ಡಿಎನ್ಎ ಟೆಸ್ಟ್ ಗೆ ರೆಡಿ

ಸಿನಿಮಾ ಪ್ರೇಕ್ಷಕ ಡಿ ಎನ್ ಎ ಟೆಸ್ಟ್ ಗೆ ರೆಡಿ ಆಗಬೇಕಿದೆ. ಯಾಕಂದ್ರೆ ನಿರ್ದೇಶಕ ಪ್ರಕಾಶ್ ಮೇಹು ಡಿಎನ್ ಎ ಟೆಸ್ಟ್ ಮಾಡಿಸಲು ಬರುತ್ತಿದ್ದಾರೆ. ಅಂದ ಹಾಗೆ ಅವರೇನು ವೈದ್ಯರೇ ಅಂತ ಯೋಚಿಸಬೇಡಿ. ಅವರು ನಿರ್ದೇಶಿಸಿ, ತೆರೆಗೆ ತರಲು ಹೊರಟಿರುವ ‘ಡಿಎನ್ ಎ’ ಹೆಸರಿನ ಚಿತ್ರ ರಿಲೀಸ್ ಗೆ ರೆಡಿ ಆಗಿದೆ. ಸದ್ಯಕ್ಕೆ ಚಿತ್ರದ ಸೆನ್ಸಾರ್ ಕೂಡ ಮುಗಿದಿದೆ. ಮೇಹು ಪ್ರಕಾರ ಅದಕ್ಲೆ ಸೆನ್ಸಾರ್ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆಯಂತೆ.

ಚಿ ತ್ರ ನೋಡಿದ ತಂತ್ರಜ್ಞರು ಅನೇಕರು ಬಹಳ ಮೆಚ್ಚುಗೆಯ ಮಾತನ್ನಾಡಿದ್ದಾರೆ, ಇಡೀ ಕುಟುಂಬ ಯಾವುದೇ ಮುಜುಗರವಿಲ್ಲದೆ ಒಟ್ಟಿಗೆ ಕುಳಿತು ಕುತೂಹಲದಿಂದ ನೋಡಿಸಿಕೊಳ್ಳುವ ಭಾವನಾತ್ಮಕ ಚಿತ್ರ ಇದಾಗಿದೆ, ರಾಜಕುಮಾರ್,ಪುಟ್ಟಣ್ಣನವರ ಕಾಲದ ಕಥಾಪ್ರಧಾನ ಚಿತ್ರಗಳನ್ನು ನೆನಪಿಸಿಕೊಳ್ಳುವವರಿಗೆ ಈ ಚಿತ್ರ ರಸದೌತಣ ನೀಡಲಿದೆ ಅನ್ನುವುದು ನೋಡಿದವರ ಒಟ್ಟಾರೆ ಅಭಿಪ್ರಾಯ, ಪುನೀತ್ ರಾಜಕುಮಾರ್ ಅವರ “ರಾಜಕುಮಾರ” ನಂತರ ಆ ಜಾನರ್ನಲ್ಲಿ ಬರುತ್ತಿರುವ ಉತ್ತಮ ಚಿತ್ರ ಅನ್ನುವುದು ಸೆನ್ಸಾರ್ ಮಾಡಿದವರು ವ್ಯಕ್ತಪಡಿಸಿದ ಅಭಿಪ್ರಾಯ’ ಎನುತ್ತಾರೆ ನಿರ್ದೇಶಕ ಪ್ರಕಾಶ್ ಮೇಹು.

Related Posts

error: Content is protected !!