ಸಿಂಗರ್ ಚಂದನ್ ಶೆಟ್ಟಿ‌ ಅಂದ್ರೆ ಯಾಕಿಷ್ಟು ಕೋಪ?

ವಿವಾದ ಎಬ್ಬಿಸುತ್ತಿರುವವರು ಯಾರು?

ಸಿಂಗರ್  ಚಂದನ್ ಶೆಟ್ಟಿ ಮತ್ತೊಂದು ವಿವಾದದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ‌. ‌ ಈಗ ಜಾನಪದದ ಸಾಂಸ್ಕೃತಿಕ ನಾಯಕ‌ಮಲೈ ಮಾದೇಶ್ವರನ‌ ಭಕ್ತರ ಕೆಂಗಣ್ಣು ಚಂದನ್ ಅವರ ಮೇಲೆ ಬಿದ್ದಿದೆ. ಇತ್ತೀಚೆಗೆ ಚಂದನ್ , ಆನಂದ್ ಆಡಿಯೋ ಮೂಲಕ‌ಹೊರ ತಂದ ಕೋಲು‌ಮಂಡೆ ಜಂಗಮ‌ದೇವರು ವಿಡಿಯೋ‌ಆಲ್ಬಂ‌ ಅದಕ್ಕೆ ಕಾರಣ‌.

ಅಲ್ಲೇನಿದೆ ವಿವಾದದ ಅಂಶ…

ಕೋಲು ಮಂಡೆ ಜಂಗಮ ದೇವರು  ಹಾಡಿನ ವಿಡಿಯೋದಲ್ಲಿ ಶಿವ ಶರಣೆ ಸಂಕಮ್ಮ ಅವರ ಪಾತ್ರ ವೂ ಇದೆ. ಅದು ನಾಡಿನ‌ ಸಾಂಸ್ಕೃತಿಕ ಮತ್ತು ಸಂಪ್ರದಾಯದಲ್ಲಿ ಪೂಜನೀಯ ಸ್ಥಾನದಲ್ಲಿದೆ.ಆ ಶಿವಶರಣೆ  ಸಂಕಮ್ಮಳನ್ನುಅಶ್ಲೀಲ ರೀತಿಯಲ್ಲಿ ಚಿತ್ರೀಕರಿಸಲಾಗಿದೆ  ಎನ್ನುವುದು ಚಂದನ್ ಶೆಟ್ಟಿ ಮೇಲಿನ ಆರೋಪ.‌ ಇದು ಮಾದಪ್ಪ ಭಕ್ತರಿಗೆ ಮಾಡಿದ ಅವಮಾನ ಎನ್ನುವುದು ಆಕ್ರೋಶ ಹಿಂದಿನ‌ ಕಾರಣ. ಅದೇ ಹೇಗೆ ವಿವಾದದ ಕಿಡಿ ಹೊತ್ತಿಸಿದೆ.

ಯೂಟ್ಯೂಬ್ ನಿಂದ ಡಿಲಿಟ್….

ವಿವಾದ ಭುಗಿಲೇಳುತ್ತಿದ್ದಂತೆ ಹಾಡಿನ ವಿಡಿಯೋ‌ವನ್ನು ಆನಂದ್ ಆಡಿಯೋ‌ಸಂಸ್ಥೆ ಡಿಲಿಟ್ ಮಾಡಿದೆ‌. ಮತ್ತೊಂದೆಡೆ ಗಾಯಕ ಚಂದನ್ ಶೆಟ್ಟಿ ಕ್ಷಮೆ ಕೋರಿದ್ದಾರೆ. ಸಂಸ್ಥೆ ಕೂಡ ನೈತಿಕ ಹೊಣೆ ಹೊತ್ತು ಕ್ಷಮೆ ಕೇಳಿದೆ.ಅಲ್ಲಿಗೆ ವಿವಾದ ಕೊಂಚ ತಣ್ಣಗಾಗಿದೆ. ಆದರೆ ಚಂದನ್ ವಿರುದ್ದ ದೂರು ದಾಖಲಾಗಿರುವುದರಿಂದ ಅದು ಎಲ್ಲಿ ಗೆ ಹೋಗಿ ನಿಲ್ಲುತ್ತದೊ ಗೊತ್ತಿಲ್ಲ.

ಇದು‌ ಮೊದಲಲ್ಲ..

 

ಸಿಂಗರ್ ಚಂದನ್ ಗೂ ವಿವಾವದಕ್ಕೂ ಬಿಡಲಾರದ ನಂಟು.‌ಮೈಸೂರಿನ‌ಯುವ ದಸರಾ ದಲ್ಲಿ ಮದುವೆ ಪ್ರಪೋಜಲ್ ಮಾಡಿ‌ವಿವಾದ ಎಬ್ಬಿಸಿದ್ದರು. ಅದರ ವಿರುದ್ಧ ಕೂಡ ದೂರು ದಾಖಲಾಗಿತ್ತು.‌ಅದು ತಣ್ಷಗಾಗಿ ಚಂದನ್ ತಮ್ಮದೇ ಜನಪ್ರಿಯತೆಯ ಟ್ರ್ಯಾಕ್ ಗೆ ಮರಳಿದರು ಎನ್ನುವ ಹೊತ್ತಿಗಾಗಲೇ ಮತ್ತೊಂದು ವಿವಾದ. ಇದು ಅವರೇ ಹುಟ್ಟಿಕೊಳ್ಳುತ್ತಿರುವ ವಿವಾದಗಳೇ, ಅಥವಾ ಯಾರಾದರೂ ಅವರಿಗೆ ಆಗದವರು ಮಾಡುತ್ತಿರುವ ಹುನ್ನಾರಗಳಾ? ಜನರಲ್ಲಿ ಹಲವು ಪ್ರಶ್ನೆಗಳಿವೆ‌.

 

Related Posts

error: Content is protected !!