‘ಬಾಳು ಇರುವುದು ಬದುಕುವುದಕ್ಕಾಗಿ, ಬದುಕಿ ಬೆಳೆಯುವುದಕ್ಕಾಗಿ’
ಇವರು ‘ತರಲೆ ನನ್ಮಕ್ಳು ‘ಚಿತ್ರದೊಂದಿಗೆ ಬಣ್ಣದ ಲೋಕಕ್ಕೆ ಬಂದ ನಟಿ. ಹೆಸರು ಅಂಜನಾ.ಅದು ಯಾಕೋ ಸರಿ ಬರಲಿಲ್ಲ ಅಂತ ನ್ಯೂಮ್ಯಾರಾಲಜಿ ಪ್ರಕಾರ ಸುಕೃತಾ ದೇಶಪಾಂಡೆ ಅಂತ ಹೆಸರು ಬದಲಾಯಿ ಸಿಕೊಂಡರು.ಹಾಗಂತ ಕೈ ತುಂಬಾ ಅವಕಾಶ ಪಡೆದು, ರಾತ್ರೋರಾತ್ರಿ ಸ್ಟಾರ್ ಆದ್ರಾ? ಅದು ಇಲ್ಲ. ಹೆಸರು ಬದಲಾದರೂ ಹಣೆ ಬರಹ ಬದಲಾಗಬೇಕಲ್ಲ?ಮೊದಲಸಿನಿಮಾಕ್ಕೆಅವರು ನಾಯಕಿಅಂತ ಆಗಿದ್ದಷ್ಟೇ ಲಾಭ.ಅದು ಅಂತಹ ಸಕ್ಸಸ್ ಕಾಣಲಿಲ್ಲ.ಇತ್ತ ಅಂಜನಾ ಅಲಿಯಾಸ್ ಸುಕೃತಾ ಅವರಿಗೂ ಹೆಸರು ತಂದು ಕೊಡಲಿಲ್ಲ. ಅವಕಾಶಗಳೂ ಹುಡುಕಿ ಬರಲಿಲ್ಲ. ಹಾಗಂತ ಅವರಿಗೆ ಬೇರೆಯವರ ಹಾಗೆ ನಟಿಯಾಗಿ ಮಿಂಚುವ ಹುಚ್ಚು, ಕೆಚ್ಚು ಬಿಡಲಿಲ್ಲ. ಅತ್ತ ಮೆಲ್ಲನೆ ತಮಿಳು ಚಿತ್ರರಂಗಕ್ಕೂ ಕಾಲಿಟ್ಟರು. ಅಲ್ಲೂ ಒಂದೆರೆಡು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಯಾವೊಂದು ಅಲ್ಲಿ ಸುದ್ದಿಯಾಗಲಿಲ್ಲ. ಪುನಃ ಗಾಂಧಿನಗರದತ್ತ ಮುಖ ಮಾಡಿದ ಈ ನಟಿಗೆ ಸಿಕ್ಕಿದ್ದು “ಪ್ರೀತಿಯ ರಾಯಭಾರಿ’ ಎಂಬ ಹೊಸಬರ ಸಿನಿಮಾ.
ಅದರಿಂದಲೇ ಈಗ ನಟಿಯಾಗಿ ಒಂದಷ್ಟು ಗುರುತಿಸಿಕೊಂಡಿರುವ ಸುಕೃತಾ ದೇಶಪಾಂಡೆ, ಕೊರೋನಾ ಕಾರಣಕ್ಕೆ ಸಿನಿಮಾ ಗಿನಿಮಾಅಂತೆಲ್ಲ ತಲೆಕಡೆಸಿಕೊಳ್ಳದೇ ಮನೆಯಲ್ಲಿದ್ದುಬದುಕಿನ ಪಾಠಕಲಿಯುತ್ತಿದ್ದಾರೆ. ಪಾಠ ಅಲ್ಲಅದು ಉಪದೇಶ. ‘ ಬಾಳು ಇರುವುದು ಬದುಕುವುದಕ್ಕಾಗಿ; ಬದುಕಿ ಬೆಳೆಯುವುದಕ್ಕಾಗಿ.’ ಈ ಮಾತನ್ನು ಹೇಳಿದ್ದಾರೋ ಗೊತ್ತಿಲ್ಲ.ಅದರೆ ಈಮಾತನ್ನು ಸುಕೃತಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿಕೊಂಡು, ಗಮನ ಸೆಳೆದಿದ್ದಾರೆ. ಅವರಕಾರ್ಯಕ್ಕೆಗಮನ ಅಥವಾ ಕುತೂಹಲ ಯಾಕೆ ಗೋತ್ತಾ?
ಯಾವುದೋ ಕಾಣಕ್ಕೆಇವತ್ತು ಸೆಲಿಬ್ರಿಟಿಗಳು ಸುಸೈಡ್ ಹಂತಕ್ಕೆ ಯೋಚಿಸುತ್ತಾರೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ಪ್ರಕರಣ ಬೆಚ್ಚಿ ಬೀಳಿಸಿದೆ. ಅದಿರಲಿ, ಬಿಗ್ ಬಾಸ್ ಖ್ಯಾತಿಯ ಕನ್ನಡದ ನಟಿ ಜಯಶ್ರೀ ರಾಮಯ್ಯ ಕೂಡ ಅಂತಹ ಕೆಟ್ಟ ವಿಚಾರಕ್ಮೆ ಅಲೋಚಿಸಿದೊಡ್ಡ ಸುದ್ದಿ ಆಗಿದ್ದರು.ನಾಗಮಂಡಲದ ನಟಿ ವಿಜಯಲಕ್ಷ್ಮಿ ಕೂಡ ಅದೇ ಕಾರಣಕ್ಕೆ ಸಾಕಷ್ಟು ಸುದ್ದಿಯಾದರು. ಇಂತಹ ಕ್ಷೀಣ ಮನಸ್ಸು ಗಳನಡುವೆ ನಟಿಸುಕೃತಾ ಬಾಳಿ ಬದುಕುವ ಮಹತ್ವ ಮಾತನ್ನು ತಮ್ಮಫೇಸ್ ಬುಕ್ ಖಾತೆಯಲ್ಲಿ ಹಾಕಿಕೊಂಡು ಬಾಳುಬದುಕುವುದಕ್ಕಾಗಿಯೇ ಹೇಳಿರುವುದು ವಿಶೇಷ.