ಆಗಸ್ಟ್ 25 ಕ್ಕೆ ಕೆಜಿಎಫ್ 2 ಶೂಟಿಂಗ್ ಶುರು

ಕೊರೊನಾ ವೈರಸ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಚಿತ್ರರಂಗ ನಿಧಾನವಾಗಿ ಯಥಾಸ್ಥಿತಿಗೆ ಮರಳುವತ್ತಾ ಹೆಜ್ಜೆ ಹಾಕಿದೆ. ಕೊವಿಡ್‌ ಕಾರಣದಿಂದ ಸ್ಥಗಿತವಾಗಿದ್ದ ಚಿತ್ರಗಳ ಶೂಟಿಂಗ್ ಈಗ ಒಂದೊಂದೆ ಆರಂಭವಾಗುತ್ತಿದೆ. ಕನ್ನಡ ಬಹುನಿರೀಕ್ಷೆಯ ಚಿತ್ರ ಕೆಜಿಎಫ್ ಸಹ ಅದಾಗಲೇ ಶೂಟಿಂಗ್ ಶುರು ಮಾಡಿದೆ ಎಂದು ಹೇಳಲಾಗಿತ್ತು. ಚಿತ್ರೀಕರಣ ಶುರು ಎನ್ನುವಂತಹ ಕೆಲವು ಫೋಟೋಗಳು ಸಹ ವೈರಲ್ ಆಗಿತ್ತು. ವಾಸ್ತವ ಏನಪ್ಪಾ ಅಂದ್ರೆ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ. ಯಾವಾಗ ಶೂಟಿಂಗ್ ಎಂಬ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ. ಅಸಲಿ ದಿನಾಂಕ ಬಹಿರಂಗವಾಗಿದೆ. ಮುಂದೆ ಓದಿ…. ಅನಾರೋಗ್ಯ ಹಿನ್ನಲೆ ನಟನೆಗೆ ಸಂಜಯ್ ದತ್ ಬ್ರೇಕ್: ಹಾಗಾದರೆ ‘KGF-2’ ಕಥೆ ಏನು? ಆಗಸ್ಟ್ 26ಕ್ಕೆ ಶೂಟಿಂಗ್ ಶುರು ಕೆಜಿಎಫ್ ಚಾಪ್ಟರ್ 2 ಚಿತ್ರದ ಶೂಟಿಂಗ್ ಇನ್ನೂ ಆರಂಭವಾಗಿಲ್ಲ. ಆಗಸ್ಟ್ 26 ರಿಂದ ಮತ್ತೆ ಚಿತ್ರಕರಣ ಪ್ರಾರಂಭವಾಗಲಿದೆ ಎಂದು ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಇಂದು ಬೆಳಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ಈ ಫೋಟೋ ಹಳೆಯದು! ಇತ್ತೀಚಿಗಷ್ಟೆ ಸೋಶಿಯಲ್ ಮೀಡಿಯಾದಲ್ಲಿ ಕೆಜಿಎಫ್ ಚಿತ್ರದ ಹಳೆಯ ಫೋಟೋ ವೈರಲ್ ಆಗಿತ್ತು. ಇದರಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಶೂಟಿಂಗ್ ಸೆಟ್‌ಗೆ ಹೋಗುತ್ತಿರುವ ದೃಶ್ಯ ಇದೆ. ಹಾಗಾಗಿ, ಕೆಜಿಎಫ್ ಚಿತ್ರೀಕರಣ ಆರಂಭವಾಗಿದೆ ಎಂಬ ಅಂತೆ ಕಂತೆ ಹುಟ್ಟಿಕೊಂಡಿತ್ತು. ಆಗಸ್ಟ್ 15 ರಿಂದಲೇ ಚಿತ್ರೀಕರಣ ಆರಂಭವಾಗಿದೆ ಎಂದು ಹೇಳಲಾಗಿತ್ತು. ಇದೀಗ, ಆಗಸ್ಟ್ 26 ರಿಂದ ಎಂದು ಸ್ವತಃ ನಿರ್ಮಾಪಕರ ತಂಡವೇ ಅಧಿಕೃತ ಮಾಡಿದೆ.

Related Posts

error: Content is protected !!