‘ಗಾಂಧಿ ಮತ್ತುನೋಟು’ ಚಿತ್ರದೊಂದಿಗೆ ಬೆಳ್ಳಿತೆರೆಗೆ ದ್ವಿವಿಜಾ
ಗಾಂಧಿ ಕುರಿತು ಕನ್ನಡದಲ್ಲೇ ಸಾಕಷ್ಟು ಸಿನಿಮಾ ಮಂದಿವೆ.ಇತ್ತೀಚೆಗಷ್ಟೇ ನಿರ್ದೇಶಕ ಶೇಷಾದ್ರಿ ನಿರ್ದೇಶಿಸಿ, ನಿರ್ಮಾಣ ಮಾಡಿದ ‘ಮೋಹನದಾಸ’ ದೊಡ್ಡ ಸುದ್ದಿ ಮಾಡಿದ್ದು ನಿಮಗೂ ಗೊತ್ತು.ಈಗ ಮತ್ತೊಂದು ಗಾಂಧಿ ಕುರಿತ ಚಿತ್ರ ಕನ್ನಡದಲ್ಲೇ ಸದ್ದುಮಾಡುತ್ತಿದೆ. ಹಾಗಂತ ಇದು ಕೂಡ ಗಾಂಧಿ ಕುರಿತ ಬಯೋಫಿಕ್ ಅಲ್ಲ. ಬದಲಿಗೆ ಗಾಂಧಿ ಆದರ್ಶ ಗಳಿಗೆ ಮನಸೋತ ಒಬ್ಬ ಬಾಲಕಿಯ ಕತೆ. ಆ ಚಿತ್ರದ ಹೆಸರು ಗಾಂಧಿ ಮತ್ತು ನೋಟು.
……………
ಆ ಹುಡುಗಿಯ ಹೆಸರು ಸುಕ್ರಿ. ಕುಗ್ರಾಮವೊಂದರಲ್ಲಿ ಓದುತ್ತಿರುವ ಬಾಲಕಿ. ಆಕೆಗೆ ಗಾಂಧಿ ಮತ್ತು ಗಾಂಧಿಯ ಆದರ್ಶಗಳ ಮೇಲೆ ತೀವ್ರ ಆಸಕ್ತಿ. ಪರಿಣಾಮ ಗಾಂಧಿ ಆದರ್ಶಗಳನ್ನು ಓದುತ್ತಾ ಹೋದಂತೆ, ಜೀವನದಲ್ಲೂ ಅಳವಡಿಸಿಕೊಳ್ಳಲು ಮುಂದಾಗುತ್ತಾಳೆ. ಸತ್ಯ ಹೇಳುತ್ತಾಳೆ. ದುಶ್ವಟಗಳಿಂದ ದೂರ ಉಳಿಯುತ್ತಾಳೆ. ಮನೆಯಲ್ಲಿ ಅವರಪ್ಪ ವಿಪರೀತ ಕುಡುಕ. ದುಶ್ಚಟದಿಂದ ತನ್ನ ತಂದೆ ದೂರವಿರುವಂತೆ ಒತ್ತಾಯಿಸು ತ್ತಾಳೆ.ಹಾಗೆಯೇ ಸಮಾಜದಲ್ಲಿ ಕೆಟ್ಟದ್ದುನಡೆದರೆ ಖಂಡಿಸುತ್ತಾಳೆ. ದುಶ್ಚಟದಿಂದ ಜನರು ದೂರವಿರುವಂತೆ ಹೋರಾಡುತ್ತಾಳೆ. ಆದರೆ ಈ ಸಮಾಜ ಅಥವಾ ವ್ಯವಸ್ಥೆ ಒಬ್ಬ ಬಾಲಕಿಯ ಮಾತನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುತ್ತಾ? ಮುಂದೇನಾಗುತ್ತೆ ಎನ್ನುವುದು ಈ ಚಿತ್ರದ ಕತೆ. ಅಂದ ಹಾಗೆ ಈ ಚಿತ್ರದ ಹೆಸರು’ ಗಾಂಧಿ ಮತ್ತು ನೋಟು’ .ಇದು ಯೋಗಿ ದೇವಗಂಗೆ ನಿರ್ದೇಶನದ ಚಿತ್ರ. ಈಹಿಂದೆಇವರು ಸೆಕೆಂಡ್ ಹಾಫ್ ಹೆಸರಿನ ಚಿತ್ರವೊಂದನ್ನು ನಿರ್ದೇಶಿಸಿದ್ದರು. ಆದಾದ ನಂತರಇದು ಅವರ ಮತ್ತೊಂದು ಪ್ರಾಜೆಕ್ಟ್.ವಿಶೇಷ ಅಂದ್ರೆ, ಇದರ ಪ್ರಮುಖ ಪಾತ್ರಧಾರಿ ಬಾಲಕಿ ಸುಕ್ರಿಯಾಗಿ ಕಾಣಿಸಿಕೊಳ್ಳುತ್ತಿರುವವರು ಪುಟಾಣಿ ದ್ವಿವಿಜಾ. ಈಕೆ ಸಾಹಿತಿ ನಾಗೇಂದ್ರ ಪ್ರಸಾದ್ ಪುತ್ರಿ. ಈ ಚಿತ್ರದೊಂದಿಗೆ ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾಳೆ. ಅಪ್ಪ ಸಿನಿಮಾ ನಿರ್ದೇಶನ ,ಸಾಹಿತ್ಯ ಮತ್ತು ನಟನೆಯಲ್ಲಿ ಮಿಂಚುತ್ತಿದ್ದರೆ, ತಂದೆಯಂತೆಯೇ ಮಗಳು ಕೂಡ ಬಾಲನಟಿಯಾಗಿ ಬೆಳ್ಳಿ ಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾಳೆ. ಮಗಳನ್ನು ಸಿನಿಮಾರಂಗಕ್ಕೆಪರಿಚಯಿಸುತ್ತಿರುವುದಕ್ಕೆ ಪ್ರಮುಖಕಾರಣ ಕತೆ. ಅದರಲ್ಲೂ ಅದು ಗಾಂಧಿ ಆದರ್ಶಗಳ ಮೇಲಿನ ಕತೆ. ಮೊದಲ ಬಾರಿಗೆ ಅಂತಹ ಸಿಕ್ಕಿತು.ಹಾಗಾಗಿ ನಿರ್ದೇಶಕರ ಮಾತಿಗೆ ಗೌರವ ಕೊಟ್ಟು ಮಗಳನ್ನುಈ ಚಿತ್ರದಲ್ಲಿ ಅಭಿನಯಿಸಲು ಕಳುಹಿಸಿದೆ’ ಎನ್ನುತ್ತಾರೆ ಸಾಹಿತಿ ನಾಗೇಂದ್ರ ಪ್ರಸಾದ್.ದ್ವಿವಿಜಾ ಜತೆಗೆ ಸಾಕಷ್ಟು ಮಂದಿ ಅನುಭವಿ ಕಲಾವಿದರು ಚಿತ್ರದಲ್ಲಿದ್ದಾರೆ.
ಇನ್ನು ಭವಾನಿ ಕ್ರಿಯೇಷನ್ಸ್ ಮೂಲಕ ಸುಧಾರಾಣಿ, ವೀಷಾ ಪದ್ನನಾಭ್ ಹಾಗೂ ಮಂಜುನಾಥ್ ಎಂಬುವರು ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಸಾಹಿತ್ಯ ನಾಗೇಂದ್ರ ಪ್ರಸಾದ್ ಬರೆದಿದ್ದು, ಗುರುಪ್ರಸಾದ್ ಸಂಭಾಷಣೆ ಚಿತ್ರಕ್ಕಿದೆ. ವಾಣಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ನಿರ್ದೇಶಕ ಯೋಗಿ ಪ್ರಕಾರ ಚಿತ್ರಕ್ಕೆ ಚಿತ್ರೀಕರಣ ಮುಗಿದಿದೆ. ಶಿವಮೊಗ್ಗ, ಹೊಸನಗರ, ಕೊಡಚಾದ್ರಿ ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಅದರ ಜತೆಗೆ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಕೂಡ ಕಂಪ್ಲೀಟ್ ಆಗಿದೆ . ಚಿತ್ರ ರಿಲೀಸ್ ಗೆ ರೆಡಿಯಿದ್ದು, ಸೂಕ್ತ ಸಮಯಕ್ಕೆ ಕಾಯುತ್ತಿದೆ ಚಿತ್ರತಂಡ.