ಸೆಪ್ಟೆಂಬರ್ ನಲ್ಲಿ ಥಿಯೇಟರ್ ಓಪನ್- ಸಿನಿ ಮಂದಿ ಮೊಗದಲ್ಲಿ ಮಂದಹಾಸ

ಕೇಂದ್ರ ಸರ್ಕಾರ ಸೆಪ್ಟೆಂಬರ್ ವೇಳೆಗೆ ಥಿಯೇಟರ್ ಶುರುವಿಗೆ ಸೂಚನೆ ಕೊಡುವ ಭರವಸೆ ಕೊಟ್ಟಿದೆ. ಹಾಗಾಗಿ ಸಿನಿಮಾ ರಂಗದಲ್ಲಿ ಮತ್ತೆ ಚೈತನ್ಯ ಮೂಡಿದೆ. ಈಗಾಗಲೇ ಕೆಲ ಸಿನಿಮಾಗಳ ಚಿತ್ರೀಕರಣ ಕೂಡ ನಡೆಯುತ್ತಿದೆ. ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ.

……….,…………………………

ಕೊರೊನಾ ಆವರಿಸಿದ್ದರಿಂದ ಇಡೀ ಚಿತ್ರರಂಗವೇ ಸ್ತಬ್ಧವಾಗಿತ್ತು. ಕಳೆದ ಆರು ತಿಂಗಳಿಂದಲೂ ಸಿನಿಮಾ ರಂಗ ರಂಗು‌ ಕಳೆದುಕೊಂಡಿತ್ತು. ಈಗ ಚಿತ್ರಮಂದಿರಗಳು ಶುರುವಾಗುವ ಸೂಚನೆ ಕೊಟ್ಟಿವೆ. ಹೌದು, ಸೆಪ್ಟೆಂಬರ್ 15 ರ ನಂತರ ಥಿಯೇಟರ್ ಓಪನ್ ಆಗಲಿವೆ ಎನ್ನಲಾಗುತ್ತಿದೆ. ಫಿಲ್ಮ್ ಚೇಂಬರ್ ಕೂಡ ಕೇಂದ್ರ ಸರ್ಕಾರ ಹೇಳಿಕೆಯಿಂದ ಉತ್ಸಾಹದಲ್ಲಿದೆ. ಕೇಂದ್ರ ಸರ್ಕಾರ ಸೆಪ್ಟೆಂಬರ್ ವೇಳೆಗೆ ಥಿಯೇಟರ್ ಶುರುವಿಗೆ ಸೂಚನೆ ಕೊಡುವ ಭರವಸೆ ಕೊಟ್ಟಿದೆ. ಹಾಗಾಗಿ ಸಿನಿಮಾ ರಂಗದಲ್ಲಿ ಮತ್ತೆ ಚೈತನ್ಯ ಮೂಡಿದೆ. ಈಗಾಗಲೇ ಕೆಲ ಸಿನಿಮಾಗಳ ಚಿತ್ರೀಕರಣ ಕೂಡ ನಡೆಯುತ್ತಿದೆ. ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಥಿಯೇಟರ್ ಆರಂಭಗೊಳ್ಳುತ್ತಿದ್ದಂತೆಯೇ ಪ್ರೇಕ್ಷಕರಿಗೆ ದರ್ಶನ ನೀಡಲಿವೆ. ಕಿರುತೆರೆ ಕೂಡ ಚಿತ್ರೀಕರಣ ಶುರು ಮಾಡಿ ತಮ್ಮ ಪ್ರೇಕ್ಷಕ ವಲಯವನ್ನು ಖುಷಿಪಡಿಸುತ್ತಿದೆ. ಸೆಪ್ಟೆಂಬರ್ ನಲ್ಲಿ ಚಿತ್ರರಂಗ ಕೂಡ ತನ್ನ ಕಾರ್ಯ ಶುರು ಮಾಡಲಿದೆ.


 

Related Posts

error: Content is protected !!