೊಂದು ದಿನ ರಜೆ ಕೊಡುವಂತಿರಲಿಲ್ಲ. ಪುನಃ ಪೇಚಿಗೆ ಸಿಲುಕಿದ ಅಶ್ವಿನ್, ಒಮ್ಮೆ ಹಿರಿಯ ಕಲಾವಿದ ದತ್ತಣ್ಣ ಬಳಿ ಇರುವ ವಿಷಯ ಹೇಳಿಕೊಂಡರು. ಆಗ ದತ್ತಣ್ಣ, ನಿನಗೆ ನಟಿಸೋ ಆಸೆ ಇದೆ. ಇಲ್ಲೇ ಏನಾದರೂ ಮಾಡುವ ಛಲ ಇದೆ. ಧೈರ್ಯವಾಗಿ ನುಗ್ಗು ಅಂದಿದ್ದೇ ತಡ, ಅಶ್ವಿನ್ ಕೂಡ ಧೈರ್ಯ ಮಾಡಿದರು. ಅಷ್ಟೊತ್ತಿಗೆ, ಕಂಪೆನಿಯಲ್ಲಿ ಒಂದು ಬದಲಾವಣೆಯಾಯ್ತು. ಅದು ರಾತ್ರಿ ಶಿಫ್ಟ್ ಕೆಲಸ ಮಾಡಬೇಕೆಂಬ ಬದಲಾವಣೆ. ಜೀವನಕ್ಕಾಗಿ ರಾತ್ರಿ ಪಾಳಿ ಕೆಲಸ ಮಾಡುತ್ತಲೇ ಅಶ್ವಿನ್ ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳುವ ಕೆಲಸಕ್ಕೆ ಮುಂದಾದರು. ಸುಮಾರು ತಿಂಗಳ ಕಾಲ ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡರು. ಮೆಲ್ಲಗೆ ಅಶ್ವಿನ್ ಬಿಝಿಯಾಗುತ್ತಾ ಹೋದರು. 2014ರಲ್ಲಿ ಕೆಲಸವನ್ನೂ ಬಿಟ್ಟು, ನಟನೆಗೆ ನಿಂತರು. ಅಲ್ಲಿಂದ ಅವಕಾಶಗಳು ಒಂದರ ಹಿಂದೆ ಹುಡುಕಿಕೊಂಡು ಬರತೊಡಗಿದವು.

 

ಹಾಸನ್ ಸಿನಿ ಪಯಣ…
ಮೆಲ್ಲನೆ ಸಿನಿಮಾಗೂ ಕಾಲಿಟ್ಟ ಅಶ್ವಿನ್ ಈವರೆಗೆ ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಬಗ್ಗೆ “ಸಿನಿ ಲಹರಿ’ ಜೊತೆ ತಮ್ಮ ಖುಷಿ ಹಂಚಿಕೊಳ್ಳುವ ಅಶ್ವಿನ್ ಹಾಸನ್, “ಜಗ್ಗುದಾದ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅಲ್ಲಿಂದ ನನ್ನ ಅದೃಷ್ಟವೇ ಬದಲಾಯಿತು. ನಂತರ ಕೃಷ್ಣ ಸರ್ ನನಗೆ “ಹೆಬ್ಬುಲಿ’ ಚಿತ್ರದಲ್ಲಿ ಒಳ್ಳೆಯ ಪಾತ್ರ ಕೊಟ್ಟರು. ನಂತರದ ದಿನಗಳಲ್ಲಿ ಕಮಷರ್ಿಯಲ್ ಚಿತ್ರಗಳೇ ಹೆಚ್ಚು ಹುಡುಕಿ ಬರತೊಡಗಿದವು. “ಜಗ್ಗುದಾದ’ ನನ್ನ ಕೆರಿಯರ್ನಲ್ಲಿ ಸರ್ ಪ್ರೈಸ್. ಆ ಬಳಿಕ “ರಾಜಕುಮಾರ”, “ದಯವಿಟ್ಟು ಗಮನಿಸಿ” ಸಿನಿಮಾಗಳು ತುಂಬಾ ಹೆಸರು ತಂದುಕೊಟ್ಟವು. ನಂತರದ ದಿನಗಳಲ್ಲಿ ನಾನು “ಗೀತಾ”, “ರಂಗ್ ಬಿರಂಗಿ”, “ಕನ್ನಡಕ್ಕಾಗಿ ಒಂದನ್ನು ಒತ್ತಿ”, “ಅನಂತ್ ವರ್ಸಸ್ ನುಸ್ರತ್”, “ಚಕ್ರವ್ಯೂಹ” ಸೇರಿದಂತೆ ಹಲವು ಸ್ಟಾರ್ ಸಿನಿಮಾಗಳಲ್ಲಿ ನಟಿಸಿದ್ದೇನೆ. ರಂಗಭೂಮಿಯಲ್ಲಿ ನಾನು ಕಲಿತದ್ದು ಸಾರ್ಥಕವಾಗಿದೆ. ಅಲ್ಲಿ ಕಲಿತದ್ದು ಇನ್ನೊಂದು ಅಂದರೆ, ಎಲ್ಲರೂ ನಟರೇ, ಕೆಲವರು ಹೀರೋಗಳಾಗುತ್ತಾರೆ, ಕೆಲವರು ವಿಲನ್ ಆಗ್ತಾರೆ, ನಾವು ನಮ್ಮ ಕೆಲಸ ಮಾಡ್ತಾ ಹೋಗಬೇಕು ಅನ್ನೋದು. ನನಗೂ ಹೀರೋ ಆಗಬೇಕು ಎಂಬ ಆಸೆ ಇತ್ತು. ಆದರೆ ಆಗಲಿಲ್ಲ. ಈಗ ಆ ಟೈಮ್ ಮುಗಿದಿದೆ. ಹಾಗಾಗಿ ಕಂಟೆಂಟ್ ಸಿನಿಮಾಗಳತ್ತ ಹೆಚ್ಚು ಗಮನಹರಿಸುತ್ತಿದ್ದೇನೆ. ಆ ನಿಟ್ಟಿನಲ್ಲಿ ಸಿಕ್ಕ ಚಿತ್ರ “ಪಯಣಿಗರು”. ಅದೊಂದು ಕಂಟೆಂಟ್ ಚಿತ್ರ. ಅದರಲ್ಲಿನಾಲ್ವರ ಹೀರೋಗಳು. ಆ ಪೈಕಿ ನಾನೂ ಒಬ್ಬ ಎಂಬುದು ಅಶ್ವಿನ್ ಮಾತು.

ಕೇಳೋರೇ ಇರಲಿಲ್ಲ… ಈಗ ಸಾಲು ಸಾಲು ಸಿನ್ಮಾ

ಆರಂಭದಲ್ಲಿ ನಾನು ಯಾರೂ ಅಂತಾನೇ ಸಿನಿಮಾದವರಿಗೆ ಗೊತ್ತಿರಲಿಲ್ಲ. ಆಡಿಷನ್ ಹೋದಾಗ ಯಾರು ಅನ್ನೋರು, ಫೋಟೋ ಕೇಳೋರು. ಈಗ ಹೆಸರೇಳಿದರೆ ಸಾಕು, ಗೊತ್ತು ಬಿಡಿ ಅಂತಾರೆ. ಗೂಗಲ್ ಸಚರ್್ ಮಾಡಿದರೆ ಫೋಟೋ ಸಮೇತ ಡೀಟೇಲ್ಸ್ ಬರುತ್ತೆ. ಅಷ್ಟು ಸಾಕು. ಅದಕ್ಕೆಲ್ಲಾ ಕಾರಣ, ನಾನು ಈವರೆಗೆ ನಟಿಸಿದ ಚಿತ್ರಗಳು ಮತ್ತು ಪಾತ್ರಗಳು. “ಕವಲುದಾರಿ’, “ಅವನೇ ಶ್ರೀಮನ್ನಾರಾಯಣ” ಪಾತ್ರ ಹೆಸರು ತಂದುಕೊಟ್ಟಿವೆ. ಸದ್ಯಕ್ಕೆ ಸಾಕಷ್ಟು ಚಿತ್ರಗಳು ಬಿಡುಗಡೆಗೆ ರೆಡಿಯಾಗಿವೆ. “ಆ ಒಂದು ನೋಟು” ಸಿನಿಮಾದಲ್ಲಿ ನಾನು ಲಾರಿ ಡ್ರೈವರ್ ಪಾತ್ರ ಮಾಡಿದ್ದೇನೆ. “ಯುವರತ್ನ”ದಲ್ಲೊಂದು ಒಳ್ಳೆಯ ಪಾತ್ರವಿದೆ. ಇದೆ. ಇನ್ನು, “ಗಿಲ್ಕಿ”, “ರಾಮಾಜರ್ುನ”, “ನೀಲಿ ಹಕ್ಕಿ”, “ಠಕ್ಕರ್”, “ಆಕ್ಟ್ ಆಫ್ 1978”, “ಯಲ್ಲೋಬೋಡರ್್”, “ಕಡಲ ತೀರದ ಭಾರ್ಗವ”, “ನೀಲಿನಕ್ಷೆ” ಸೇರಿದಂತೆ ಹೊಸಬರ ಚಿತ್ರಗಳಿವೆ. ಇವುಗಳ ಜೊತೆಯಲ್ಲಿ ದೇವರಾಜ್ ಪೂಜಾರಿ ನಿದರ್ೇಶನದ “ಚಾಕರ್ೋಲ್” ಮತ್ತು “ಮಂಗಳ’ ಎಂಬ ವೆಬ್ಸೀರೀಸ್ನಲ್ಲಿ ನಟಿಸಿದ್ದೇನೆ. ನಾನು ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ನಾಗ್ ಅವರನ್ನು ನೋಡಿ ಬೆಳೆದವನು. ಅನಂತ್ನಾಗ್ ಮತ್ತು ಪ್ರಕಾಶ್ ರೈ ಅವರನ್ನು ಮೆಚ್ಚಿಕೊಂಡವನು. ಹಾಗಾಗಿ ಚಾಲೆಂಜ್ ಪಾತ್ರ ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ ಅಶ್ವಿನ್.

ಹೀರೋನೇ ಆಗಬೇಕಿಲ್ಲ
ನಾನು ಇಲ್ಲಿ ಕಲಾವಿದ ಎನಿಸಿಕೊಳ್ಳಬೇಕು ಎಂದು ಬಂದಿದ್ದೇನೆ ಹೊರತು ನಾನು ಹೀರೋನೇ ಆಗಬೇಕಿಲ್ಲ. ಸಿಕ್ಕ ಪಾತ್ರಗಳನ್ನು ಕಣ್ಣಿಗೊತ್ತಿಕೊಂಡು ಮಾಡ್ತೀನಿ. ಸದ್ಯ ಕನ್ನಡದಲ್ಲಿ ಒಂದಷ್ಟು ಸ್ಪೇಸ್ ಇದೆ. ಎಂಥಾ ಪಾತ್ರವಿದ್ದರೂ ಮಾಡ್ತೀನಿ. ಪ್ರತಿಭೆ ಇದೆ. ಅದರೊಂದಿಗೆ ಅದೃಷ್ಟವೂ ಇರಬೇಕು. ನಾನೀಗ ನಟನೆ ಇರೋ ಪಾತ್ರ ಟಾಗರ್ೆಟ್ ಮಾಡ್ತಾ ಇದೀನಿ. ಕಳೆದ ಮೂರು ವರ್ಷ ಯಾವ ಸೀರಿಯಲ್ ಮಾಡಿಲ್ಲ. ಸಿನಿಮಾದಲ್ಲೇ ಬಿಝಿ ಇದ್ದೇನೆ. ಮೊದಲು ಮನೆಯಲ್ಲಿ ಸಿನಿಮಾ ಬೇಡ ಅಂತ ಹೇಳುತ್ತಿದ್ದವರಿಗೆ ಈಗ ನಂಬಿಕೆ ಬಂದಿದೆ. ಬೇರೆ ಭಾಷೆಯಲ್ಲೂ ನಟಿಸುವ ಆಸೆ ಇದೆ. ಒಳ್ಳೆಯ ಅವಕಾಶ ಸಿಕ್ಕರೆ ಖಂಡಿತ ಮಾಡ್ತೀನಿ ಎನ್ನುವ ಅಶ್ವಿನ್, ಫ್ಯಾಮಿಲಿ ಕಮಿಟ್ಮೆಂಟ್ ಇರುವುದರಿಂದ ಇಂಥದ್ದೇ ಪಾತ್ರ ಬೇಕು ಅಂತ ಜೋತು ಬೀಳಲ್ಲ. ಬದುಕಿಗಾಗಿ ಒಂದಷ್ಟು ಪಾತ್ರ ಮಾಡಿದ್ದಂಟು. ಆದರೂ, ಈಗ ಹೊಸಬಗೆಯ ಪಾತ್ರ ಎದುರು ನೋಡುತ್ತಿದ್ದೇನೆ ಎನ್ನುವುದು ಅಶ್ವಿನ್ ಮಾತು

Related Posts

error: Content is protected !!