ಕಿರಿಕ್‌ ಶಂಕರನ ಹಾಡಿಗೆ ಭರ್ಜರಿ ಮೆಚ್ಚಗೆ- ಇದು ಲೂಸ್ ಮಾದ ಯೋಗಿಯ ಚಿತ್ರ

ಲೂಸ್ ಮಾದ ಯೋಗಿ ಅಭಿನಯದ ಕಿರಕ್ ಶಂಕರ್ ಸಿನಿಮಾ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ.
ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಗಣೇಶ ಹಬ್ಬದಂದು ಲಿರಿಕಲ್ ವಿಡಿಯೊ ಬಿಡುಗಡೆ ಮಾಡಿದೆ.


ಎಂ.ಎನ್. ಕುಮಾರ್ ನಿರ್ಮಾಣದ ಈ ಚಿತ್ರವನ್ನು ಅನಂತ್ ರಾಜು ನಿರ್ದೇಶನ ಮಾಡಿದ್ದಾರೆ. ವೀರ್ ಸಮರ್ಥ್ ಸಂಗೀತ ಇರುವ ‘ದರ್ಬಾರ್ ದರ್ಬಾರ್ ನಮ್ದೇ ದರ್ಬಾರ್ ದರ್ಬಾರ್…’ ಎಂಬ ಹಾಡನ್ನು ರಾಮ್ ನಾರಾಯಣ್ ಬರೆದಿದ್ದಾರೆ. ಪಕ್ಕಾ ಮಾಸ್ ಫೀಲ್ ಇರುವ ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದುಕೊಂಡಿದೆ.

Related Posts

error: Content is protected !!