ಅಭಿಮಾನಿಗಳ ಅಭಿಮಾನಕ್ಕೆ ಧನ್ಯವಾದ ಹೇಳಿದ ನುಸ್ರುತ್ ಚೆಲುವೆ ಲತಾ ಹೆಗಡೆ
ಕಾಲ ಬದಲಾಗಿದೆ. ಒಬ್ಬ ನಟ ಅಥವಾ ನಟಿಗೆ ಎಷ್ಟು ಜನ ಅಭಿಮಾನಿಗಳಿದ್ದಾರೆ, ಅವರ ಸ್ಟ್ರೆಂತ್ ಏನು ಅಂತ ಈಗ ಸೋಷಲ್ ಮೀಡಿಯಾ ತೋರಿಸಿಬಿಡುತ್ತದೆ. ಸೋಷಲ್ ಮೀಡಿಯಾ ದಲ್ಲಿ ಅವರು ತಮ್ಮಖಾತೆ ತೆರೆದರೆ ಅವರನ್ನು ಹಿಂಬಾಲಿಸುವ ಅಭಿಮಾನಿಗಳು ಎಷ್ಟು ಅಂತ ಗೊತ್ತಾಗಿ ಬಿಡುತ್ತದೆ. ಸದ್ಯಕ್ಕೆ ಅಂತಹದೇ ಒಂದು ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡು ಖುಷಿಯಲ್ಲಿದ್ದಾರೆ ನುಸ್ರುತ್ ಖ್ಯಾತಿಯ ನಟಿ ಲತಾ ಹೆಗಡೆ.
ಅತಿರಥ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ವಿದೇಶ ಮೂಲದ ಕನ್ನಡತಿ ಲತಾ ಹೆಗಡೆ. ಮೂಲತಃ ಕನ್ನಡದವೇ ಆದರೂ, ನ್ಯೂಜಿಲೆಂಡ್ ನಿವಾಸಿ ಈ ಚೆಲುವೆ. ಇಂಜಿನಿಯರಿಂಗ್ ಮುಗಿಸಿ, ಸಾಫ್ಟ್‌ವೇರ್ ಉದ್ಯೋ ಗಿ ಆಗಿದ್ದರೂ, ನಟಿಯಾಗುವ ಆಸೆಯಿಂದ ತೆಲುಗಿನ ‘ತುಂಟರಿ’ ಚಿತ್ರದೊಂದಿಗೆ ನಟಿಯಾಗಿ ಬೆಳ್ಳಿತೆರೆಗೆ ಕಾಲಿಟ್ಟ ಹೆಗ್ಗಳಿಕೆ ಅವರದು.ಅಲ್ಲಿಂದ ಆದಿನಗಳು ಚೇತನ್ ಜೋಡಿಯಾಗಿ ‘ಅತಿರಥ’ ತವರೂರು ಕನ್ನಡಕ್ಕೂ ಬಂದರು ಎನ್ನುವುದೀಗ ಎಲ್ಲರಿಗೂ ಗೊತ್ತಿರುವ ವಿಚಾರ.ಈಗ ಸೋಷಲ್ ಮೀಡಿಯಾದಲ್ಲಿಅವರ ಫಾಲೋವರ್ ಸಂಖ್ಯೆ ಎರಡು ಲಕ್ಷ ದಾಟಿದೆ.
ಒಬ್ಬ ನಟಿಯಾಗಿ ಲತಾಹೆಗಡೆಗೆ ಒದು ಭಾರೀ ಸಂತಸ ಮೂಡಿಸಿದೆ. ಆಸಂತೋಷ
ಮತ್ತು ಸಂಭ್ರಮವನ್ನು ಅವರು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಅಭಾರಿಯಾಗಿದ್ದೇನೆ.ನಿಮ್ಮಈ ಬೆಂಬಲ ಹೀಗೆಯೇ ನಿರಂತರವಾಗಿರಲಿ’ ಎಂದು ಸ್ಟೇಟಸ್ ಪೋಸ್ಟ್ ಮಾಡಿದ್ದಾರೆ.- ಅಂದ ಹಾಗೆ ವಿನಯ್ ರಾಜ್ ಕುಮಾರ್ ಅಭಿನಯದ ‘ಅನಂತು ವರ್ಸಸ್ ನುಸ್ರುತ್ ‘ಚಿತ್ರದಲ್ಲಿನಮುಸ್ಲಿಂ ಹುಡುಗಿ ಪಾತ್ರದಲ್ಲಿಲತಾ ಅದ್ಬುತವಾಗಿ ಅಭಿನಯಿಸಿದ್ದರು. ಸದ್ಯಕ್ಕೆ ತಮ್ಮದೇ ಕೆಲಸಗಳಲ್ಲಿ ಬ್ಯುಸಿ ಆಗಿರುವ ಅವರು, ಕನ್ನಡದ ಜತೆಗೆ ತೆಲುಗಿನಲ್ಲೂ ಮತ್ತಷ್ಟು ಅವಕಾಶಗಳೊಂದಿಗೆ ಸಕ್ರಿಯವಾಗುವ ನಿರೀಕ್ಷೆಯಲ್ಲಿದ್ದಾರೆ.