ಅಪ್ಪು ಗಡ್ಡದ ಕಥೆ – ಪವರ್ ದಾಡಿ ಬಿಟ್ಟಿದ್ದು ಯಾಕೆ ಗೊತ್ತಾ?

ಪುನೀತ್ ರಾಜಕುಮಾರ್ ಅಂದಾಕ್ಷಣ ಎಲ್ಲರ ಕಣ್ಣ ಮುಂದೆ ಹಾದು ಹೋಗೋದು‌ ಸದಾ‌ ಹಸನ್ಮುಖಿ, ಪಾಸಿಟಿವ್ ವ್ತಕ್ತಿತ್ವ , ಯಾವಾಗಲೂ ನೀಟ್ ಶೇವ್ ಮಾಡಿದ ನಗು ಮುಖ. ಅಷ್ಟೇ ಅಲ್ಲ ಪ್ರೀತಿಯ ಮಾತುಕತೆ ಜೊತೆಗೆ ಅಪ್ಪುಗೆ. ಸದ್ಯ ಪುನೀತ್ ಗೆಟಪ್ ಬದಲಾಗಿದೆ. ಅವರೀಗ ಗಡ್ಡ ಬಿಟ್ಟಿದ್ದಾರೆ. ಈಗಾಗಲೇ ಕೆಲವು ಸಿನಿಮಾ ಪಾತ್ರಕ್ಕಾಗಿ ಅವರು ದಾಡಿ ಬಿಟ್ಟಿದ್ದುಂಟು. ಆದರೆ, ಈಗ ಯಾವ ಚಿತ್ರದ ಚಿತ್ರೀಕರಣ ಯಾವುದೂ ಇಲ್ಲ. ಆದರೂ ಅಪ್ಪು ಹೀಗೆ ದಾಡಿ ಬಿಡೋಕೆ ಕಾರಣ ಬೇರೆ ಇದೆ. ಯುವರತ್ನ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ನಡುವೆ ಅವರು ಹೊಸ ಚಿತ್ರಗಳತ್ತವೂ ಗಮನ ಹರಿಸಿದ್ದಾರೆ. ಶಶಾಂಕ್ ಹಾಗೂ ಪವನ್ ಒಡೆಯರ್ ಜೊತೆಯಲ್ಲಿ ಸಿನಿಮಾ ಮಾಡಲಿದ್ದಾರೆ. ಅದಲ್ಲದೆ ಇನ್ನೂ ಕೈ ತುಂಬಾ ಚಿತ್ರಗಳಿವೆ. ಆ ಚಿತ್ರಗಳ ಪಾತ್ರಕ್ಕಾಗಿ ಅಪ್ಪು ಗಡ್ಡ ಬಿಟ್ಟಿರಬಹುದು. ಅದೇನೆ ಇರಲಿ, ಅಪ್ಪು ಫುಲ್ ಶೇವ್ ಮಾಡ್ಕೊಂಡು ಸದಾ ನಗುಮೊಗದಲ್ಲಿ ನೋಡೋದೆ ಚಂದ‌. ಅಪ್ಪು ಫ್ಯಾನ್ಸ್ ಮಾತ್ರ ಪವರ್ ಹೇಗಿದ್ರೂ ಸರಿ ಅವರ ಸಿನಿಮಾ ಮೂಲಕ ರಂಜಿಸುತ್ತಿರಬೇಕಷ್ಟೇ ಅಂತ ಯುವರತ್ನನ‌ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಗಡ್ಡ ಬಿಟ್ಟಿರೋದಕ್ಕೆ ಕಾರಣ ಇಷ್ಟರಲ್ಲೇ ಗೊತ್ತಾಗಲಿದೆ. ಆ‌ ಮೂಲಕ ಅವರು ಬಿಗ್ ಬ್ರೇಕಿಂಗ್ ನ್ಯೂಸ್ ಕೊಡಲಿದ್ದಾರೆ. ಅಲ್ಲಿಯವರೆಗೆ ಕಾಯಬೇಕು

Related Posts

error: Content is protected !!