ಹಾರಲು ರೆಡಿಯಾದ ಚಿಟ್ಟೆ

     ಎಸ್ಎಲ್ಎನ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಿತವಾಗಿರುವ ‘ಚಿಟ್ಟೆ ಮ್ಯಾನ್’ ಚಿತ್ರ  ಗೌರಿ-ಗಣೇಶನ ಹಬ್ಬದ ಶುಭ ಸಂದರ್ಭದಲ್ಲಿ  ಇದೇ ಅ. 21 ರಂದು V4ಸ್ಟ್ರೀಮ್ OTT ನಲ್ಲಿ ವಿಶ್ವಾದ್ಯಂತ ತೆರೆ ಕಾಣುತ್ತಿದೆ.  ಸಮಾಜಘಾತುಕ ಮನಸುಳ್ಳ ವ್ಯಕ್ತಿಗಳು ನಮ್ಮ ಅಕ್ಕ ಪಕ್ಕದಲ್ಲೇ ಇದ್ದು ತಮ್ಮ  ಭವಿಷ್ಯವನ್ನು
ಹಾಳುಮಾಡಿಕೊಳ್ಳುವ  ಜೊತೆಗೆ  ಸಮಾಜದ ಮುಂದಿನ ಭವಿಷ್ಯ ರೂಪಿಸಬೇಕಾದ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಾರೆ. ಇಂತಹ ಕಿರಾತಕರನ್ನು ಸದೆಬಡೆಯಲು ಒಬ್ಬ ವ್ಯಕ್ತಿ ಚಿಟ್ಟೆಮ್ಯಾನ್ ಆಗಿ ರೂಪಾಂತರಗೊಂಡು ಅನ್ಯಾಯ ಅಕ್ರಮಗಳಿಗೆ ಅಡಿವಾಣ ಹಾಕುತ್ತಾನೆ ಇದು ಚಿಟ್ಟೆ ಮ್ಯಾನ್ ಚಿತ್ರದ ಕಥಾ ವಸ್ತುವಾಗಿದೆ ಎಂದು ತಿಳಿಸಿರುವ ನಿರ್ದೇಶಕ ಎಸ್ ಎಲ್ ಎನ್ ನರಸಿಂಹ ಸ್ವಾಮಿ ಅವರೇ ಚಿತ್ರ ನಿರ್ಮಾಣವನ್ನೂ ಮಾಡಿದ್ದಾರೆ. ಸಹಕಾರ ನಿರ್ದೇಶನ ಮುರಳಿ ಪ್ರಸಾದ್, ಹೆಚ್.ಪಿ. ನರಸಿಂಹಸ್ವಾಮಿ , ವೈಷ್ಣವಿ ತಿವಾರಿ , ನಿಸರ್ಗ , ಶಶಿ , ನಂದೀಶ್ ಮುಂತಾದವರು ನಟಿಸಿದ್ದಾರೆ. ಸುಮಾರು ೪೫ದಿನ ಬೆಂಗಳೂರು ಸುತ್ತಮುತ್ತ ಚಿಟ್ಟೆ ಮ್ಯಾನ್ ಚಿತ್ರವನ್ನು ಚಿತ್ರೀಕರಿಸಲಾಗಿದೆ.

Related Posts

error: Content is protected !!