- ಕಳೆದ ಆರು ತಿಂಗಳಿಂದಲೂ ಸಂಪೂರ್ಣ ಮಂಕಾಗಿದ್ದ ಕಲರ್ ಪುಲ್ ದುನಿಯಾ ಇದೀಗ ರಂಗೇರಲು ಸಜ್ಜಾಗಿದೆ.
ಹೌದು ಕೊರೊನಾ ಹಾವಳಿಯಿಂದ ಚಿತ್ರರಂಗ ಸಂಪೂರ್ಣ ಸ್ಥಗಿತಗೊಂಡಿತ್ತು. ಈಗ ಆ ಸಮಸ್ಯೆಯಿಂದ
ಮೆಲ್ಲನೆ ಹೊರ ಬರುತ್ತಿದೆ. ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಸಿನಿಮಾ ಮಂದಿ ಆಶಾಭಾವನೆಯಲ್ಲಿದ್ದಾರೆ. ಚಿತ್ರೀಕರಣ ಇಲ್ಲವಾಗಿ ಕಂಗೆಟ್ಟಿದ್ದ ತಂತ್ರಜ್ಞರ ಮೊಗದಲ್ಲೀಗ ಮಂದಹಾಸ ಬೇರೂರಿದೆ. ಶ್ರಾವಣ ಸಂಭ್ರಮದ ಜೊತೆ ಜೊತೆಯಲ್ಲೇ ಸಿನಿಮಾ ಚಟುವಟಿಕೆಗೂ ಚಾಲನೆ ಸಿಗುತ್ತಿರುವ ಖುಷಿಯಲ್ಲೇ ಸಿನಿಮಾ ಮಂದಿ ಅಚ್ಛಾದಿನ್ ನೋಡುವ ಹುಮ್ಮಸ್ಸಿನಲ್ಲಿದ್ದಾರೆ.
ಕೇಂದ್ರ ಸರ್ಕಾರ ಸೆಪ್ಟೆಂಬರ್ ವೇಳೆಗೆ ಥಿಯೇಟರ್ ಆರಂಭಕ್ಕೆ ಹಸಿರು ನಿಶಾನೆ ತೋರುವ ಉತ್ಸುಕತೆಯಲ್ಲಿದೆ. ಈಗಾಗಲೇ ಕೆಲ ಚಿತ್ರಗಳು ಚಿತ್ರೀಕರಣದಲ್ಲಿ ತೊಡಗಿವೆ. ಬಿಡುಗಡೆಗೆ ಸಜ್ಜಾಗಿದ್ದ ಸಿನಿಮಾಗಳು ಚಿತ್ರಮಂದಿರಗಳಿಲ್ಲದೆ ಸೊರಗಿದ್ದವು.ಈಗ ಚಿತ್ರಮಂದಿರಗಳು ಬಾಗಿಲು ತೆರೆಯುವ ಸೂಚನೆ ಸಿಕ್ಕಿದೆ. ಸ್ಟಾರ್ ಸಿನಿಮಾಗಳು ಮೊದಲು ಬಿಡುಗಡೆಯಾಗುವ ಮೂಲಕ ಸಿನಿ ಪ್ರೇಮಿಗಳನ್ನು ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಮಾಡಬೇಕಿದೆ. ಆ ಬಳಿಕ ಸಾಲುಗಟ್ಟಿರುವ ಅನೇಕ ಹೊಸಬರು ಹಳಬರು ಚಿತ್ರಮಂದಿರಗಳತಗತ ಮುಖ ಮಾಡಲಿದ್ದಾರೆ. ಅದೇನೆ ಇರಲಿ, ಕೊರೊನಾ ದೂರವಾಗಿ ಜನರು ಎಂದಿನಂತೆ ಬದುಕು ಸಾಗಿಸಿದರೆ ಎಲ್ಲವೂ ತಾನಾಗಿಯೇ ಸರಿಹೋಗಲಿದೆ. ಇದಕ್ಕೆ ಕಲರ್ ಫುಲ್ ದುನಿಯಾ ಕೂಡ ಹೊರತಲ್ಲ. ಆದಷ್ಟು ಬೇಗ ಚಿತ್ರಮಂದಿರಗಳಲ್ಲಿ ಸಿನಿಮಾಗಳು ಬಿಡುಗಡೆಯಾಗಿ ಜನರು ಕಿಕ್ಕಿರಿದು ಆಗಿನ ಸಂಭ್ರಮ ಮರುಕಳಿಸಲು ದೊಡ್ಡ ಪಾತ್ರ ವಹಿಸಬೇಕಿದೆ.