ಕರ್ವ ನವನೀತ್ ಜತೆ ಕಾಮಿಡಿ‌ ಕಿಂಗ್ಸ್

ಕಾಮಿಡಿ ಕಿಂಗ್ಸ್ ಜತೆಗೆ ನವನೀತ್

  ಕಾಮಿಡಿ‌ ಟಾನಿಕ್ ಗೆ ನವನೀತ್ ಫುಲ್ ಖುಷ್

‘ಕರ್ವ’ ಖ್ಯಾತಿಯ ನಿರ್ದೇಶಕ ಈಗ ಹೊಸದೊಂದು ಸಿನಿಮಾದ ಸಿದ್ದತೆಯಲ್ಲಿದ್ದಾರೆ. ಈಗಾಗಲೇ ಈ‌ಚಿತ್ರಕ್ಕೆ ಚಾಲನೆ‌ಯೂ‌ ಸಿಕ್ಕಿದೆ.  ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ನವನೀತ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತರುಣ್ ಶಿವಪ್ಪ ಅದರ ನಿರ್ಮಾಣದ ಹೊಣೆ ಹೊತ್ತಿದ್ದಾರೆ‌ .‌ಕೊರೊನಾ ಕಾರಣಕ್ಕೆ ಆ ಸಿನಿಮಾದ ಕೆಲಸ ಈಗ ತಟಸ್ಥಗೊಂಡಿದೆ.‌ ಅದಕ್ಕೀಗ ಮತ್ತೆ ಚಾಲನೆ ಸಿಕ್ಕಂತೆ ಕಾಣುತ್ತಿದೆ.‌‌ನಿರ್ದೇಶಕ ನವನೀತ್ ಮನೆಯಲ್ಲಿ ಕನ್ನಡದ ಕಾಮಿಡಿ‌ಕಿಲಾಡಿಗಳ ಬಳಗ ಒಂದಾಗಿದೆ.  ಅಂದ ಹಾಗೆ, ಕಾಮಿಡಿ‌ಕಿಲಾಡಿಗಳು ಅಂದಾಕ್ಣಣ ಜೀ ಕನ್ನಡದ ಕಾಮಿಡಿ ಕಿಲಾಡಿಗಳ ಪ್ರತಿಭೆಗಳಲ್ಲ, ಇವರು ರಿಯಲ್ ಲೈಫ್ ನಲ್ಲಿನ‌ಕಾಮಿಡಿ ಕಿಂಗ್ ಗಳು.‌ಹಾಸ್ಯ ಕಾರ್ಯಕ್ರಮಗಳ ಮೂಲಕ‌ಮನೆ ಮಾತಾದ ಗಂಗಾವತಿ ಪ್ರಾಣೇಶ್,  ಜೋಷಿ, ಮಹಾಮನೆ ಜತೆಗೆ ಅವರದೇ ಮನೆಯಲ್ಲಿ ತಿಂಡಿ ಸವಿದಿದ್ದಾರೆ.‌ ಅವರೆಲ್ಲ ಜತೆಗಿರುವ ಫೋಟೋವೊಂದನ್ನು‌ಸೋಷಲ್ ಮೀಡಿಯಾದಲ್ಲಿ ಹಂಚಿಕೊ‌ಂಡಿದ್ದು‌ಕುತೂಹಲ‌ಕೆರಳಿಸಿದೆ.ಕೊರೋನಾ‌ನಡುವೆಯೂ ಇವರೆಲ್ಲ ಒಟ್ಟಾಗಿರುವುದನ್ನು‌ನೋಡಿದರೆ,ನವನೀತ್  ಮುಂದಿನ‌ಸಿನಿಮಾದಲ್ಲಿ ಇವರೆಲ್ಲ ಇರುತ್ತಾರಾ ಎನ್ನುವ ಆಸಕ್ತಿಗೂ ಹುಟ್ಟಿದೆ.

 

Related Posts

error: Content is protected !!