ಆಗಂತುಕನಿಗಾಗಿ ಮಾರ್ಷಲ್‌ ಆರ್ಟ್ಸ್‌ ಕಲಿತ ನಟಿ – ಮೈತ್ರಿಯಾ ರಿಯಲ್‌ ಸ್ಟಂಟ್‌ ಕಸರತ್ತು!

 

ಸಿನಿಮಾ ಅಂದರೆ ಹಾಗೆಯೇ. ಕ್ಯಾಮೆರಾ ಮುಂದೆ ನಿಲ್ಲಬೇಕಾದರೆ, ಮೊದಲು ನಟನೆ ಸೇರಿದಂತೆ ಡೈಲಾಗ್‌ ಡಿಲವರಿ, ಬಾಡಿಲಾಂಗ್ವೇಜ್‌ ಸೇರಿದಂತೆ ಇತರೆ ವಿಷಯಗಳಲ್ಲಿ ಪಕ್ವವಾಗಿರಬೇಕು ಸಿನಿಮಾದಲ್ಲಿ ಫೈಟ್ಸ್‌ ಸಹಜ. ಕೆಲವರು ಸಾಹಸ ನಿರ್ದೇಶಕರು ಚಿತ್ರೀಕರಣ ಸಮಯದಲ್ಲಿ ನಟ, ನಟಿಯರಿಗೆ ಫೈಟ್ಸ್‌ ಟಿಪ್ಸ್‌ ಹೇಳಿಕೊಡುತ್ತಾರೆ. ಇನ್ನೂ ಕೆಲವರು ಮಾಸ್ಟರ್ಸ್‌ ಬಳಿ ಸ್ಟಂಟ್ಸ್‌ ಕೂಡ ಕಲಿತು ನಂತರದ ದಿನಗಳಲ್ಲಿ ಕ್ಯಾಮೆರಾ ಮುಂದೆ ನಿಲ್ಲುತ್ತಾರೆ. ಈಗ ನಟಿ ಮೈತ್ರಿಯಾಗೌಡ ಕೂಡ ಸಿನಿಮಾಗಾಗಿಯೇ ಮಾರ್ಷಲ್‌ ಆರ್ಟ್ಸ್‌ ಕಲಿತಿದ್ದಾರೆ.

ಹೌದು, ನಟಿ ಮೈತ್ರಿಯಾಗೌಡ “ಆಗಂತುಕ” ಚಿತ್ರಕ್ಕಾಗಿ ಕಳೆದ ನಾಲ್ಕು ತಿಂಗಳ ಕಾಲ ಮಾರ್ಷಲ್‌ ಆರ್ಟ್ಸ್‌ ಕಲಿಯುತ್ತಿದ್ದಾರೆ. ಸಿನಿಮಾದಲ್ಲಿ ಅವರು ಖಡಕ್‌ ಅರಣ್ಯ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಭರ್ಜರಿ ಫೈಟ್ಸ್‌ಗಾಗಿ ಅವರು ಚಾಮರಾಜ ಮಾಸ್ಟರ್‌ ಬಳಿ ಸ್ಟಂಟ್ಸ್‌ ಕಲಿಯುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದಲೂ ಅವರು ಕುಂಫು, ಮೂವ್‌ ಥಾಯ್‌ ಇತರೆ ಸ್ಟಂಟ್ಸ್‌ ಗಳಲ್ಲಿ ಪರಿಣಿತಿ ಹೊಂದುತ್ತಿದ್ದಾರೆ.

ಸದ್ಯಕ್ಕೆ “ಆಗಂತುಕʼ ಚಿತ್ರ ಶೇ. 60 ರಷ್ಟು ಚಿತ್ರೀಕರಣವಾಗಿದೆ. ಎರಡು ಫೈಟ್ಸ್‌ ಹಾಗೂ ಸಾಂಗ್ಸ್‌ ಬಾಕಿ ಉಳಿದಿದೆ. ಕೊರೊನಾ ಲಾಕ್‌ಡೌನ್‌ ಬಳಿಕ ಚಿತ್ರೀಕರಣಕ್ಕೆ ಹೊರಡಲಿದೆ. ಚಿತ್ರಕ್ಕೆ ರಜತ್‌ ರಘುನಾಥ್‌ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ ಜೊತೆ ನಿರ್ಮಾಣವನ್ನೂ ಮಾಡಿದ್ದಾರೆ. ಇದೇ ಮೊದಲ ಸಲ ಖಾಕಿ ಖದರ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಮೈತ್ರಿಯಾಗೌಡ, ಸಿನಿಮಾ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಚಿತ್ರದ ಫೈಟ್ಸ್‌ ಅನ್ನು ರಿಯಲ್‌ ಆಗಿ ಮಾಡುವ ಆಸೆ ಮೈತ್ರಿಯಾ ಅವರದ್ದು. ಆದರೆ, ನಿರ್ದೇಶಕರು ರಿಸ್ಕ್‌ ಸ್ಟಂಟ್‌ ಬೇಡ ಎನ್ನುತ್ತಿದ್ದರೂ, ಒಂದೊಮ್ಮೆ ರಿಸ್ಕ್‌ ತೆಗೆದುಕೊಳ್ಳಬೇಕು ಎಂದು ನಾಲ್ಕು ತಿಂಗಳ ಕಾಲ ಅವರು ಸ್ಟಂಟ್‌ ತರಬೇತಿ ಪಡೆದಿದ್ದಾರೆ.

“ಆಗಂತುಕʼ ಬಗ್ಗೆ ಹೇಳುವುದಾದರೆ, ಇದೊಂದು ಮರ್ಡರ್‌ ಮಿಸ್ಟ್ರಿಯಾಗಿದ್ದು, ಬಹುತೇಕ ದಟ್ಟ ಅರಣ್ಯದಲ್ಲೇ ನಡೆಯೋ ಕಥೆ ಇದಾಗಿದೆ. ಸಕಲೇಶಪುರದಲ್ಲಿ ಚಿತ್ರೀಕರಣ ನಡೆದಿದ್ದು, ಇಷ್ಟರಲ್ಲೇ ಮಡಿಕೇರಿ, ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ಹೋಗಲು ಚಿತ್ರತಂಡ ಸಜ್ಜಾಗಿದೆ. ಚಿತ್ರಕ್ಕೆ ಜಾರ್ಜ್‌ ಥಾಮಸ್‌ ಸಂಗೀತವಿದೆ. ಪಿವಿಆರ್‌ ಸ್ವಾಮಿ ಅವರ ಛಾಯಾಗ್ರಹಣವಿದೆ. ಡಿಂಗ್ರಿನಾಗರಾಜ್‌ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ. ಇವರೊಂದಿಗೆ ಹೊಸ ಪ್ರತಿಭೆಗಳಿಗೂ ವೇದಿಕೆ ಕಲ್ಪಿಸಲಾಗಿದೆ.

 

Related Posts

error: Content is protected !!