ಕಬಿನಿಯಲ್ಲಿ ಪ್ರದೀಪ್ ವರ್ಮಾ ಸಂಗೀತ ನಿರ್ದೇಶಕನ ಹೊಸ ಚಿತ್ರ

 

ಪ್ರದೀಪ್ ವರ್ಮ ಅವರೀಗ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. (ಸೆ. 8) ಕನ್ನಡ,ತಮಿಳು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಪ್ರದೀಪ್ ವರ್ಮ, ನಾಯಕ ಕಮ್ ನಿರ್ದೇಶಕರೂ ಹೌದು. ಕನ್ನಡದ ಅನೇಕ ಆಲ್ಬ ಸಾಂಗ್ ಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಪ್ರದೀಪ್ ವರ್ಮ ಸದ್ಯಕ್ಕೆ ವಿನೋದ್ ಪ್ರಭಾಕರ್ ಸಿನಿಮಾವೊಂದಕ್ಕೆ ಸಂಗೀತ ನೀಡುತ್ತಿದ್ದಾರೆ.ಅವರ ಹುಟ್ಟುಹಬ್ಬದ ದಿನದಂದು ಹೊಸದೊಂದು ಚಿತ್ರ ಅನೌನ್ಸ್ ಮಾಡಿದ್ದಾರೆ.ಹೌದು, ಪ್ರದೀಪ್ ವರ್ಮ ಸದಾ ಉತ್ಸಾಹದಲ್ಲೇ ಏನಾದರೊಂದು ಸಿನಿಮಾ ಚಟುವಟಿಕೆಯಲ್ಲಿರುತ್ತಾರೆ. ಈಗ ‘ಕಬಿನಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಈ ಚಿತ್ರ ತಯಾರಾಗುತ್ತಿರುವುದು ವಿಶೇಷ.ಈ ಚಿತ್ರವನ್ನು ಕಿರಣ್ ನಿರ್ದೇಶನ ಮಾಡುತ್ತಿದ್ದಾರೆ.ಡೇಸಿಸ್ ಇಂಟರ್ನ್ಯಾಷನಲ್ ಪಿಕ್ಚರ್ಸ್ ಮೂಲಕ ಅಕ್ಬರ್ ಖಾನ್ ಮತ್ತು ಸಂಜಯ್ ವಿಜಯ್ ಕುಮಾರ್ ಅವರ ನಿರ್ಮಾಣವಿದೆ. ಭೂಮಿಕಾ ಪ್ರೊಡಕ್ಷನ್ಸ್ ಅರ್ಪಿಸುತ್ತಿದೆ.ಪ್ರದೀಪ್ ವರ್ಮ ಸಂಗೀತವಿದೆ. ಸಾಯಿ ಕಿರಣ್ ಛಾಯಾಗ್ರಹಣವಿದೆ. ಗೌಸ್ ಪೀರ್, ಸಂತೋಷ್ ವೆಂಕಿ ಸಾಹಿತ್ಯವಿದೆ.

Related Posts

error: Content is protected !!