ಲಾಕ್‌ ಡೌನ್‌ ಟೈಮಲ್ಲಿ ‌ಅಜೇಯ್‌ ರಾವ್ ಮಾಡಿದ್ದೇನು ಗೊತ್ತಾ? ಒಂದೊಳ್ಳೆ ಕಥೆಯಾಯ್ತು, ನಿರ್ದೇಶನಕ್ಕೂ ಮನಸ್ಸಾಯ್ತು

 ಈ ಲಾಕ್ ಡೌನ್‌ ಸಮಯವನ್ನಂತೂ ಪ್ರತಿಯೊಬ್ಬರೂ ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಅದರಲ್ಲೂ ಕನ್ನಡದ ನಟರ ಪೈಕಿ ಕೆಲವರು ಹಾಡು ಬರೆದರೆ, ಕೆಲವರು ಹಾಡು ಹಾಡಿದರು. ಇನ್ನೂ ಕೆಲವರು ಮನೆಯವರ ಜೊತೆ ಸಂತಸದಿಂದ ಕಾಲ ಕಳೆದರು. ಈಗ ನಟ ಅಜೇಯ್ ರಾವ್‌ ಅವರು ಈ ಸಮಯವನ್ನು ವ್ಯರ್ಥ ಮಾಡದೆ ಅವರೊಂದು ಕಥೆ ಹೆಣೆದಿದ್ದಾರೆ ಎಂಬುದು ವಿಶೇಷ.
ಹೌದು, ಅವರು ಲಾಕ್‌ ಡೌನ್‌ ಸಮಯದಲ್ಲಿ ಮನೆಯಲ್ಲಿದ್ದರು. ಅಮ್ಮ, ಪತ್ನಿ ಮತ್ತು ಮಗಳ ಜೊತೆ ಸಮಯ ಕಳೆಯುತ್ತಲೇ ಜೊತೆಯಲ್ಲೊಂದು ಒಳ್ಳೆಯ ಕಥೆ ರೆಡಿಮಾಡಿದ್ದಾರೆ. ಈಗಾಗಲೇ ಸಂಪೂರ್ಣ ಸ್ಕ್ರಿಪ್ಟ ಮುಗಿದಿದ್ದು, ಸಂಭಾಷಣೆ ಮಾತ್ರ ಬಾಕಿ ಉಳಿದಿದೆ. ಅಂತೂ ಅಜೇಯ್‌ ರಾವ್‌ ಒಂದು ಕಥೆ ಬರೆದಿದ್ದಾರೆ. ಅದೊಂದು ಹೊಸ ಬಗೆಯ ಕಥೆ. ಕಥೆಯೇ ಹೈಲೈಟ್.‌ ಮಾಸ್‌,ಕ್ಲಾಸ್‌,ಲವ್‌, ಎಮೋಷನಲ್‌, ಥ್ರಿಲ್ಲರ್‌ ಜೊತೆಯಲ್ಲಿ ಬೇರೆ ಹೊಸ ವಿಷಯವೂ ಇದೆ. ಯುನಿಕ್‌ ಅಗಿರುವಂತಹ ಕುತೂಹಲ ಕೆರಳಿಸುವಂತಹ ಕಥೆ ಇದಾಗಿದೆ. ಎಲ್ಲಾ ವರ್ಗಕ್ಕೂ ಇಷ್ಟವಾಗುವ ಕಥೆ ಮಾಡಿಕೊಂಡಿದ್ದಾರೆ. ಎಲ್ಲಾ ಸರಿ, ಅಜೇಯ್‌ ರಾವ್‌ ಮುಂದೆ ನಿರ್ದೇಶನ ಮಾಡಬಹುದಾ? ಗೊತ್ತಿಲ್ಲ. ಅದರೆ, ಅಜೇಯ್ ರಾವ್‌ ಕಥೆ ಆಗಿರುವುದರಿಂದ ನಿರ್ದೇಶನ ಮಾಡಿದರೂ ಅಚ್ಚರಿಯೇನಿಲ್ಲ. ಸದ್ಯಕ್ಕೆ ಅಜೇಯ್‌ ರಾವ್‌ ಕಥೆ ರೆಡಿಯಾಗಿದೆ. ಅವರ ಅಭಿನಯದ ಕೃಷ್ಣ ಟಾಕೀಸ್‌ ಮತ್ತು ಶೋಕಿವಾಲ ಮುಗಿದಿದೆ. ಸದ್ಯಕ್ಕೆ ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸ ಮುಗಿಸಿಕೊಂಡು ಇನ್ನೇನು ಸೆನ್ಸಾರ್‌ ಬಳಿಕ ಪ್ರೇಕ್ಷಕರ ಮುಂದೆ ಬರಬೇಕಿದೆ. ಅದು ಬಿಟ್ಟರೆ, ಗುರುದೇಶಪಾಂಡೆ ಅವರ ಜೊತೆಗೆ ಒಂದು ಸಿನಿಮಾ ಮಾಡಬೇಕಿದೆ. ಇನ್ನು ಕ್ರಿಸ್ಟಲ್‌ ಪಾರ್ಕ್‌ ಬ್ಯಾನರ್‌ನಲ್ಲಿ ಇನ್ನೊಂದು ಸಿನಿಮಾ ಬಾಕಿ ಇದೆ.

Related Posts

error: Content is protected !!