ಅಭಿ ಮತ್ತು ಗ್ಯಾಂಗ್ ಗಜಾನನ ಹುಡುಗರ ಭರ್ಜರಿ ಲುಕ್

ನಮ್ ಗಣಿ ಬಿಕಾಂ ಪಾಸ್… ಈ ಸಿನಿಮಾ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಒಂದೊಳ್ಳೆಯ ಸಂದೇಶ ಇರುವ ಚಿತ್ರ ಕೊಟ್ಟಿದ್ದು ಯುವ ನಿರ್ದೇಶಕ ಅಭಿಷೇಕ್ ಶೆಟ್ಟಿ.
ಹೌದು ನಟನೆ ಹಾಗೂ ನಿರ್ದೇಶನ‌ಈ ಎರಡರಲ್ಲೂ ಅದ್ಭುತ ಕೆಲಸಗಾರ ಎಂಬ ನಂಬಿಕೆಯ ಜೊತೆ ಭವ್ಯ ನಿರೀಕ್ಷೆ ಹುಟ್ಟಿಸಿದ ಕನಸುಗಾರ. ಅಭಿಷೇಕ್ ಶೆಟ್ಟಿ ಗಿರುವ ಸಿನಿಮಾ ಅಭಿಮಾನ, ಪ್ರೀತಿ ಎಂಥದ್ದು ಎಂಬುದಕ್ಕೆ ಸದ್ಯ ಅಮೆಜಾನ್ ಪ್ರೈಮ್ ವಿಡಿಯೊ ದಲ್ಲಿ ಸಿಕ್ಕಾಪಟ್ಟೆ ವೀಕ್ಷಣೆ ಪಡೆಯುತ್ತಿರುವ ಸಿನಿಮಾ ಸಾಕ್ಷಿ.
ಈಗ ಡಿಸ್ಟಿಂಕ್ಷನ್ ಪಡೆದ ನಮ್ ಗಣಿ ಹೊಸ ಸಿನಿಮಾ ಮಾಡುತ್ತಿರೋದು ಗೊತ್ತೇ ಇದೆ. ಗಜಾನನ‌ ಗ್ಯಾಂಗ್ ಕಟ್ಟಿಕೊಂಡು
ತಮ್ಮ ಮುಂದಿನ‌ ಸಾಹಸಕ್ಕೆ ಹೆಜ್ಜೆ ಇಟ್ಟಿದ್ದಾರೆ. ಇವರ ಭರವಸೆಯ ಪ್ರಯತ್ನಕ್ಕೆ ನಿರ್ಮಾಪಕ ನಾಗೇಶ್ ಕುಮಾರ್ ಮತ್ತದೇ ನಂಬಿಕೆಯಲ್ಲಿ ಹಣ ಹಾಕುತ್ತಿದ್ದಾರೆ. ಈ ಗಜಾನನ ಗ್ಯಾಂಗ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹೊರ ಬಂದಿದೆ. ಮೊದಲ ಲುಕ್ ನಲ್ಲೇ ಮಜಾ ಎನಿಸುವ ಸಿನಿಮಾ ಇದು ಎಂಬ ನಿರೀಕ್ಷೆ ಹೆಚ್ಚಿಸಿದ್ದಾರೆ. ಈಗಷ್ಟೇ ಗ್ಯಾಂಗ್ ಕಟ್ಟಿಕೊಂಡು ಹೋರಾಡೋಕೆ ಸಜ್ಜಾಗಿದ್ದಾರೆ. ಅವರ ಗ್ಯಾಂಗ್ ಪ್ರಯತ್ನ ಯಶಸ್ವಿಯಾಗಲಿ. ಇಲ್ಲೂ ಡಿಸ್ಟಿಂಕ್ಷನ್ ಪಡೆಯಲಿ.

Related Posts

error: Content is protected !!