ಕಾಮಿಡಿ‌‌ ಹಿಂದಿನ ಕೋಮಲ‌ ಮನಸ್ಸು ಎಷ್ಟು ನೊಂದಿರಬೇಡಾ?

ಕಾಮಿಡಿ ಟ್ರಂಪ್ ಕಾರ್ಡ್ ಗೆ ಮರಳಿದ ನಟ‌  ಕೋಮಲ್ ಅವರ ನೋವಿನ ಕತೆ ಇದು

………………………………………..

ನಟ ಕೋಮಲ್ ಮತ್ತೆ ಹಳೆ ಟ್ರ್ಯಾಕ್ ಗೆ ಮರಳಿದ್ದಾರೆ. ಹೀರೋ‌ ಎನ್ನುವ ಬದಲಿಗೆ  ಕಾಮಿಡಿ ಇಟ್ಟುಕೊಂಡೆ ಸಿನಿಮಾ‌‌ಮಾಡಲು ಮುಂದಾಗಿದ್ದಾರೆ. ಕ್ರಿಸ್ಟಲ್ ಪಾರ್ಕ್ ಚಂದ್ರಶೇಖರ್ ನಿರ್ಮಾಣದ ಕಾಮಿಡಿ ಪ್ರಧಾನ ಚಿತ್ರಕ್ಕೆ ಕೋಮಲ್ ಹೀರೋ‌ ಆಗಿದ್ದಾರೆ. ಅಲ್ಲಿಗೆ ಹೊಸ  ಹುಡುಗನಿಗಿಂತ  ಹಳೇ ಗಂಡನ ಪಾದವೇ ಗತಿ ಎನ್ನುವಂತಾಗಿದೆ ಅವರ ಪರಿಸ್ಥಿತಿ. ಆ ಹಳೇ ಗಂಡ ಯಾರು? ನಿಮ್ಗೇ ಗೊತ್ತು ಅದು ಕಾಮಿಡಿ.‌‌ ಅದು ಕೋಮಲ‌ ಅವರ ಟ್ರಂಪ್ ಕಾರ್ಡ್ . ಯಾಕಂದ್ರೆ ಕೋಮಲ್ ನಟನಾಗಿ‌ ಬಂದಿದ್ದು, ಜನಪ್ರಿಯತೆ ಪಡೆದಿದ್ದು ಅದರಿಂದಲೇ. ಕಾಮಿಡಿ‌ ಮಾಡುವುದೇ ಅವರಿಗೆ ಇದುವರೆಗೂ‌ ನೇಮ್ ಆ್ಯಂಡ್ ಫೇಮ್ ತಂದುಕೊಟ್ಟಿದ್ದು. ಕೊನೆಗೊಮ್ಮೆ  ಏನಾಯ್ತು?

ಅದರಾಚೆಗೂ ಜಿಗಿಯುವ ಆಸೆ ಬಂತು. ಅಷ್ಟೊತ್ತಿಗೆ ಕೆಲವು ಕಾಮಿಡಿ‌ನಟರೂ ಹೀರೋ ಆಗಿ‌ ಮಿಂಚುತ್ತಿದ್ದರು. ಶರಣ್ ಅವರಂತೂ ಸಕ್ಸಸ್ ಫುಲ್ ಸ್ಟಾರ್ ಆಗಿದ್ದರು. ವಿಕ್ಟರಿ ಭರ್ಜರಿ ವಿಕ್ಟರಿ  ಸಾಧಿಸಿತ್ತು.‌ಅವರಂತೆಯೇ ತಾವು ಯಾಕೆ ಒಂದ್ ಕೈ‌ ನೋಡಬಾರದು ಅಂತ  ಗೋವಿಂದಾಯ ನಮ: ಅಂತ ಹೀರೋ ಗೆದ್ದರು ಕೂಡ. ಆದರೆ ಮುಂದೆ ಹಾಗಾಗಲಿಲ್ಲವೇ? ಸೋಲು ಅವರನ್ನು‌ಕಂಗೆಡಿಸಿತು.‌ ಸಾಕಷ್ಟು ಸಿನಿಮಾ‌ಬಂದವು. ಬಂಡವಾಳ ಹಾಕಿದ ನಿರ್ಮಾಪಕರು ಕೈ ಖಾಲಿ ಮಾಡಿಕೊಂಡರು. ಕೊನೆಗೆ ಕೋಮಲ‌ ಕೂಡ ಅವಕಾಶಗಳಿಲ್ಲದೆ ಕೂತರು.‌ಹಾಗಂತೆ ಸ್ಟಾರ್ ಸಿನಿಮಾಗಳಲ್ಲಿ  ಸಹ‌ನಟನಾಗಿ‌ ಕಾಮಿಡಿ‌ಮಾಡಲು ಅದೀತೆ?  ಅವಕಾಶ ಇಲ್ಲದೆ ಕುತಾಗಲೂ ಕೋಮಲ‌್ ಹಿಂದೆ ಮುಂದೆ ನೋಡಿದರು. ನಿರ್ದೇಶಕರು ಕೂಡ ಅವರನ್ನು ಸಹನಟನನ್ನಾಗಿ ಆಯ್ಕೆ ಮಾಡಿಕೊಳ್ಳಲು ನಿರಾಕರಿಸಿದರು. ಪರಿಣಾಮ ಅತ್ತ ದರಿ,ಇತ್ತ ಪುಲಿ ಎನ್ನುವಂತಾಗಿದ್ದ ಕೋಮಲ್ ಗೆ ನಾಯಕನಾಗುವುದು ಮುಂದೆ ಸವಾಲಾಯಿತು.‌ ಪಿಜಿಕಲ್ ಚೇಂಜ್ ಬಯಸಿದರು. ಕೆಂಪೇಗೌಡ ೨ ಅವತಾರ ತಾಳಲು‌ ಸಿಕ್ಸ್ ಪ್ಯಾಕ್‌ ಮಾಡಿಕೊಂಡರು.‌ಆ‌ ಹೊತ್ತಿಗೆ ಹೀರೋ ಒಬ್ಬನಿಗೆ ಸಿಕ್ಸ್ ಪ್ಯಾಕ್ ಅಗತ್ಯ ಎನ್ನುತಿತ್ತು‌ ಇಂಡಸ್ಟ್ರಿ. ‌ಪರಿಸ್ಥಿತಿಯ ಬೆನ್ನು‌ಬಿದ್ದರು. ಹೇಗಿದ್ದ ಕೋಮಲ್ ಹೇಗಾದ್ರೂ‌ ಅಂತ ಜನ ಬೆಚ್ವಿ ಬಿದ್ದರು. ಅದೇ ಗುಂಗು, ಹುಮ್ಮಸ್ಸಿನಲ್ಲಿ ಕೆಂಪೇ ಗೌಡ ೨ ಶುರುವಾಯಿತು.‌ಅಲ್ಲಿ‌ಸುದೀಪ್, ಇಲ್ಲಿ‌ಕೋಮಲ್. ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಯಿತು. ‌ಆದರೆ ದುರಾದೃಷ್ಟವಶಾತ್ ಕೋಮಲ್ ಗೆ ಗ್ರಹಚಾರ ಒಕ್ಕರಿಸಿಕೊ‌ಂಡಿತು.‌ಶೂಟಿಂಗ್ ವೇಳೆ  ಗಾಯಗೊಂಡು ಮನೆ‌ಹಿಡಿದರು. ಅದು ಯಾವ ರೀತಿ‌ ಅವರನ್ನು‌ ಭಾದಿಸಿತು ಅಂದರೆ, ವರ್ಷವೀಡಿ ಕೋಮಲ್  ಕಾಣಿಸಿಕೊಳ್ಳಲಿಲ್ಲ.

ಅಲ್ಲಿಂದ ಚೇತರಿಸಿಕೊಂಡು‌ಬರುವ ಹೊತ್ತಿಗೆ ಕೆಂಪೇಗೌಡಮ ಆರ್ಥಿಕ ಭಾರ ಅವರ ಮೇಲಿತ್ತು. ಗೆಲ್ಲುವ ಧೈರ್ಯ ಅವರಲ್ಲಿತ್ತು.‌ಸ್ಟಾರ್ ಹೋಟೆಲ್ ಗಳಲ್ಲಿಯೇ ರಿಲೀಸ್ ಮುಂಚಿನ ಸಭೆ- ಸಮಾರಂಭ ಮಾಡಿದರು. ಸಿನಿಮಾ‌ ಬಿಡುಗಡೆ ಆದಾಗ ಆ ಸಂಭ್ರಮ ಕಾಣದಂತಾಯಿತು.‌ಸಿನಿಮಾ‌‌ ಸೋತು ಹಾಕಿದ ಬಂಡವಾಳ‌ವಾಪಾಸ್ ಪಡೆಯುವುದಕ್ಕೂ ಪರದಾಡಬೇಕಾಯಿತು. ಕೋಮಲ್ ಪರಿಸ್ಥಿತಿ ಹೀಗಿತ್ತೆಂದರೆ, ಇದೆಲ್ಲ ಬೇಕಾ‌ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುವಂತಾಯಿತು.

ಇದೊಂದು ಕೆಟ್ಟ ಸಮಯ‌ ಕಳೆದಿದೆ. ಕೊರೋನಾ ಕಾಲ‌ ತೆರೆಗೆ ಸರಿಯುತ್ತಿರುವ ಹಾಗೆ ನಟ‌ ಕೋಮಲ್‌ಅವರಿಗೂ ಒಳೆಯ ದಿನಗಳು‌ ಬರುತ್ತಿವೆ. ಬಹುತೇಕ ಮುಂದಿನ ವರ್ಷ ಕನ್ನಡ‌ ಸಿನಿಮಾ‌ ಲೋಕದಲ್ಲಿ ಕೋಮಲ್‌ ಕಮಾಲ್ ಮಾಡುವುದು ಗ್ಯಾರಂಟಿ‌ಆಗಿದೆ. ಅವರಿಗೆ ಯಶಸ್ಸು ಸಿಗಲಿ.‌

Related Posts

error: Content is protected !!