ಬಯೋಫಿಕ್ ಬರೆಯುತ್ತಿದ್ದಾರೆ ಸೈಫ್ ಅಲಿಖಾನ್!

ಸಾಧಕರ ಆತ್ಮಕತೆಗಳಿಗೂ ಬಾಲಿವುಡ್ ಹತ್ತಿರದ ನಂಟು. ಯಾಕಂದ್ರೆ ಸಾಧಕರ ಬಯೋಫಿಕ್ ಆಧರಿಸಿ ಸಿನಿಮಾ ಮಾಡುವುದು ಅಲ್ಲಿನ ಪ್ಯಾಷನ್. ಹಾಗೆಯೇ ಅದಕ್ಕಲ್ಲಿ ದೊಡ್ಡ ಮಾರ್ಕೆಟ್ ಕೂಡ ಇದೆ. ಹಲವು ಸಿನಿಮಾಗಳಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದು ಸಾಕ್ಷಿ. ಅಲ್ಲಿನ ಸದ್ಯದ ಪರಿಸ್ಥಿತಿ ಹೀಗಿರುವಾಗಲೇ ನಟ , ನಿರ್ಮಾಪಕ ಸೈಪ್ ಅಲಿಖಾನ್ ತಮ್ಮದೇ ಬಯೋಫಿಕ್ ಬರೆಯುವುದಾಗಿ ಹೇಳಿದ್ದಾರೆ.

ಈಗಾಗಲೇ ಚಿತ್ರೋದ್ಯಮದಲ್ಲಿ೨೫ ವರ್ಷ ಗಳಿಂದ ವಿವಿಧ ಪಾತ್ರ, ವಿವಿಧ ಹಂತಗಳಲ್ಲಿ ಕೆಲಸ ಮಾಡಿರುವ ನಟಿ ಸೈಪ್, ನಟಿ ಕರೀನಾ ಕೈ ಹಿಡಿಯುವ ಮೂಲಕದೊಡ್ಡ ಸುದ್ದಿ ಯಾಗಿದ್ದು ಅವರ ಸಿನಿ ಜರ್ನಿ ಯ ಇನ್ನೊಂದು ಘಟ್ಟ. ಅಷ್ಟು ಮಾತ್ರವೇ ಅಲ್ಲ, ನಟನಾಗಿ ಸೋಲು- ಗೆಲವು ಕಂಡಿದ್ದಾರೆ.

ಅಗರ್ಭ ಶ್ರೀಮಂತಿಕೆ ಇದ್ದರೂ, ನಟನಾಗಿ ನಿರೀಕ್ಷೆ ಯಷ್ಟು ಮಿಂಚಲು ಆಗಿಲ್ಲ. ಅವೆಲ್ಲವನ್ನೂ ಈಗ ತಮ್ಮ ಆತ್ಮ ಚರಿತ್ರೆಯ ಲ್ಲಿ ತೆರೆದಿಡಲಿದ್ದಾರಂತ. ಹಾಗಂತ ಬಯೋಫಿಕ್ ಬರೆಯುವುದು ಅದ್ಬುತ ಅಂತ ಅವರು ಭಾವಿಸಿಲ್ಲ. ಅದೊಂದು ಸ್ವಾರ್ಥದ ಹೊತ್ತಿಕೆ ಆಗುವುದು ಅನ್ನುವ ಅರಿವು ಕೂಡ ಅವರಿಗಿದೆ.

ಅದೇ ವೇಳೆ, ಅಭಿಮಾನಿಗಳಿಗೆ ಕುತೂಹಲ ಇದ್ದೇ ಇರುತ್ತದೆ ಎನ್ನುವ ನಂಬಿಕೆ ಅವರದು. ಹಾಗಾಗಿಯೇ ಬಯೋಫಿಕ್ ಬರೆಯುವುದಕ್ಕೆ ಶುರು ಮಾಡಿದ್ದೇನೆ ಎನ್ನುತ್ತಾರೆ ನವಾಬ್ ಸೈಪ್ ಅಲಿಖಾನ್. ಹಲವು ಸಂಗತಿಗಳು ಬದಲಾಗುತ್ತವೆ. ಅವು ಗಳನ್ನು ನೆನಪಿಸಿಕೊಳ್ಳುವುದು, ಬರೆಯುವುದು ಒಂಥರ ವಿಶೇಷ ಅನುಭವ ಎನ್ನುವ ಸೈಪ್, ಅಭಿಮಾನಿಗಳಿಗೆ ಅದೆಲ್ಲ ಮೆಚ್ಚುಗೆ ಆಗಬಹುದೆನ್ನುವ ನಿರೀಕ್ಷೆಯಲ್ಲಿದ್ದಾರೆ . ಸೈಪ್ ಹಾಗೂ ಕರೀನಾ ಜೋಡಿ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದೆ.

Related Posts

error: Content is protected !!