ಕುಣಿಯೋಕು ಸೈ,ಹಾಡೋಕು ಸೈ!
ನೇರ ಮಾತಿನ ಹುಡುಗಿ ಕನ್ನಡ ಮಟ್ಟಿಗೆ ಒಂದಷ್ಟು ಗುರುತಿಸಿಕೊಂಡಿದ್ದು, ಈಗ ತೆಲುಗು ಚಿತ್ರರಂಗದಲ್ಲೂ ತಮ್ಮದ್ದೊಂದು ಛಾಪು ಮೂಡಿಸಿದ್ದಾರೆ.
……………..
ಕನ್ನಡದಲ್ಲಿ ನಂಬರ್ ಡ್ಯಾನ್ಸ್ , ಐಟಂ ಡ್ಯಾನ್ಸ್ ಅಂದಾಕ್ಷಣ ಥಟ್ಟನೆ ನೆನಪಾಗೋದು ಒಂದಷ್ಟು ನಟಿಮಣಿಯರು. ಆ ಸಾಲಿಗೆ ಮಮತಾ ರಾವತ್ ಎಂಬ ಬೆಡಗಿಯೂ ಸೇರಿದ್ದಾರೆ. ಹೌದು, ಮಮತಾರಾವತ್ ಹಲವು ವರ್ಷಗಳಿಂದಲೂ ಕನ್ನಡ ಇಂಡಸ್ಟ್ರಿಯಲ್ಲಿದ್ದಾರೆ.ಅವರು ಕನ್ನಡ ಮಾತ್ರವಲ್ಲ, ತೆಲುಗು,ತಮಿಳು ಚಿತ್ರರಂಗದಲ್ಲೂ ಮಿಂಚಿದವರು. ನಾಯಕಿ ಪ್ರಧಾನ ಪಾತ್ರಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ.
ನೇರ ಮಾತಿನ ಹುಡುಗಿ ಕನ್ನಡ ಮಟ್ಟಿಗೆ ಒಂದಷ್ಟು ಗುರುತಿಸಿಕೊಂಡಿದ್ದು, ಈಗ ತೆಲುಗು ಚಿತ್ರರಂಗದಲ್ಲೂ ತಮ್ಮದ್ದೊಂದು ಛಾಪು ಮೂಡಿಸಿದ್ದಾರೆ. ಸದ್ಯಕ್ಕೆ ತೆಲುಗಿನಲ್ಲೊಂದು ನಾಯಕಿ ಪ್ರಧಾನ ಸಿನಿಮಾ ಮಾತುಕತೆ ಅಗಿದ್ದು, ಕೊರೊನಾ ಸಮಸ್ಯೆ ಮುಗಿದ ಬಳಿಕ ಆ ಚಿತ್ರ ಸೆಟ್ಟೇರಲಿದೆ.
ಇನ್ನು, ಶಿವನಾಗಿನಿ ಸಿನಿಮಾ ಅಂತಿಮ ಫೈಟ್ ಬಾಕಿ ಇದೆ. ಇನ್ನೊಂದು ಹೊಸ ತೆಲುಗು ಸಿನಿಮಾ ಕೂಡ ಆಫರ್ ಬಂದಿದೆ. ಇದರೊಂದಿಗೆ ಕನ್ನಡದಲ್ಲಿ ಡಿಡಿ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ. ಅದೇನೆ ಇರಲಿ, ಒಳ್ಳೆಯ ಪಾತ್ರ ಎದುರು ನೋಡುತ್ತಿರುವ ಮಮತಾ ರಾವತ್, ಅತ್ತ ಒಳ್ಳೆಯ ಹಾಡುಗಳಿಗೂ ಹೆಜ್ಜೆ ಹಾಕುತ್ತ, ಇತ್ತ ಒಳ್ಳೆಯ ಪಾತ್ರಗಳಲ್ಲೂ ಕಾಣಿಸಿಕೊಳ್ಳುತ್ತ ಗಟ್ಟಿ ನೆಲೆ ಕಂಡುಕೊಂಡಿದ್ದಾರೆ.