Categories
ಬ್ರೇಕಿಂಗ್‌ ನ್ಯೂಸ್

ಡಿಟೆಕ್ಟಿವ್‌ ದಿವಾಕರನ ಹೊಸ ಸಾಹಸ

ಇನ್ನೊಂದು ಕೇಸ್‌ ಮೂಲಕ ರಿಷಭ್‌ ಶೆಟ್ಟಿ ಎಂಟ್ರಿ

ಬೆಲ್‌ ಬಾಟಂ ಭಾಗ-2 ಸಜ್ಜು

ಬೆಲ್‌ ಬಾಟಂ…

ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಪಡೆದ ಸಿನಿಮಾ. ಜಯತೀರ್ಥ ನಿರ್ದೇಶನದ ಈ ಚಿತ್ರದಲ್ಲಿ ರಿಷಭ್‌ ಶೆಟ್ಟಿ ಹೀರೋ ಆಗಿದ್ದರು. ಹರಿಪ್ರಿಯಾ ನಾಯಕಿಯಾಗಿದ್ದರು. ಈ ಚಿತ್ರ ಯಾವಾಗ, ದೊಡ್ಡ ಯಶಸ್ಸು ಪಡೆಯಿತೋ, ಆಗಲೇ ಮತ್ತೊಂದು ಸಿನಿಮಾ ಮಾಡುವ ಕುರಿತು ನಿರ್ದೇಶಕ ಜಯತೀರ್ಥ ಮತ್ತು ಕಥೆಗಾರ ದಯಾನಂದ್‌ ಯೋಚಿಸಿದ್ದರು.

ಅದರಂತೆ, “ಬೆಲ್‌ ಬಾಟಂ-2” ಸಿನಿಮಾ ಬರಲಿದೆ ಎಂದು ಹೇಳಲಾಗಿತ್ತು. ಈಗ ಹೊಸ ಸಿನಿಮಾಗೆ ಎಲ್ಲಾ ತಯಾರಿಯೂ ನಡೆದಿದ್ದು, ಜನವರಿ 27ರಂದು ಚಿತ್ರದ ಶೀರ್ಷಿಕೆ ಅನಾವರಣಗೊಳ್ಳಲಿದೆ. ಅಧಿಕೃತವಾಗಿ ಬಿಡುಗಡೆಯಾಗುತ್ತಿರುವ ಚಿತ್ರದ ಶೀರ್ಷಿಕೆ ಏನೆಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಇಷ್ಟರಲ್ಲೇ ಟೈಟಲ್‌ ಹೊರಬರಲಿದ್ದು, ಚಿತ್ರದ ಇನ್ನಷ್ಟು ಮಾಹಿತಿಯನ್ನು ಹೊರಹಾಕಲಿದೆ ಚಿತ್ರತಂಡ.

Categories
ಬ್ರೇಕಿಂಗ್‌ ನ್ಯೂಸ್

ಗಣೇಶ್‌ ತ್ರಿಬಲ್‌ ರೈಡಿಂಗ್‌ನಲ್ಲಿ ಅದಿತಿ ಪ್ರಭುದೇವ

ಇಬ್ಬರು ನಾಯಕಿಯರ ಜೊತೆಯಾದ ಅದಿತಿ

ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಹೊಸ ಚಿತ್ರ “ತ್ರಿಬಲ್‌ ರೈಡಿಂಗ್‌ “ಗೆ ಚಾಲನೆ ಸಿಕ್ಕಿದ್ದು ಗೊತ್ತೇ ಇದೆ. ಈಗಾಗಲೇ ಆ ಚಿತ್ರಕ್ಕೆ ಇಬ್ಬರು ನಾಯಕಿಯರಿರುವ ವಿಷಯವೂ ಗೊತ್ತಿದೆ. ಈಗ ಮತ್ತೊಬ್ಬ ನಾಯಕಿಯ ಎಂಟ್ರಿಯಾಗಿದೆ. ಹೌದು,  ಮಹೇಶ್‌ ನಿರ್ದೇಶನದ ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಈಗಾಗಲೇ “ಜೊತೆ ಜೊತೆಯಲಿ” ಧಾರಾವಾಹಿ ಖ್ಯಾತಿಯ ಮೇಘನಾಶೆಟ್ಟಿ ಮತ್ತು “ಲವ್‌ ಮಾಕ್ಟೇಲ್‌” ಚಿತ್ರದಲ್ಲಿ ಗಮನ ಸೆಳೆದ  ಹುಡುಗಿ ರಚನಾ ಇಂದರ್ ಕೂಡ ಇದ್ದಾರೆ. ಈಗ ಅವರೊಂದಿಗೆ ಅದಿತಿ ಪ್ರಭುದೇವ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದಹಾಗೆ, “ತ್ರಿಬಲ್‌ ರೈಡಿಂಗ್‌” ಹೆಸರಿಗೆ ತಕ್ಕಂತೆ ಮೂವರು ನಾಯಕಿಯರನ್ನು ಹೊಂದಿದೆ. ಗಣೇಶ್‌ ಈಗ ಈ ಮೂವರು ನಾಯಕಿಯರನ್ನು ಕೂರಿಸಿಕೊಂಡು ಪಯಣ ಬೆಳೆಸಲು ಅಣಿಯಾಗಿದ್ದಾರೆ. ಇದೊಂದು ಹಾಸ್ಯದ ಜೊತೆಯಲ್ಲಿ ರೊಮ್ಯಾಂಟಿಕ್ ಲವ್ ಸ್ಟೋರಿಯನ್ನು ಹೊಂದಿದೆ. ಈ ಚಿತ್ರದಲ್ಲಿ ಸಾಧುಕೋಕಿಲಾ, ಕುರಿ ಪ್ರತಾಪ್, ರವಿಶಂಕರ್ ಸೇರಿದಂತೆ ಹಲವರು ಇದ್ದಾರೆ.

 

Categories
ಬ್ರೇಕಿಂಗ್‌ ನ್ಯೂಸ್

ಹೆಸರಿಡದ ಚಿತ್ರಕ್ಕೆ ವಸಿಷ್ಠ ಸಿಂಹ ಹೀರೋ!

ಕನ್ನಡದ ಜತೆಗೆ ತೆಲುಗಿನಲ್ಲೂ ಬ್ಯುಸಿಯಾದ ಚಿಟ್ಟೆ

ಚಿಟ್ಟೆ ಖ್ಯಾತಿಯ ನಟ  ವಸಿಷ್ಠ ಸಿಂಹ ಸಿಕ್ಕಾಪಟ್ಟೆ ಬ್ಯುಸಿ ಯಾಗಿದ್ದಾರೆ. ಕನ್ನಡದ ಜತೆಗೀಗ ಅವರು ತೆಲುಗಿನಲ್ಲೂ ಬಹು ಬೇಡಿಕೆ ನಟ. ಈ‌‌ಮಧ್ಯೆ ಕನ್ನಡದಲ್ಲೇ ಸಾಲು ಸಾಲು ಸಿನಿಮಾಗಳಿಗೆ ಹೀರೋ ಆಗುತ್ತಿದ್ದು, ಈಗ ಹೆಸರಿಡದ ಚಿತ್ರವೊಂದಕ್ಕೆ ಹೀರೋ ಆಗಿದ್ದು, ಅದು ಈ ತಿಂಗಳ ಕೊನೆಯಲ್ಲಿ ಶುರುವಾಗಲಿದೆಯಂತೆ.

ಚಿತ್ರದ ಶೀರ್ಷಿಕೆ ಗೌಪ್ಯವಾಗಿಟಿರುವ ಚಿತ್ರತಂಡ ಮಾಸಾಂತ್ಯಕ್ಕೆ ಮುಹೂರ್ತ ನಡೆಸಿ, ಚಿತ್ರದ ಶೀರ್ಷಿಕೆ ಅನಾವರಣ ಗೊಳಿಸುವುದಾಗಿ‌ ತಿಳಿಸಿದೆ. ಜನರತ್ನ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜನಾರ್ದನ ವಿ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ವಚನ್ ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕ ಪವನ್ ಕುಮಾರ್ ಜೊತೆಗೆ ‘ಲೂಸಿಯಾ’ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ವಚನ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

ಅನೂಪ್ ಸೀಳಿನ್ ಸಂಗೀತವಿರುವಈ ಚಿತ್ರಕ್ಕೆ ‘ಮಫ್ತಿ’ ಖ್ಯಾತಿಯ ನವೀನ್ ಕುಮಾರ್  ಛಾಯಾಗ್ರಹಣವಿದೆ. ‘ಟಗರು’ ಖ್ಯಾತಿಯ ಮಾಸ್ತಿ  ಸಂಬಾಷಣೆ ಬರೆಯುತ್ತಿದ್ದಾರೆ. ವಸಿಷ್ಠ ಸಿಂಹ ನಾಯಕರಾಗಿ ನಟಿಸುತ್ತಿರುವ ಈ‌ ಚಿತ್ರದ ಮುಖ್ಯ ಭೂಮಿಕೆಯಲ್ಲಿ ‌ಖ್ಯಾತ ನಟ ಕಿಶೋರ್ ಕೂಡ ಕಾಣಿಸಿಕೊಳುತ್ತಿದ್ದಾರೆ. ಸಾಕಷ್ಟು ಪ್ರಸಿದ್ದ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ಸದ್ಯದಲ್ಲೇ ತಿಳಿಸಲಾಗುವುದು.

Categories
ಬ್ರೇಕಿಂಗ್‌ ನ್ಯೂಸ್

ತ್ರಿಬಲ್‌ ರೈಡಿಂಗ್ ಹೊರಟ ಗಣಿ…

ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಹೊಸ ಚಿತ್ರ “ತ್ರಿಬಲ್‌ ರೈಡಿಂಗ್‌ “ಗೆ ಚಾಲನೆ ಸಿಕ್ಕಿದೆ. ಮಹೇಶ್‌ ಈ ಚಿತ್ರದ ನಿರ್ದೇಶಕರು.

 

Categories
ಬ್ರೇಕಿಂಗ್‌ ನ್ಯೂಸ್

ಉಪ್ಪಿ ಹುಟ್ಟುಹಬ್ಬಕ್ಕೆ ‘ಕಬ್ಜ’ ಚಿತ್ರದ ಥೀಮ್ ಪೋಸ್ಟರ್ ಲಾಂಚ್

– ಸೆಪ್ಟೆಂಬರ್ 17 ಕ್ಕೆ  ನಟ ಉಪೇಂದ್ರ ಹುಟ್ಟು ಹಬ್ಬ

-‘ ಕಬ್ಜ’ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ.

– ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಬಿಡುಗಡೆ

–  ಉಪೇಂದ್ರ  ಅಭಿನಯ ಹಾಗೂ ಆರ್ . ಚಂದ್ರು ಕಾಂಬಿನೇಷನ್ ಸಿನಿಮಾ

– ಅದ್ದೂರಿ ವೆಚ್ಚದ ಪ್ಯಾನ್ ಇಂಡಿಯಾ ಚಿತ್ರ

– ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ ಚಿತ್ರ

– ಸೆ.17ರ ಸಂಜೆ 5 ಕ್ಕೆ ಕಬ್ಜ ಥೀಮ್ ಪೋಸ್ಟರ್ ಲಾಂಚ್

– ಬೆಂಗಳೂರು, ಹೈದರಾಬಾದ್ ಸೇರಿ ಹಲವೆಡೆ ಚಿತ್ರೀಕರಣ

–  ಜಗಪತಿ ಬಾಬು, ರಾಹುಲ್ ಜಗತಪ್,ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು ಸೇರಿ ದೊಡ್ಡ ತಾರಾಗಣ ಇರುವ ಚಿತ್ರ.

Categories
ಬ್ರೇಕಿಂಗ್‌ ನ್ಯೂಸ್ ಸಿನಿ ಸುದ್ದಿ

ಕಿಚ್ಚನ ಜೊತೆ ಜೋಗಿ ಪ್ರೇಮ್‌ ಚಿತ್ರ ಈ ಬಾರಿ ಸ್ಪೆಷಲ್‌ ಸ್ಟೋರಿ ಜೊತೆ ಬರ್ತಾರಂತೆ ಪ್ರೇಮ್

ಶ್ರೀಲೀಲಾ
ಸುದೀಪ್‌ ಈಗ ಬಿಝಿ. ಅದು ಎಲ್ಲರಿಗೂ ಗೊತ್ತಿದೆ. ಅವರ ಅಭಿನಯದ “ಕೋಟಿಗೊಬ್ಬ 3′ ಬಿಡುಗಡೆಗೆ ಸಜ್ಜಾಗಿದೆ. ಇನ್ನು ಅನೂಪ್‌ ಭಂಡಾರಿ ನಿರ್ದೇಶನದ, ಜಾಕ್‌ ಮಂಜು ನಿರ್ಮಾಣದ “ಫ್ಯಾಂಟಮ್‌” ಕೂಡ ಚಿತ್ರೀಕರಣದಲ್ಲಿದೆ. ಇದರ ನಡುವೆ ಒಂದಷ್ಟು ಹೊಸ ಸಿನಿಮಾಗಳೂ ಕೂಡ ಸೆಟ್ಟೇರಲು ಸಜ್ಜಾಗಿವೆ. ವಿಶೇಷವೆಂದರೆ, ಸುದೀಪ್‌ ಮತ್ತೊಮ್ಮೆ ಜೋಗಿ ಪ್ರೇಮ್‌ ಜೊತೆ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದಾರೆ.
ಹೌದು, ಈ ವಿಷಯವನ್ನು ಸ್ವತಃ ಜೋಗಿ ಪ್ರೇಮ್‌ ಸ್ಪಷ್ಟಪಡಿಸಿದ್ದಾರೆ. ಸುದೀಪ್‌ ಹುಟ್ಟುಹಬ್ಬಕ್ಕೆ ಟ್ವಿಟ್ಟರ್‌ನಲ್ಲಿ ಶುಭಕೋರಿದ್ದ ಪ್ರೇಮ್‌ ಅವರಿಗೆ ಸುದೀಪ್‌ ಅಭಿಮಾನಿಗಳು ತಮ್ಮ ಮುಂದಿನ ಸಿನಿಮಾ ಯಾವಾಗ, ಯಾರ ಜೊತೆ ಎಂದು ಪ್ರಶ್ನಿಸಿದ್ದರು. ಅವರ ಪ್ರಶ್ನೆಗಳಿಗೆ ಪ್ರೇಮ್‌, ನಾನು ಸುದೀಪ್‌ ಜೊತೆ ಮತ್ತೊಂದು ಸಿನಿಮಾ ಮಾಡಲಿದ್ದೇನೆ ಎಂದಿದ್ದಾರೆ. “ದಿ ವಿಲನ್‌” ಬಳಿಕ ಮಾಡುತ್ತಿರುವ ಸಿನಿಮಾ ಇದಾಗಿರುವುದರಿಂದ ಕಥೆ, ಪಾತ್ರ ಎಲ್ಲವೂ ವಿಶೇಷವಾಗಿರಲಿದೆ ಎಂಬುದು ಪ್ರೇಮ್‌ ಸ್ಪಷ್ಟನೆ. ಹೊಸ ಚಿತ್ರದಲ್ಲಿ ಸುದೀಪ್‌ ಅವರ ಗೆಟಪ್‌ ವಿಭಿನ್ನವಾಗಿರಲಿದೆ ಎಂದಿದ್ದಾರೆ ಪ್ರೇಮ್.‌
ಸದ್ಯಕ್ಕೆ ಪ್ರೇಮ್‌ ಅವರು ರಕ್ಷಿತಾ ಸಹೋದರ ರಾಣಾ ಅವರ “ಏಕ್‌ ಲವ್‌ ಯಾ” ಸಿನಿಮಾದತ್ತ ಗಮನ ಹರಿಸಿದ್ದಾರೆ. ಆ ಚಿತ್ರದಲ್ಲಿ ರಿಷಾ ಮತ್ತು ರಚಿತಾ ನಾಯಕಿಯರು. ರಕ್ಷಿತಾ ತಮ್ಮ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅದೇನೆ ಇರಲಿ, ಜೋಗಿ ಪ್ರೇಮ್‌ ಪುನಃ ಸುದೀಪ್‌ ಜೊತೆ ಸಿನಿಮಾ ಮಾಡುವ ವಿಷಯ ಹೊರಹಾಕಿದ್ದಾರೆ. ಆದರೆ, ಆ ಚಿತ್ರ ಯಾವಾಗ ಸೆಟ್ಟೇರಲಿದೆ, ಯಾರು ನಿರ್ಮಾಣ ಮಾಡಲಿದ್ದಾರೆ. ಕಥೆ ಹೇಗಿರಲಿದೆ. ಸುದೀಪ್‌ ಅವರ ಗೆಟಪ್‌ ಹೇಗೆಲ್ಲಾ ಇರಲಿದೆ. ಇಲ್ಲೂ ಸುದೀಪ್‌ ಜೊತೆ ಬೇರೆ ಸ್ಟಾರ್‌ ಯಾರಾದರೂ ಇರುತ್ತಾರಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಸದ್ಯ ಉತ್ತರವಿಲ್ಲ. ಹೊಸ ಸಿನಿಮಾ ಮಾಡ್ತೀನಿ ಅಂತ ಪ್ರೇಮ್‌ ಹೇಳಿದ್ದಾರೆ. ಆದರೆ, ಅದು ಸೆಟ್ಟೇರಿ, ಶೀರ್ಷಿಕೆ ಅನೌನ್ಸ್‌ ಮಾಡಿ, ಟೀಮ್‌ ಸೆಟ್‌ ಮಾಡುವವರೆಗೂ ಪ್ರೇಮ್‌ ಇನ್ನೂ ಸಾಕಷ್ಟು ಸರ್‌ ಪ್ರೈಸ್‌ ನ್ಯೂಸ್‌ಗಳನ್ನು ಕೊಡುತ್ತಲೇ ಇರುತ್ತಾರೆ ಎಂಬುದಂತೂ ಸತ್ಯ.

Categories
ಬ್ರೇಕಿಂಗ್‌ ನ್ಯೂಸ್

ಯೋಗಿಗೆ ಅದೃಷ್ಟ

– ಲೂಸ್ ಮಾದ ಯೋಗಿಗೆ ಖುಲಾಯಿಸಿದ ಅದೃಷ್ಟ

– ದೇವೇಂದ್ರ ಬಡಿಗೇರ್ ಹೊಸ ಸಿನಿಮಾಕ್ಕೆ ನಾಯಕ ನಟ

–  ಯೋಗಿಗೆ ಜೋಡಿಯಾಗಿ ಗೊಂಬೆಗಳ ಖ್ಯಾತಿಯ ಚೆಲುವೆ

– ಪಾವನಾ ಗೌಡ ನಾಯಕಿಯಾಗಿ ಆಯ್ಜೆ

– ಡಿಸೆಂಬರ್ ಹೊತ್ತಿಗೆ ಸಿನಿಮಾ‌ಶುರು

Categories
ಬ್ರೇಕಿಂಗ್‌ ನ್ಯೂಸ್

ಕಿರಿಕ್‌ ಶಂಕರನ ಹಾಡಿಗೆ ಭರ್ಜರಿ ಮೆಚ್ಚಗೆ- ಇದು ಲೂಸ್ ಮಾದ ಯೋಗಿಯ ಚಿತ್ರ

ಲೂಸ್ ಮಾದ ಯೋಗಿ ಅಭಿನಯದ ಕಿರಕ್ ಶಂಕರ್ ಸಿನಿಮಾ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ.
ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಗಣೇಶ ಹಬ್ಬದಂದು ಲಿರಿಕಲ್ ವಿಡಿಯೊ ಬಿಡುಗಡೆ ಮಾಡಿದೆ.


ಎಂ.ಎನ್. ಕುಮಾರ್ ನಿರ್ಮಾಣದ ಈ ಚಿತ್ರವನ್ನು ಅನಂತ್ ರಾಜು ನಿರ್ದೇಶನ ಮಾಡಿದ್ದಾರೆ. ವೀರ್ ಸಮರ್ಥ್ ಸಂಗೀತ ಇರುವ ‘ದರ್ಬಾರ್ ದರ್ಬಾರ್ ನಮ್ದೇ ದರ್ಬಾರ್ ದರ್ಬಾರ್…’ ಎಂಬ ಹಾಡನ್ನು ರಾಮ್ ನಾರಾಯಣ್ ಬರೆದಿದ್ದಾರೆ. ಪಕ್ಕಾ ಮಾಸ್ ಫೀಲ್ ಇರುವ ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದುಕೊಂಡಿದೆ.

Categories
ಬ್ರೇಕಿಂಗ್‌ ನ್ಯೂಸ್

ದೇವಕಿ ನಿರ್ದೇಶಕನ ಮೊದಲ ನಿರ್ಮಾಣದ‌ ಚಿತ್ರ-ಅಗಸ್ಟ್ 24ಕ್ಕೆ ಡಾಲಿ ಟೈಟಲ್ ಲಾಂಚ್

ಯುವ ನಿರ್ದೇಶಕ ಮಮ್ಮಿ ಹಾಗೂ ದೇವಕಿ ಖ್ಯಾತಿಯ ಲೋಹಿತ್ ತಮ್ಮ ಫ್ರೈಡೇ ಫಿಲ್ಮ್ಸ್ ಮೂಲಕ ತಯಾರಿಸುತ್ತಿರುವ ಹೊಸ ಚಿತ್ರಕ್ಕೆ ಚಾಲನೆ ಸಿಗುತ್ತಿದ್ದು,
ಗಣೇಶ ಚತುರ್ಥಿಯ ಈ ಶುಭ ದಿನದಂದು ಮೊದಲ ನಿರ್ಮಾಣದ‌ಚಿತ್ರ ಘೋಷಿಸಲು ತಂಡ‌ ಉತ್ಸುಕತೆ ತೋರಿದೆ. ಅಗಸ್ಟ್ 24 ರಂದು ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳ್ಳಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಡಾಲಿ ಲ ಧನಂಜಯ ಅವರು ಚಿತ್ರದ ಟೈಟಲ್ ಲಾಂಚ್ ಮಾಡಲಿದ್ದಾರೆ.
ಅಂದಹಾಗೆ, ಲೋಹಿತ್ ಅವರ ಮೊದಲ ನಿರ್ಮಾಣದ ಚಿತ್ರದಲ್ಲಿ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಕಾಣಿಸಿಕೊಳ್ಳುತ್ತಿದ್ದಾರೆ.