ಒಳ್ಳೇ ಹುಡುಗನ ಕುರಿ, ಹಸು ಮೇಯಿಸೋ ಕೆಲಸ

ಹಸು ಹಾಲು ಹಿಂಡುತ್ತಿರುವ ಪ್ರಥಮ್

ನಟ ಭಯಂಕರ ಅಲಿಯಾಸ್ ಒಳ್ಳೇ ಹುಡುಗ ಅಂದುಕೊಳ್ಳುವ ಪ್ರಥಮ್ ಬಗ್ಗೆ ಎಲ್ಲರಿಗೂ ಗೊತ್ತು. ಮಾತಲ್ಲೇ ಮೋಡಿ‌ ಮಾಡುವ ಪ್ರಥಮ್, ಸದ್ಯ ತನ್ನೂರಲ್ಲಿದ್ದಾರೆ. ಅಲ್ಲಿ ಕೃಷಿಯತ್ತ ಗಮನಹರಿಸಿದ್ದಾರೆ. ಅಷ್ಟೇ ಅಲ್ಲ, ಅವರು ತಮ್ಮ ಹಸು , ಕುರಿ ಮರಿಗಳನ್ನು ಮೇಯಿಸುವುದರ ಜೊತೆ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ ಅವರು ಹಸುವಿನ‌ ಹಾಲು ಕರೆದು ತಾನೊಬ್ಬ ಪಕ್ಕಾ ರೈತ ಎನ್ನುವುದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ತಾವು ಮಾಡುತ್ತಿರುವ ಕೆಲಸಗಳ ಫೋಟೋ ತೆಗೆದು ತಮ್ಮ ಮುಖಪುಟದಲ್ಲಿ ಹಾಕಿಕೊಂಡಿದ್ದಾರೆ.
‘ಈಗಷ್ಟೇ ನಾನು ಕುರಿ ಮೇಯಿಸುವಾಗ ನಮ್ ಚಿಕ್ಕಪ್ಪನ ಕುರಿ,ಮರಿ ಹಾಕ್ತು!ಗಂಡುಮರಿ ಆದ್ರಿಂದ ಮುಂದಿನ ತಿಂಗಳು ಸ್ವಲ್ಪ ಬಲಿತ ಮೇಲೆ ಮಾರಿಬಿಡ್ತಾರೆ!
ಹೆಣ್ಣು ಮರಿ ಆಗಿದ್ರೆ ಸಾಕೋದು ವಾಡಿಕೆ. ಹಾಗಾಗಿ ನಾನೇ
ಅದನ್ನು ಖರೀದಿಸಿದ್ದೇನೆ.
ಖುಷಿ ಅಂದ್ರೆ ಶೀಘ್ರದಲ್ಲೇ ನನ್ನ ಕುರಿಗಳ ಸಂಖ್ಯೆ ಜಾಸ್ತಿಆಗ್ತಿದೆ! ಎಂದು ಬರೆದುಕೊಂಡು ಖುಷಿ ಹಂಚಿಕೊಂಡಿದ್ದಾರೆ.
ಇನ್ನೊಂದು ಸ್ಟೇಟಸ್ ನಲ್ಲಿ
ಪ್ರತಿದಿನ ಕುರಿ ಮೇಯಿಸೋದು, ಹಾಲು ಕರೆಯೋದನ್ನು ಕಲೀತಾ ಇದೀನಿ ಎಂಬ ಸಾಲು ಬರೆದುಕೊಂಡಿದ್ದಾರೆ.
ಸದ್ಯ ನಟಭಯಂಕರ ಸಿನಿಮಾದ ಕೆಲಸ‌ ಪೆಂಡಿಂಗ್ ಇರುವುದರಿಂದ ಊರಲ್ಲೇ ಕುರಿ, ಹಸು‌ ಮೇಯಿಸಿಕೊಂಡು ಹಾಲು ಕರೆಯುವುದನ್ನು ಕಲೀತಾ ಇದಾರೆ.
ಸಿನಿಮಾ ಚಟುವಟಿಕೆಗಳು ಶುರುವಾದರೆ ಪ್ರಥಮ್ ಮತ್ತೆ ಗಾಂಧಿನಗರದಲ್ಲಿ ಸದ್ದು ಮಾಡುವ ಉತ್ಸಾಹದಲ್ಲಿದ್ದಾರೆ.

Related Posts

error: Content is protected !!