ಲಗ್ನ ಪತ್ರಿಕೆ ಹಂಚಲು ರೆಡಿಯಾದ ಅರವಿಂದ್ ಕೌಶಿಕ್- ಕಲರ್ಸ್ ನಲ್ಲಿ ಕಲರ್ ಫುಲ್ ಸ್ಟೋರಿ

 

 

 

 

ನಿರ್ದೇಶಕ ಅರವಿಂದ್ ಕೌಶಿಕ್ ಇದೀಗ ಲಗ್ನ ಪತ್ರಿಕೆ ಹಂಚೋಕೆ ರೆಡಿಯಾಗಿದ್ದಾರೆ!

ಅರೇ, ಹೀಗಂದಾಕ್ಷಣ ಮತ್ತೊಂದು ಮದ್ವೆಗೆ ಏನಾದರೂ ಅವರು ತಯಾರಿ ನಡೆಸಿದ್ದಾರಾ ಅನ್ನೋ ಪ್ರಶ್ನೆ ಸಹಜ. ಆದರೆ, ಅವರು ಹೊಸ ಮದ್ವೆ ಆಗ್ತಾ ಇಲ್ಲ, ಬದಲಾಗಿ ಮದ್ವೆಗೆ ಸಂಬಂಧಿಸಿದ ಹೊಸ ಬಗೆಯ ಕಥೆ ಹೆಣೆದು ಪ್ರೇಕ್ಷಕರ ಮುಂದೆ ಬರೋಕೆ ಸಜ್ಜಾಗಿದ್ದಾರೆ.
ಹೌದು, ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಅರವಿಂದ್ ಕೌಶಿಕ್ ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಲರ್ ಫುಲ್ ಸ್ಟೋರಿ ಮೂಲಕ ರಂಜಿಸಲು ತಮ್ಮ ತಂಡದೊಂದಿಗೆ ತಯಾರಾಗಿದ್ದಾರೆ.
ಬರೀ ರಿಮೇಕ್ ಹಾವಳಿ ಇರುವ ಈ ದಿನಮಾನದಲ್ಲೂ ಅವರು ದೇಸಿ ಸೊಗಡಿನ‌ ಪಕ್ಕಾ ನಮ್ಮತನ ಇರುವ ಸ್ವಂಥದ್ದೊಂದು ಕಥೆ ಹೆಣೆದು ಧಾರಾವಾಹಿ ಮೂಲಕ ಮನೆ ಮಂದಿಯ‌ ಮನ ತಣಿಸಲು ಹೊರಟಿದ್ದಾರೆ.
ಈ ಧಾರಾವಾಹಿ ಮೂಲಕ ಅಪ್ಪಟ ಕನ್ನಡದ ಪ್ರತಿಭಾವಂತರನ್ನ ಹಾಗೂ ಕ್ರಿಯಾಶೀಲ ಬರಹಗಾರರಿರುವ ತಂಡ ಕಟ್ಟಿಕೊಂಡು ಹೊಸ ಸವಿರುಚಿ ಉಣಬಡಿಸುವ ಉತ್ಸಾಹದಲ್ಲಿದ್ದಾರೆ.
ಅವರ ನಿರ್ದೇಶನದ ‘ಲಗ್ನಪತ್ರಿಕೆ’ ಧಾರಾವಾಹಿಯಲ್ಲಿ
ಸುಂದರ್ ಮತ್ತು ನವೀನ್ ಸಾಗರ್ ಕೈ ಜೋಡಿಸಿದ್ದಾರೆ. ಅವರ ಜೊತೆ ಅರವಿಂದ್ ಕೂಡ ಕಥೆ, ಚಿತ್ರಕಥೆಯಲ್ಲಿ ನಿರತರಾಗಿದ್ದಾರೆ.
ಕ್ರಿಯಾಶೀಲ ಬರಹಗಾರ ನವೀನ್ ಸಾಗರ್ ಲಗ್ನ ಪತ್ರಿಕೆಗೆ ಮಾತುಗಳನ್ನು ಪೋಣಿಸುತ್ತಿರುವುದು ವಿಶೇಷ.
ಅರವಿಂದ್ ಕೌಶಿಕ್ ಅವರ ಲಗ್ನ ಪತ್ರಿಕೆ ಸಂಭ್ರಮಕ್ಕೆ ಕಲಾವಿದರಾದ ಸುಂದರ್,ರವಿ ಭಟ್, ರೇಣುಕ,ಮರೀನಾ ತಾರಾ ,ಜ್ಯೋತಿ ,ಕುಲ್ದೀಪ್ ,ಸುಪ್ರಿಯಾ,ದರ್ಶನ್ ಸೂರ್ಯ , ಸಂಜನಾ ಬುರ್ಲಿ , ಸೂರಜ್ ಹೂಗಾರ್ ಸಾಕ್ಷಿಯಾಗಲಿದ್ದಾರೆ.
ಮನೋಹರ್ ಯಾಪ್ಲರ್, ಕ್ಯಾಮೆರಾ ಹಿಡಿದರೆ, ಗಣಪತಿ ಭಟ್ ಸಂಕಲನವಿದೆ. ಸಂಗೀತ ಅರ್ಜುನ್ ರಾಮು ಸಂಗೀತವಿದೆ. ಗಣೇಶ್ ಕಾರಂತ್ , ಸ್ಪರ್ಶಾ ಹಾಡಿದ್ದಾರೆ. ಸಹ ನಿರ್ದೇಶಕ ಸುರೇಶ್ ಕುಣಿಗಲ್ ಸಾಥ್ ನೀಡಿದ್ದಾರೆ. ಕುಲ್ದೀಪ್ ಹಾಗು ಚೇತನ್ ನಿರ್ಮಾಣ ಕೆಲಸದ ಉಸ್ತುವಾರಿ ಹೊತ್ತಿದ್ದಾರೆ.
ಅಂತೂ ಲಾಕ್ ಡೌನ್ ಆಗಿ ಬೇಸತ್ತಿದ್ದ ಮನೆ ಮಂದಿ ಒಂದೊಳ್ಳೆಯ ಮದುವೆ ಊಟದಷ್ಟು ರುಚಿ ಈ ಧಾರಾವಾಹಿಯಿಂದ ನಿರೀಕ್ಷಿಸಬಹುದು.

ಅರವಿಂದ್ ಕೌಶಿಕ್

Related Posts

error: Content is protected !!