‘ಆಡಿಸಿದಾತ’ನ ಟೀಸರ್ ಲಾಂಚ್

ರಾಘವೇಂದ್ರ ರಾಜಕುಮಾರ್ ಅಭಿನಯದ 25 ನೇ ಚಿತ್ರ ‘ಆಡಿಸಿದಾತ’ ಟೀಸರ್ ಹೊರಬಂದಿದೆ. ಡಿ.ಬಿಟ್ಸ್ ಮ್ಯೂಜಿಕ್ ಸಂಸ್ಥೆಯ ಮೂಲಕ ಟೀಸರ್ ಲಾಂಚ್ ಆಗಿದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಟೀಸರ್ ಲಾಂಚ್ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದರು. ‘ ಟೀಸರ್ ತುಂಬಾ ಚೆನ್ನಾಗಿದೆ’. ಅಣ್ಣ ರಾಘವೇಂದ್ರ ರಾಜ್ ಕುಮಾರ್ ಲುಕ್ ಅದ್ಬುತವಾಗಿದೆ. ಚಿತ್ರ ಪ್ರೇಕ್ಷಕರಿಗೆ ಖುಷಿ ಕೊಡಲಿದೆ‌ ಅಂತ ‘ಆಡಿಸಿದಾತ’ ಚಿತ್ರತಂಡಕ್ಕೆ ಶುಭ ಕೋರಿದರು.ಈ ಸಂದರ್ಭದಲ್ಲಿ ಎಸ್.ಎ.ಗೋವಿಂದ ರಾಜು, ನಿರ್ಮಾಪಕ ಹೆಚ್‌. ಹಾಲೇಶ್, ನಾಗರಾಜ್ ವಿ ಹಾಗೂ ನಿರ್ದೇಶಕ ಫಣೀಶ್ ಭಾರದ್ವಾಜ್ ಉಪಸ್ಥಿತಿತರಿದ್ದರು.

Related Posts

error: Content is protected !!